ಹಾಸನ

ಜಿಲ್ಲಾ ವಕೀಲರ ಸಂಘಕ್ಕೆ ಚಂದ್ರಶೇಖರ್ ಅಧ್ಯಕ್ಷ

Published On :

ಹಾಸನ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಬಿ. ಚಂದ್ರಶೇಖರ್ ಗುರುವಾರ ನಡೆದ ಚುನಾವಣೆಯಲ್ಲಿ  ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕೆ.ಎಚ್. ತಿಮ್ಮರಾಜು, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಟಿ. ಪ್ರಸನ್ನ, ಜಂಟಿ ಕಾರ್ಯದರ್ಶಿಯಾಗಿ ಕೆ.ಆರ್. ಜಯಲಕ್ಷ್ಮೀ, ಖಚಾಂಚಿಯಾಗಿ ಎಚ್.ಆರ್. ರಮೇಶ್ ಚುನಾಯಿತರಾದರು. 562 ಮತಗಳ ಪೈಕಿ 530 ಮತಗಳು ಚಲಾವಣೆಯಾಗಿದ್ದವು. ಚುನಾವಣಾಧಿಕಾರಿಯಾಗಿ ಬಿ.ಸಿ. ನಟರಾಜ್ ಕಾರ್ಯ ನಿರ್ವಹಿಸಿದರು.



ಕಾಫಿಯಲ್ಲಿ ರೋಗ ನಿಯಂತ್ರಣ ಕ್ರಮಗಳು
ಹಾಸನ: ಪ್ರಸ್ತುತ ವರ್ಷದಲ್ಲಿ ಹೂವಿನ ಮಳೆಯು 2-3 ಹಂತಗಳಲ್ಲಿ ಬಂದಿದ್ದು, ವಿಶೇಷವಾಗಿ ರೋಬಸ್ಟ್‌ನಲ್ಲಿ 2-3 ಸುತ್ತುಗಳಲ್ಲಿ ಹೂವಾಗಿದ್ದು, ಬೇರೆ ಬೇರೆ ಗಾತ್ರದ ಕಾಯಿಗಳಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಒಳ್ಳೆಯ ಮಳೆಯಾಗಿದೆ. ಆದರೆ ಮುಂಗಾರು ಪ್ರಾರಂಭವಾಗುವುದು ವಿಳಂಬವಾಗಿದೆ ಎಂದು ಕಾಫಿ ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ, ಮುಂಗಾರು ಬಿಡುವಾಗುವ ತನಕ ಶಿಫಾರಸು ಮಾಡಿದ ಯಾವುದೇ ಶಿಲೀಂದ್ರ ನಾಶಕಗಳನ್ನು ಸಿಂಪಡಿಸಲು ಸಾದ್ಯವಾಗುವುದಿಲ್ಲ. ಆದ್ದರಿಂದ ರೋಗ ಹರಡುವುದನ್ನು ತಪ್ಪಿಸಲು ಮತ್ತು ಫಸಲು ನಷ್ಟ ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ತೊಟ್ಟಿಲುಗುಂಡಿ, ನೀರಿನ ಚರಂಡಿಗಳನ್ನು ಶುಚಿಗೊಳಿಸಿ ನೀರು ಬಸಿದು ಹೋಗುವಂತೆ ಮಾಡುವ ಮೂಲಕ ಗಿಡಗಳ ಬೇರುಗಳ ಉಸಿರಾಟಕ್ಕೆ ಅವಕಾಶ ಕಲ್ಪಿಸುವುದು. ಚುರುಕಾದದ್ಯುತಿ ಸಂಶ್ಲೇಷಣಾಕ್ರಿಯೆಗಾಗಿ ಸಾಕಷ್ಟು ಬೆಳಕನ್ನು ಒದಗಿಸಲು, ರೋಗಪಿಡುಗು ಬಾಧೆಯನ್ನು ನಿಯಂತ್ರಿಸಲು  ಕೆಳ ಹಂತದ ನೆರಳನ್ನು ನಿಯಂತ್ರಿಸುವುದು. ಒಂದು ವೇಳೆ ಕಪ್ಪು ಕೊಳೆರೋಗ,ತೊಟ್ಟು ಕೊಳೆ ರೋಗ ಕಂಡುಬಂದಲ್ಲಿ ಪ್ರಾರಂಭಿಕ ಹಂತದ ಬೆಳವಣಿಗೆಯ ಶಿಲೀಂಧ್ರದ ದಾರಗಳೊಂದಿಗೆ ರೋಗಪೀಡಿತ ಎಲೆಗಳು ಮತ್ತು ಕಾಯಿಗಳನ್ನು ತೆಗೆಯಬೇಕು ಎಂದು ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.