ಶಿಕ್ಷಣದ ಜತೆಯಲ್ಲಿ ಆರೋಗ್ಯಕರ ಪರಿಸರವೂ ಅಗತ್ಯ
ಬೇಲೂರು: ಸರ್ಕಾರ ಹಾಗೂ ಶಾಸಗಿ ಶಾಲೆಗಳು ಮಕ್ಕಳಿಗೆ ನೀಡುವ ಶಿಕ್ಷಣದ ಜತೆಯಲ್ಲಿ ಆರೋಗ್ಯಕರ ಪರಿಸರ ಇರುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಬೇಲೂರು ಕಾವೇರಿ ಕ್ಲಿನಿಕ್ ವೈದ್ಯ ಡಾ. ಚಂದ್ರಮೌಳಿ ತಿಳಿಸಿದರು.
ತಾಲೂಕಿನ ಬಿಕ್ಕೋಡು ಮದರ್ ತೆರೇಸಾ ಕಾನ್ವೆಂಟ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ಮಕ್ಕಳ ಆರೋಗ್ಯದಲ್ಲಿ ತುಂಬ ಏರು ಪೇರು ಕಾಣಿಸಿಕೊಳ್ಳುತ್ತಿವೆ, ಕಾರಣ ಪೌಷ್ಠಿಕಾಂಶವಿಲ್ಲದ ಆಹಾರ ಪದಾರ್ಥಗಳು ಹಾಗೂ ಮಾಲಿನ್ಯ ಹೊಂದಿದ ಗಾಳಿ ಸೇವನೆ ಮಕ್ಕಳ ಆರೋಗ್ಯಕ್ಕೆ ಕಂಟಕ ಪ್ರಾಯವಾಗಿದೆ. ಈ ದಿಸೆಯಲ್ಲಿ ಸರ್ಕಾರ ಶಾಲಾ ಮಕ್ಕಳಿಗೆ ಸುವರ್ಣ ಆರೋಗ್ಯ ತಪಾಸಣೆಯನ್ನು ತಿಂಗಳಿಗೆ ಒಮ್ಮೆಯಾದರೂ ಮಕ್ಕಳನ್ನು ತಪಾಸಣೆಗೆ ಒಳಪಡಿಸಿಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೆ ಮೌಲ್ಯಯುಕ್ತವಾಗಿದೆ: ಲಯನ್ಸ್ ಸಂಸ್ಥೆ ಅಧ್ಯಕ್ಷ ಪೂವಯ್ಯ ಮಾತನಾಡಿ, ಸರ್ಕಾರ ರಾಜ್ಯದಲ್ಲಿ ಏಕರೂಪ ಶಿಕ್ಷಣಕ್ಕೆ ಅಲೋಚನೆ ಮಾಡುವ ಅಗತ್ಯವಿದೆ ಕಾರಣ ವಿವಿಧ ಪ್ರಕಾರದ ಶಿಕ್ಷಣ ಪೋಷಕರಿಗೆ ಹಾಗೂ ಮಕ್ಕಳಿಗೆ ಗೊಂದಲ ನೀಡುತ್ತಿದೆ ಎಂದ ಅವರು ಶಿಕ್ಷಣ ವ್ಯಾಪಾರವಾಗದೆ, ಶಿಕ್ಷಣ ಮಕ್ಕಳಿಗೆ ಮೌಲ್ಯಯುಕ್ತವಾಗಲಿದೆ ಎಂದು ತಿಳಿಸಿದರು.
ಮಹತ್ವ ನೀಡಬೇಕು: ವೈಡಿಡಿ ಕಾಲೇಜು ಉಪನ್ಯಾಸಕ ಆರ್.ಎಸ್. ಮಹೇಶ್ ಸಮಾರೋಪ ಭಾಷಣ ಮಾಡಿ, ರು ಶಿಕ್ಷಣ ಕ್ಷೇತ್ರದಲ್ಲಿ ಇರುವ ಪಾಠ ಪಠ್ಯಗಳು ಬದಲಾವಣೆ ಅಗತ್ಯವಿದೆ. ಕಾರಣ ನಾಡಿನ ಪರಿಸರಕ್ಕೆ ಅನುಗಣವಾಗಿಲ್ಲ ಈ ದಿಸೆಯಲ್ಲಿ ಮಕ್ಕಳಿಗೆ ನಮ್ಮ ಜನಪದ ಮತ್ತು ಸಂಸ್ಕತಿ ಉಳಿಸಲು ಹೇಗೆ ಸಾಧ್ಯವಾಗುತ್ತದೆ ಎಂದ ಅವರು ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಮಹತ್ವವನ್ನು ಗ್ರಾಮೀಣ ಪ್ರದೇಶಕ್ಕೆ ನೀಡಬೇಕು ಎಂದರು. ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ಸಿ. ಬಿ.ವೆಂಕಟೇಗೌಡ, ತಾಲೂಕು ಪಂಚಾಯ್ತಿ ಸದಸ್ಯರಾದ ಮೋಹನ್ ಕುಮಾರ್, ಕಮಲ ಚನ್ನಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಾಭೀಬಾವು, ಸದಸ್ಯ ಮಲ್ಲೇಶಗೌಡ, ಶಾಲಾ ಕಾರ್ಯದರ್ಶಿ ಎಚ್.ಆರ್. ಚನ್ನಕೇಶವೇಗೌಡ ಹಾಗೂ ಶಾಲಾ ಸಿಬ್ಬಂದಿ ಇದ್ದರು.
ಇದೇ ಸಂದರ್ಭದಲ್ಲಿ ನಾನಾ ಆಟೋಟ ಸ್ಪರ್ಧೆಯಲ್ಲಿ ವೀಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪೋಷಕರಿಗೆ ಮನರಂಜನೆ ನೀಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

