ಹಾಸನ

ರಾಮ್‌ದೇವ್‌ಗಡೀಪಾರಿಗೆ ನಾನಾ ಸಂಘಟನೆಗಳ ಆಗ್ರಹ

Published On :

ಹಾಸನ: ದಲಿತ ಹೆಣ್ಣುಮಕ್ಕಳನ್ನು ವೇಶ್ಯೆಯರಂತೆ ಬಿಂಬಿಸಿ ಮಾತನಾಡಿರುವ ಡೊಂಗಿ ಗುರು ಬಾಬಾ ರಾಮ್‌ದೇವ್ ಅವರನ್ನು ಈ ದೇಶದಿಂದ ಗಡಿಪಾರು ಮಾಡಿ ಅವನ ಮೇಲೆ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಬೇಕೆಂದು ದಲಿತ ಸಾಹಿತ್ಯ ಪರಿಷತ್, ಸಮತಾ ಸೈನಿಕ ದಳ ಒತ್ತಾಯಿಸಿದೆ, ಪಿಯುಸಿಎಲ್ ಆಗ್ರಹಿಸಿದೆ.
ರಾಮ್‌ದೇವ್ ಒಬ್ಬ ಕಳ್ಳನಾಗಿದ್ದು ಯೋಗದ ಹೆಸರಲ್ಲಿ ಸಾವಿರಾರು ಕೋಟಿ ರು.  ಲೂಟಿ ಮಾಡಿ ಸರ್ಕಾರಕ್ಕೆ ತೆರಿಗೆ ವಂಚಿಸಿದ್ದಾನೆ. ಅವನು ಆರ್‌ಎಸ್‌ಎಸ್ ಏಜೆಂಟ್ ಹಾಗೂ ಕೋಮುವಾದಿ. ಇದೀಗ ದಲಿತ ಹೆಣ್ಣುಮಕ್ಕಳನ್ನು ವೇಶ್ಯೆಯರಿಗೆ ಹೋಲಿಸಿ ಮಾತನಾಡುವ ಮೂಲಕ ದಲಿತರ ಭಾವನೆಯನ್ನು ಕೆರಳಿಸಿದ್ದಾನೆ. ಕೂಡಲೇ ಅವನನ್ನು ಈ ದೇಶದಿಂದ ಗಡಿಪಾರು ಮಾಡಬೇಕು ಎಂದು ದಸಾಪ ಹಾಗೂ ಪಿಯುಸಿಎಲ್ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್, ಮತ್ತು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಆರ್‌ಪಿಐ ಸತೀಶ್ ಒತ್ತಾಯಿಸಿದ್ದಾರೆ.
ಜೈಲಿಗೆ ಕಳುಹಿಸಿ: ರಾಮ್‌ದೇವ್ ಭಾರತದಾದ್ಯಂತ ಅಧ್ಯಾತ್ಮದ ಹೆಸರಲ್ಲಿ ಯೋಗ ಕೇಂದ್ರಗಳನ್ನು ನಡೆಸುತ್ತಿದ್ದು ಇಲ್ಲಿ ಅಕ್ರಮ ಹಣ ಇಟ್ಟಿದ್ದು, ಅವನ ಒಟ್ಟು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಆತನನ್ನು ಜೈಲಿಗೆ ಕಳಿಸಬೇಕು ಎಂದು ಆಗ್ರಹಿಸಿದ್ದಾರೆ.
ದಲಿತರ ಬಗ್ಗೆ ಕೇವಲವಾಗಿ ಮಾತನಾಡಿರುವ ಡೊಂಗಿ ಬಾಬಾ ಒಬ್ಬ ಈ ದೇಶಕ್ಕೆ ಕ್ರಿಮಿ ಇದ್ದಂತೆ. ಕಪ್ಪು ಹಣದ ವಿರುದ್ಧ ಮಾತನಾಡುತ್ತಿದ್ದ ಬಾಬಾ ಕಪ್ಪು ಹಣ ಸಂಗ್ರಹಕಾರನಾಗಿದ್ದಾನೆ. ಆತನನ್ನು ಕೂಡಲೇ ಬಂಧಿಸಿ ಜೈಲಿಗಟ್ಟದಿದ್ದರೆ ಈ ದೇಶದ ದಲಿತರ ಕೈಗೆ ಸಿಕ್ಕಿ ಸಾಯುವುದರಲ್ಲಿ ಅನುಮಾನ ಇಲ್ಲ. ಸರಕಾರ ಕೂಡಲೇ ಆತನ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಆತ ಯೋಗ ನಡೆಸುವ ಎಲ್ಲಾ ಕೇಂದ್ರಗಳ ಮೇಲೆ ದಾಳಿ ನಡೆಸಲಾಗುವುದು.
ಕೂಡಲೇ ಬಂಧಿಸಿ: ಈ ಸಂದರ್ಭ ಅನಾಹುತಗಳಾದಲ್ಲಿ ಸರಕಾರವೇ ಹೊಣೆ ಹೊರಬೇಕಾಗುವುದು. ಈಗಾಗಲೇ ಆತನ ವಿರುದ್ಧ 6 ಪ್ರಕರಣ ದಾಖಲಾಗಿದ್ದರೂ ಈವರೆಗೆ ಆತನನ್ನು ಬಂಧಿಸದಿರುವುದು ದುರಂತ. ಅವನೊಬ್ಬ ಮೋದಿ ಚೇಲಾ ಆಗಿದ್ದು ಜನರಲ್ಲಿ ಕೋಮುಭಾವನೆ ಬಿತ್ತುತ್ತಿದ್ದಾನೆ.  ಈ ಕೂಡಲೇ ಆತನನ್ನು ಬಂಧಿಸಬೇಕು ಎಂದು ಅವರು ತಿಳಿಸಿದರು.
ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಆತನ ವಿರುದ್ಧ ದಾಖಲಾಗಿರುವ ಪ್ರಕರಣದ ಆಧಾರದ ಮೇಲೆ ಆತನನ್ನು ಬಂದಿಸಲು ಮುಂದಾಗಬೇಕು ಎಂದು ಸಂಘಟನೆಯ ಮುಖಂಡರಾದ ನಿಟ್ಟೂರು ಸ್ವಾಮಿ, ರಮೇಶ್ ಅಂಬೇಡ್ಕರ್ ನಗರ, ಮಧು ನಿಟ್ಟೂರು, ಹೇಮಂತ್ ಆಡುವಳ್ಳಿ. ಮೋಹನ್ ಮೂತಿಕೆರೆ ಸೋಮು ದಂಡೋರ ನಿರ್ಮಲ ನಗರ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.