ಹಾಸನ

ಬಿಜೆಪಿಯಿಂದ ಜನಜಾಗರಣ ಅಭಿಯಾನ

Published On :

ಅರಸೀಕೆರೆ: ತಾಲೂಕು ಭಾರತೀಯ ಜನತಾ ಪಾರ್ಟಿ ಘಟಕದ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಮನೆ ಮನೆಗೆ ಭೇಟಿ ನೀಡಿ ಜನಜಾಗರಣ ಅಭಿಯಾನ ನಡೆಸಿದರು.
ಪಟ್ಟಣದ ನಾನಾ ವಾರ್ಡ್‌ಗಳಲ್ಲಿ ಅಭಿಯಾನ ನಡೆಸಿದ ತಂಡದಲ್ಲಿದ್ದ ತಾಲ್ಲೂಕು ಬಿಜೆಪಿ ಅಧ್ಯಕ್ಷ ಹರಳಕಟ್ಟ ರಮೇಶ್ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಸಕ್ರಿಯವಾಗಿದೆ.ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಈ ಪಕ್ಷ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮದ ತೆಗೆದುಕೊಳ್ಳದೇ ನಿರ್ಲಕ್ಷ್ಯ ಭಾವ ತಾಳಿದೆ ಎಂದರು.
ಕೇಂದ್ರದ ಈ ನಿರ್ಲಿಪ್ತಭಾವದಿಂದ ನಮ್ಮ ಸೈನಿಕರ ಜೀವ ಹಾನಿಯಾಗುತ್ತಿದ್ದು, ಇದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ಈ ದೇಶದೊಂದಿಗೆ ಬಾಂಗ್ಲಾ ಆಕ್ರಮ ನುಸುಳುಕೋರಿಗೆ ಭಾರತದಲ್ಲಿ ನೆಲೆಯೂರಲು ಪ್ರಮುಖ ಕಾರಣ.
ಪಾಠ ಕಲಿಸಿ: ಒಟ್ಟಿನಲ್ಲಿ ಭಾರತದ ಯಾವುದೇ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಕಾಂಗ್ರೆಸ್ ವಿಫಲವಾಗಿದ್ದು, ಮತದಾರರು ಮತ್ತು ನಾಗರಿಕರು ಎಚ್ಚೆತ್ತು ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಸಂಕಲ್ಪ ತೊಡಬೇಕು: ದುರ್ಬಲ ಆಡಳಿತ, ಇಚ್ಛಾಶಕ್ತಿ ಕೊರತೆ, ದೂರದೃಷ್ಟಿಯಿಲ್ಲದ ಚಿಂತನೆಗಳು, ಸ್ಷಷ್ಟತೆ ಇಲ್ಲದ ಯೋಜನೆಗಳಿಂದಾಗಿ ದೇಶವನ್ನು ಅತ್ಯಂತ ದುರ್ಬಲ ಸ್ಥಿತಿಗೆ ಕಾಂಗ್ರೆಸ್ ಸರ್ಕಾರ ತಳ್ಳಿಹಾಕುತ್ತಿದೆ. ಇಂತಹ ಆಡಳಿತವನ್ನು ಕೊನೆಗಾಣಿಸುವತ್ತ ದಿಟ್ಟ ಹೆಜ್ಜೆಯನ್ನು ಇಡುವ ಸಂಕಲ್ಪವನ್ನು ಮಾಡಬೇಕಾಗಿದೆ ಎಂದರು.
ಜನಜಾಗೃತಿ ಅಭಿಯಾನವು ಪಟ್ಟಣದ ಬಿಹೆಚ್ ರೆಸ್ತೆ, ಲಕ್ಷ್ಮೀಪುರ ಮತ್ತು ಕೃಷಿ ಮಾರುಕಟ್ಟೆ ಸೇರಿದಂತೆ ನಾನಾ ಬಡಾವಣೆಗಳ ಮನೆ ಮನೆಗಳಿಗೆ ತೆರಳಿ ಭಾವಿ ಪ್ರಧಾನಿ ಎಂದು ಬಿಂಬಿತವಾಗಿರುವ ನರೇಂದ್ರ ಮೋದಿ ಮತ್ತು ಬಿಜೆಪಿ ಬಗ್ಗೆ ಜಾಗೃತಿ ಮೂಡಿಸಿದರು.
ಅಭಿಯಾನದಲ್ಲಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಬೆಳಗುಂಬ ಲೋಕೇಶ್, ಮಹಿಳಾ ಮೋರ್ಚಾ ಜಯಲಕ್ಷ್ನೀ, ನಗರ ಕಾರ್ಯದರ್ಶಿ ಚೇತನ್ ಕುಮಾರ್, ಮುಖಂಡರಾದ ಪ್ರಭಾಕರ, ಈಶ್ವರ್ ಸಿಂಗ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.