'ನೆಮ್ಮದಿಯ ಜೀವನಕ್ಕೆ ಕಲೆಗಳ ಪಾತ್ರವೂ ಮುಖ್ಯ'
ಹಾಸನ: ಮನುಷ್ಯ ತನ್ನ ಜೀವನದಲ್ಲಿ ಉಲ್ಲಾಸ, ನೆಮ್ಮದಿ ಬದುಕು ನಡೆಸಬೇಕಾದರೆ ಕಲೆ ಮುಖ್ಯ ಪಾತ್ರವಹಿಸುತ್ತದೆ ಎಂದು ಬೆಂಗಳೂರು ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆರ್. ಪರಮಶಿವನ್ ತಿಳಿಸಿದ್ದಾರೆ.
ನಗರದ ಕಲಾಭವನದಲ್ಲಿ ಭಾನುವಾರ ಶ್ರೀ ಹಾಸನಾಂಬ ಕಲಾ ಸಂಘ, ಗುಬ್ಬಿ ಕಂಪನಿ ಎಸ್.ಎಮ್. ನಾಗರಾಜಾಚಾರ್, ಸೊರೆಕುಂಟೆ ತುಮಕೂರು, ಹನಿಫ್ ಅವರ ಸೂರ್ಯೋದಯ ಡ್ರಾಮಾ ಸೀನರಿ ಬೆಳ್ಳೂರು ಕ್ರಾಸ್ ಅವರ ರಂಗ ಸಜ್ಜಿಕೆಯಲ್ಲಿ ಆಯೋಜಿಸಲಾಗಿದ್ದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ ಎಂಬುದು ಮನುಷ್ಯನ ಒಂದು ಭಾಗ. ಪ್ರತಿಯೊಬ್ಬರಲ್ಲೂ ಅವರದ್ದೇ ಆದ ಕಲೆ ಅಡಗಿರುತ್ತದೆ. ಇಂತಹ ವೇದಿಕೆ ದೊರೆತಾಗ ಉತ್ತಮ ರೀತಿಯಲ್ಲಿ ಉಪಾಯೋಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಪ್ರಸ್ತೂತದಲ್ಲಿ ಇಂತಹ ನಾಟಕಗಳು ನಶೀಸಿಹೋಗುತ್ತಿರುವ ಸಂದರ್ಭದಲ್ಲಿಯೂ ಕಲಾಭಿಮಾನಿಗಳು ಪ್ರೋತ್ಸಹ ನೀಡುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಕಳೆದ 30 ವರ್ಷಗಳಿಂದಲೂ ನಾಟಕ ರಂಗದಲ್ಲಿ ನಾನಾ ಪಾತ್ರಗಳನ್ನು ನಾನು ನಿರ್ವಹಿಸಿದ್ದೇನೆ. ರಾಮಾಯಣದಲ್ಲಿ ಚಿಕ್ಕ ಪಾತ್ರದಿಂದ ದೊಡ್ಡ ಪಾತ್ರದವರೆಗೆ ನಟಿಸಲಾಗಿದೆ. ಪೌರಾಣಿಕ ನಾಟಕದ ಗೀತೆಗಳು ಕೇಳಲು ಸುಮಧುರವಾಗಿದೆ ಎಂದರು. ಪೌರಾಣಿಕ ನಾಟಕದ ರಂಗಗೀತೆಯನ್ನು ಉದ್ಘಾಟಸಿ ಹಾಡಿದರು. ತುಮಕೂರು, ಗುಬ್ಬಿ ಕಂಪನಿ ಎಸ್.ಎಮ್. ನಾಗರಾಜಚಾರ್ ಸೇರಿದಂತೆ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಬೆಂಗಳೂರು ಕರ್ನಾಟಕ ರಂಗ ಸಂಗೀತ ಪರಿಷತ್ ಅಧ್ಯಕ್ಷ ಗೋವಿಂದೇಗೌಡ, ಶಾಂತೇಗೌಡ, ಸಾಹಿತಿ ಜ.ಹೊ.ನಾರಾಯಣಸ್ವಾಮಿ, ಚನ್ನೇಗೌಡ, ಕೃಷ್ಣಮೂರ್ತಿ, ಸಿದ್ದೇಗೌಡ, ದಯಾನಂದ್, ಪುಟ್ಟೇಗೌಡ, ಜನಾ ರ್ಧನ್, ನಾಟಕ ನಿರ್ದೇಶಕ ನಿಕಾಲಸ್, ಗೋವಿಂದರಾಜು, ರಾಜಚಾರ್, ಹೆಚ್.ಬಿ. ಕುಮಾರಾಚಾರ್ ಇತರರು ಇದ್ದರು. ಕೃಷ್ಣ ಸ್ವರೂಪ್ ನಿರೂಪಿಸಿದರು. ದರ್ಶನ್ ವೆಂಕಟೇಶ್ ಹಾಗೂ ಗೊರೂರು ಅನಂತರಾಜು ಇತರರು ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

