ಹಾಸನ

ದೇಗುಲ ವಿಮಾನ ಗೋಪುರ ನವೀಕರಣ

Published On :

ಜಾವಗಲ್: ಜಾವಗಲ್‌ನಲ್ಲಿ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇಗುಲದ ವಿಮಾನ ಗೋಪುರ ನವೀಕರಣ, ಮಹಾಸಂಪ್ರೋಷಣೆ ಮತ್ತು ಕುಂಭಾಬಿಷೇಕ ಮಹೋತ್ಸವವು ಇತ್ತೀಚೆಗೆ ಸಂಭ್ರಮ, ಸಡಗರದಿಂದ ನಡೆಯಿತು.
ಪೂಜಾ ಕೈಂಕರ್ಯ ಮಂಗಳದ್ರವ್ಯಗಳನ್ನು ಸುಮಂಗಲಿಯರು ಮಂಗಳವಾದ್ಯಗಳೊಂದಿಗೆ ಉತ್ಸವಮೂರ್ತಿ ಮೆರವಣಿಗೆಯಲ್ಲಿ ದೇವಾಲಯಕ್ಕೆ ತರಲಾಯಿತು. ದೇವಾಲಯ ಪ್ರದಕ್ಷಿಣೆ, ವಿಶ್ವಕ್ಸೇನ್ ಆರಾಧನೆ , ಸ್ವಸ್ತಿಪುಣ್ಯಾಹ, ದೀಪಾರಾಧನೆ, ಪಂಚಗವ್ಯ, ರಕ್ಷಾಬಂಧನಾ ಪುಜೆ ಮತ್ತು ಆರಾಧನೆ, ಮೃತಿಕಾ ಸಂಗ್ರಹ ಮೇಧಿನಿ ಪೂಜೆ, ವಿವಿಧ ಹೋಮೋದಿಗಳು ನಡೆಯಿತು.
ಮಾರನೆ ದಿನ ಅದಿವಾಸ, ಬಿಂಬವಾಸ್ತು, ಪರ್ಯಾಗ್ನಿಕರಣ, ಹೋಮಾಧಿಗಳು ನಡೆದು ಉತ್ಸಹ ಮೂರ್ತಿ ಹಾಗೂ ವಿಮಾನ ಗೋಪುರ ನೂತನಕಳಸಕ್ಕೆ ಪಂಚಾಮೃತ ಅಭಿಷೇಕ ನಡೆಸಲಾಯಿತು. ವೈಖಾನಸ ಆಮರೀತ್ಯಾ ಎಂ. ರಾಜೀವ್ ಆಚಾರ್ಯ ತತ್ವದಲ್ಲಿ ನಾನಾ ಹೋಮಾಧಿ ಪೂಜಾ ಕೈಂಕರ್ಯಗಳು 108 ವಿವಿಧ ಗಿಡಮೂಲಿಕೆಗಳ ದ್ರವ್ಯ ಹೋಮದೊಂದಿಗೆ ಶಾಸ್ರೋಕ್ತವಾಗಿ ನಡೆಯಿತು.
ವೇದಮೂರ್ತಿ ಎಂ. ರಾಜೀವ್ ಮಾತನಾಡಿ, ಪಂಚಗವ್ಯಪ್ರಾಶನದ ಮಹತ್ವ ವಿವರಿಸಿದರು. ಪಾಂಚರಾತ್ರಿ ರೀತ್ಯದಲ್ಲಿ ತಂತ್ರಗಳಿಂದ ದೇವಾತರಾಧನೆ ನಡೆಯುತ್ತದೆ. ವೈಖಾನಸಾಗಮ ರೀತ್ಯ ವೇಧ, ಉಪನಿಷತ್, ಶಾಸ್ರ ಹಾಗೂ ಮಂತ್ರಗಳಿಂದ ಆರಾಧಿಸಿ ಸಂತೃಪ್ತಿಗೊಳಿಸಲಾಗುತ್ತದೆ ಎಂದರು.
ಪಂಚಾಮೃತ ಅಭಿಷೇಕ ಮಾಡಿ ತೀರ್ಥ ಪ್ರಾಶನಮಾಡುವುದರಿಂದ ಆರೋಗ್ಯ ಉತ್ತಮಗೊಂಡು, ಜ್ಞಾನ, ಶಕ್ತಿ, ಆಯಸ್ಸು ವೃದ್ಧಿಯಾಗುತ್ತದೆ ಎಂದರು. ಭೂದೇವಿ ಪೂಜೆಮಾಡಿ  ಮೃತ್ತಿಕೆ ಸಂಗ್ರಹಿಸಿ, ನಾನಾ ಧಾನ್ಯದ ಕಾಳುಗಳನ್ನು ಮಣ್ಣಿನೊಂದಿಗೆ ಬೆರೆಸಿ ನೀರು ಹಾಕುವುರಿಮದ ಮೊಳಕೆಯಾಗುತ್ತದೆ. ದೇವತೆಗಳು ಮೊಳಕೆ ಕಾಳುಗಳಿಂದ ಸಂತೃಪ್ತರಾಗಿ ಭೂಮಿದೇವಿ ಸಮತಪ್ತಳಾಗಿ ಮಳೆ, ಬೆಳೆ, ಶಾಂತಿ ನೀಡುತ್ತಾಳೆಂದರು.
ಪೂಜಾಕಾರ್ಯದಲ್ಲಿ ನಾನಾ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು, ಸಮಿತಿ ಸದಸ್ಯರು ಭಾಗವಹಿಸಿದ್ದರು.
ಭಾನುವಾರ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ  ಜಾವಗಲಲ್ಮೂಲದ ಸಖರಾಯಪಟ್ಟಣದ ಸಂಸ್ಕೃತ ವಿದ್ವಾನ್ ವೇ.ಬ್ರ.ಶ್ರೀ. ಎಸ್.ವಿ. ಶ್ಯಾಮಭಟ್ಟರು ಅನುವಾದಿಸಿರುವ ಶ್ರೀವ್ಯಾಸ ವಿರಚಿತ ಶ್ರೀನರಸಿಂಹ ಪುರಾಣದ ಶ್ರೀ ದಶಾವತಾರ ಚರಿತೆ  ಪುಸ್ತಕ ಬಿಡುಗಡೆ ಸಮಾರಂಭವನ್ನು ಏರ್ಪಡಿಸಪಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.