ಹಾಸನ

ಇಂದು ಭವಿಷ್ಯ ನಿಧಿ ಅದಾಲತ್

Published On :

ಹಾಸನ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಕೇಂದ್ರ ಸರ್ಕಾರದ ಶ್ರಮ ಮಂತ್ರಾಲಯ ತನ್ನ ಉಪ ಕ್ಷೇತ್ರೀಯ ಕಚೇರಿಯನ್ನು ಚಿಕ್ಕಮಗಳೂರಿನ ಯಶೋರಾಮ್ ಚೇಂಬರ್ಸ್‌ನಲ್ಲಿ ಹೊಂದಿದ್ದು, ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಫೆ. 10ರಂದು  ಭವಿಷ್ಯನಿಧಿ ಅದಾಲತ್ ಅನ್ನು ಹಮ್ಮಿಕೊಂಡಿದ್ದಾರೆ.
ಭವಿಷ್ಯನಿಧಿ ಉದ್ಯೋಗದಾತರು ಮತ್ತು ಸದಸ್ಯರು ತಮ್ಮ ದೂರು ಗಳೇನಾದರೂ ಇದ್ದಲ್ಲಿ ತಮ್ಮ ಅರ್ಜಿಯನ್ನು ಖುದ್ದಾಗಿ ಅಂದು ಬೆಳಿಗ್ಗೆ 11ಕ್ಕೆ ನೋಂದಾಯಿಸಲು ಕೋ ದ್ದಾರೆ. ಎಲ್ಲಾ ದೂರುಗಳನ್ನು ಅದೇ ದಿನ ಇತ್ಯರ್ಥಪಡಿಸಲು ಶ್ರಮವಹಿಸಲಾಗುತ್ತದೆ. ನೋಂದಾಯಿಸಿದ ದೂರುಗಳನ್ನು 30 ದಿನಗಳೊಳಗೆ ಇತ್ಯರ್ಥ ಮಾಡಿಕೊಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ.
ಭವಿಷ್ಯನಿಧಿ ಮೊತ್ತವನ್ನು ಸದಸ್ಯರ ಖಾತೆಗೆ 24 ಗಂಟೆಗಳೊಳಗೆ ಜಮಾ ಮಾಡಲು ಹೊಸದಾಗಿ  ಸೌಲಭ್ಯ  ಒದಗಿಸಲಾಗಿದೆ. ಆದ್ದರಿಂದ ಎಲ್ಲಾ ಸದಸ್ಯರು ತಮ್ಮ ಅರ್ಜಿಯ ಜತೆಗೆ ತಮ್ಮ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿಯನ್ನು ಲಗತ್ತಿಸುವಂತೆ  ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತೆ ಪ್ರಭಾವತಿ ಜೋಶಿ ತಿಳಿಸಿದ್ದಾರೆ. ದೂ. 08262-234106 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.