ಹಾಸನ

'ಎಲ್ಲರಿಗೂ ಕನ್ನಡ ತಲುಪುವಂಥ ಕಾರ್ಯಕ್ರಮ ರೂಪಿಸಬೇಕು'

Published On :

ಬೇಲೂರು: ಕನ್ನಡದ ನಾಡು ನುಡಿ ಸಾಹಿತ್ಯ ಬಗ್ಗೆ ಎಲ್ಲ ವರ್ಗದವರಿಗೂ ತಲುಪುವಂತಹ  ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಂಘ ಸಂಸ್ಥೆ ಹಾಗೂ ಸಂಘಟನಗಳು ಮುಂದಾಗಬೇಕು ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ಅನಂತು ತಿಳಿಸಿದರು.
ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ತಾಲೂಕು ಅಂಗವಿಕಲರ ಅಭ್ಯುದಯ ಸಂಘದ  ಪ್ರಾಯೋಜಕತ್ವದಲ್ಲಿ ಸೋಮುವಾರ ನಡೆದ 16ನೇ ತಿಂಗಳ ಮನೆ ಮನೆ ಸಾಹಿತ್ಯ ಗೋಷ್ಠಿಯ ಉಪನ್ಯಾಸ, ಸ್ವರಚಿತ ಕವನ ವಾಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.  
ಶ್ಲಾಘನೀಯ: ಕನ್ನಡ ಕಾರ್ಯಕ್ರಮಗಳನ್ನು  ಪ್ರತಿಬಾರಿ ಪಟ್ಟಣ ಪ್ರದೇಶದ ಒಂದೆರಡು ಜಾಗದಲ್ಲಿ ಮಾತ್ರ ಹಮ್ಮಿಕೊಳ್ಳುವುದನ್ನು ಬಿಟ್ಟು ಕಡುಬಡವರು ವಾಸಿಸುವ ಕೊಳೆಗೇರಿ, ಸಣ್ಣ ಕೈಗಾರಿಕಾ ಪ್ರದೇಶಗಳು, ಪುರಿಬಟ್ಟಿಗಳಂತಹ ಶ್ರೀ ಸಾಮಾನ್ಯರು ವಾಸಿಸುವ ಪ್ರದೇಶದಲ್ಲಿ ನಡೆಬೇಕು. ಆ ಮೂಲಕ ಜನಸಾಮಾನ್ಯರಿಗೆ ಕನ್ನಡ ಭಾಷೆ, ನುಡಿ ಸಾಹಿತ್ಯದ ಬಗ್ಗೆ ಒಲವು ಮೂಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವೇಲಾಪುರಿ ವೇದಿಕೆ ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದರು.
ವೇಲಾಪುರಿ ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಚ್.ಎಂ. ದಯಾನಂದ್ ಮಾತನಾಡಿ, ಸಿನಿಮಾ, ನಾಟಕ ನೋಡುವುದರಿಂದ ಸಾಹಿತ್ಯ ಪ್ರೀತಿ ಬೆಳೆಯುವುದಿಲ್ಲ. ಸಾಹಿತ್ಯ ಪ್ರೇಮ ಬೆಳೆಸಲು ವೇದಿಕೆಯಿಂದ ಮನೆ ಮನೆ ಸಾಹಿತ್ಯ ಗೋಷ್ಠಿಯನ್ನು ನಡೆಸಲಾಗುತ್ತಿದೆ. ನಮ್ಮ ನಾಡಿನ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಇದ್ದಾಗ ಮಾತ್ರ ದೇಶಾಭಿಮಾನ ಹಾಗೂ ಭಾಷಾಭಿಮಾನ ಬೆಳೆಯುತ್ತದೆ ಎಂದು ಹೇಳಿದರು.
ತಾಲೂಕು ಅಭ್ಯುದಯ ಸಂಘದ ಅಧ್ಯಕ್ಷ ಬಿ.ವಿ. ಉಮೇಶ್, ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಇಂದಿರಮ್ಮ, ಗೌರವ ಕಾರ್ಯದರ್ಶಿ ಮ. ಶಿವಮೂರ್ತಿ, ಉದ್ಯಮಿ ಬಿ.ಎಸ್. ಪ್ರಕಾಶ್, ನಿವೃತ್ತ ಶಿಕ್ಷಕಿ ವನಜಾಕ್ಷಮ್ಮ ಇತರರು ಇದ್ದರು.  ತಾಲೂಕು ಕಲಾವಿದರ ಸಂಘದಿಂದ ನಾಡಿನ ನಾನಾ ಕವಿಗಳು ರಚಿಸಿದ ದೇಶಭಕ್ತಿ ಹಾಗೂ ಭಾವಗೀತೆ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.