ಹಾಸನ

ಲೋಕಸಭೆ ಚುನಾವಣೆ: ಅಧಿಕಾರಿಗಳಿಗೆ ತರಬೇತಿ

Published On :

ಹಾಸನ: 2014ನೇ ಸಾಲಿನಲ್ಲಿ ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುಣಾವಣೆಗೆ ಸಂಬಂಧಿಸಿದಂತೆ, ಮತಗಟ್ಟೆ ಅಧಿಕಾರಿಗಳ ನೇಮಕಾತಿಗೆ ಹಾಸನ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು, ಅರೆಸರ್ಕಾರಿ ನೌಕರರು ಮತ್ತು ಕೇಂದ್ರ ಸರ್ಕಾರಿ ನೌಕರರನ್ನು ನೇಮಕಾತಿ ಮಾಡಲು ಹೆಚ್.ಆರ್.ಎಂ.ಎಸ್. ಮೂಲಕ ಲಭ್ಯವಿರುವ ಸೇವಾ ವಿವರಗಳನ್ನು ಪಡೆದುಕೊಂಡಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ಇದಕ್ಕಾಗಿ ಅಧಿಕಾರಿ, ನೌಕರರ ಸೇವಾ ವಿವರಗಳನ್ನು ವಿಶೇಷವಾಗಿ ಎನ್.ಐ.ಸಿ. ಅವರು ಅಭಿವೃದ್ಧಿ ಪಡಿಸಿರುವ ತಂತ್ರಾಂಶದಲ್ಲಿ ನಮೂದು ಮಾಡಬೇಕಾಗಿದ್ದು, ಈ ಬಗ್ಗೆ ತರಬೇತಿಯನ್ನು ನೀಡಲು ಈ ಕೆಳಕಂಡಂತೆ ದಿನಾಂಕಗಳನ್ನು ನಿಗದಿಪಡಿಸಿದೆ. ಸಕಲೇಶಪುರ, ಬೇಲೂರು, ಅರಕಲಗೂಡು, ಆಲೂರು ಹಾಗೂ ಹೊಳೆನರಸೀಪುರ ತಾಲೂಕುಗಳ ಅಧಿಕಾರಿ, ನೌಕರರಿಗೆ ಫೆ. 10ರಂದು ಬೆಳಗ್ಗೆ 11ಕ್ಕೆ  ನಗರದ ಎ.ವಿ.ಕೆ.ಕಾಲೇಜು ಸಭಾಂಗಣ, ಚರ್ಚ್ ರಸ್ತೆ, ಇಲ್ಲಿ ತರಬೇತಿ ನೀಡಲಾಗುವುದು. ಹಾಸನ (ನಗರವೂ ಸೇರಿ), ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕುಗಳ ಅಧಿಕಾರಿ ನೌಕರರಿಗೆ ಫೆ. 10ರಂದು ಮಧ್ಯಾಹ್ನ 3ಕ್ಕೆ  ನಗರದ ಎ.ವಿ.ಕೆ. ಕಾಲೇಜು ಸಭಾಂಗಣ, ಚರ್ಚ್ ರಸ್ತೆ, ಇಲ್ಲಿ ತರಬೇತಿ ನೀಡಲಾಗುವುದು. ಈ ತರಬೇತಿಗೆ ಆಯಾ ತಾಲೂಕಿನ ಡ್ರಾಯಿಂಗ್ ಅಧಿಕಾರಿಗಳು (ಡಿ.ಡಿ.ಓ) ಕಡ್ಡಾಯವಾಗಿ ಹಾಜರಾಗುವಂತೆ ಅಪರ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.