ಹಾಸನ

ನಾಳೆ ಶಿಕ್ಷಕರಿಗೆ ಕೌನ್ಸೆಲಿಂಗ್

Published On :

ಹಾಸನ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದಿಂದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕ  ಗ್ರೇಡ್-2 ವೃಂದಕ್ಕೆ, ಬಡ್ತಿಯನ್ನು ನೀಡುವ ಬಗ್ಗೆ ಈಗಾಗಲೇ ಜಿಲ್ಲೆಯ ಎಲ್ಲಾ ಕ್ಷೇತ್ರ  ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಫೆ. 6 ರಂದು ಬಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ  ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಫೆ. 11ರಂದು ಉಪನಿರ್ದೇಶಕರ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಕೌನ್ಸಿಲಿಂಗ್‌ಗೆ ನಡೆಯಲಿದ್ದು, ಅರ್ಹ ಶಿಕ್ಷಕರು ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಆರ್. ಬಸವರಾಜ ತಿಳಿಸಿದ್ದಾರೆ.

ಗ್ರಾಪಂ ಅಧ್ಯಕ್ಷರಾಗಿ ಶ್ಯಾಮಲ ಆಯ್ಕೆ
ಹಾಸನ: ಮೊಸಳೆಹೊಸಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಟಿ.ಆರ್. ಶ್ಯಾಮಲಾ ಮಂಜುನಾಥ್, ಉಪಾಧ್ಯಕ್ಷ ರಾಗಿ ಮಲ್ಲೇಗೌಡ ಆಯ್ಕೆಗೊಂಡಿದ್ದಾರೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಟಿ.ಆರ್. ಶ್ಯಾಮಲಾ ಹಾಗೂ  ದೊಡ್ಡಮಲ್ಲೇಹಳ್ಳಿಯ ಕಮಲಮ್ಮ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲೇಗೌಡ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧ ವಾಗಿ ಆಯ್ಕೆ ಮಾಡಲಾಯಿತು.

13ರಂದು ಜಿ.ಪಂ. ಸಾಮಾನ್ಯ ಸಭೆ
ಹಾಸನ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಣ್ಣ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಫೆ. 13ರಂದು ಬೆಳಿಗ್ಗೆ 11.30ಕ್ಕೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

ಶಂಕತೀರ್ಥ ನಾಲೆ ದುರಸ್ತಿಗೆ ಹೆಚ್ಚು ಹಣ ನೀಡಿ
ಆಲೂರು: ತಾಲೋಕಿನ ಸಿಂಗಾಪುರ ಬಳಿ ಇರುವ ಶಂಕತೀರ್ಥ ನಾಲೆಯ ಸಿಮೇಂಟಟ್ಲೈನ್ಪೂರ್ಣ ಪ್ರಮಾಣದ ಕಾಮಗಾರಿಗೆ ಈ ಬಾರಿಯ ಬಜೆಟ್‌ನಲ್ಲಿ ಆರು ಕೋಟಿ ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ ತಿಳಿಸಿದರು. ಅವರು ಸಿಂಗಾಪುರ ಗ್ರಾಮದಲ್ಲಿ ಸೋಮವಾರ ನಾನಾ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಒಂದು ಕೋಟಿ ವೆಚ್ಚದಲ್ಲಿ ಶಂಕತೀರ್ಥ ನಾಲೆಯ ಆರಂಭದಿಂದ 2.5 ಕಿಮೀವರಗೆ ಸಿಮೆಂಟ್ ಲೈನ್ ನಿರ್ಮಿಸಲಿದ್ದು, ಒಟ್ಟು 12.6 ಕಿಮೀ ಪೂರ್ಣಗೊಂಡರೆ 30 ಹಳ್ಳಿಗಳ ರೈತರ 700 ಏಕರೆ ತರಿ ಜಮೀನಿಗೆ ನೀರಾವರಿ ದೊರೆಯಲಿದೆ. ಸರ್ಕಾರ ಬಾರಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಸಣ್ಣ ನೀರಾವರಿ ಯೋಜನೆಗಳಿಗೆ ಮಹತ್ವ ನಿಡಬೇಕೆಂದ ಅವರು, ಶಂಕತೀರ್ಥ ಚೆಕ್ ಡ್ಯಾಂಗೆ ಮಳೆಗಾಲದ ಅವದಿಯಲ್ಲಿ ಬರುವ ನೀರನ್ನು ಹೊಳೆಗೆ ಬಿಡಲು ಹೊಸ ಪೈಪ್ ಅಳವಡಿಸಲಾಗುವುದು ಎಂದು ಅವರು ವಿವರಿಸಿದರು. ರಸ್ತೆ ಮಂಜೂರು: ಸಿಂಗಾಪುರ ಮಣಿಕ್ಯಾತನಳ್ಳಿ 2 ಕಿ.ಮೀ. ರಸ್ತೇ ಕಾಮಗಾರಿ ವೀಕ್ಷಿಸಿ, ಕ್ಷೇತ್ರಕ್ಕೆ 'ನಮ್ಮ ಗ್ರಾಮ ನಮ್ಮ ರಸ್ತೆ' ಯೋಜನೆಯಲ್ಲಿ ಒಟ್ಟು ಮೂವತ್ತು ಕಿಮೀ ರಸ್ತೆ ಮಂಜುರಾಗಿದೆ. ಸಕಲೇಶಪುರ ತಾಲೂಕಿಗೆ 16 ಕಿಮೀ, ಆಲೂರು ತಾಲೋಕಿಗೆ 10 ಕಿಮೀ ಹಾಗೂ ಕಟ್ಟಾಯಕ್ಕೆ 2 ಕಿಮೀ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿದೆ. ತಾಲೂಕಿನ ಮಣಿಕ್ಯಾತನಳ್ಳಿ ರಸ್ತೇ 2 ಕಿಮೀ, ಗರಿಗಟ್ಟ 0.8, ತೊಗರನಳ್ಳಿ 1.5, ಕಿರಳ್ಳಿ 1, ಚಿಟ್ನಳ್ಳಿ 2.5, ಕಿತ್ತಗಳಲೆ 1.5, ಸಿಂಗೋಡನಳ್ಳಿ 0.5, ಚಿಗಳೂರು 1.25 ಕಿಮಿ ರಸ್ತೇಯನ್ನು ಐದು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.