ಕುತೂಹಲ ಕೆರಳಿಸಿದ ಕೃಷಿ ಪತ್ತಿನ ಸಂಘ ಚುನಾವಣೆ
ಚನ್ನರಾಯಪಟ್ಟಣ: ತಾಲೂಕಿನ ದಿಂಡಗೂರು ಕೃಷಿ ಪತ್ತಿನ ಸಹಕಾರ ಸಂಘದ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯಲ್ಲಿ ಉಂಟಾದ ಗೊಂದಲ ಹಾಗೂ ತೀವ್ರ ಕುತೂಹಲದ ಮಟ್ಟಕ್ಕೆ ಹೋದ ಹಿನ್ನೆಲೆಯಲ್ಲಿ ಪೋಲಿಸರ ಮಧ್ಯ ಪ್ರವೇಶದಿಂದ ಸರಾಗವಾಗಿ ಬಗೆ ಹರಿಯಿತು.
ಕೃಷಿ ಪತ್ತಿನ ಸಹಕಾರ ಸಂಘದ 10 ಮಂದಿ ನಿರ್ದೇಶಕ ಸ್ಥಾನದಲ್ಲಿ ಸಾಮಾನ್ಯ(ಸಾಲಗಾರರಲ್ಲದ) ಕ್ಷೇತ್ರದ ಮತಗಳ ಏಣಿಕೆಯಲ್ಲುಂಟಾದ ಗೊಂದಲದಿಂದ ಭಾನುವಾರ ರಾತ್ರಿ ಎರಡೂ ಕಡೆಯ ಅಭ್ಯರ್ಥಿಗಳ ಗೊಂದಲದಿಂದ ಸೋಮವಾರಕ್ಕೆ ಮರು ಏಣಿಕೆಗಾಗಿ ಮುಂದೂಡಿದ್ದ ಆಯ್ಕೆ ಪ್ರಕ್ರಿಯೆ ಪೋಲಿಸರ ಬಿಗಿ ಬಂದೋಬಸ್ತ್ನಲ್ಲಿ ಸೋಮವಾರ ಮದ್ಯಾಹ್ನ ನಡೆಯಿತು.
ಘೋಷಣೆ: ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಂಜೇಗೌಡ ಅವರು, ಒಂದು ಮತದಿಂದ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಭಾನುವಾರ ರಾತ್ರಿ ಎಣಿಕೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದು, ಎಣಿಕೆಯಲ್ಲಿ ತಿರಸ್ಕೃತ ಮತಗಳನ್ನು ಸರಿಯಾಗಿ ಪರಿಗಣನೆ ಮಾಡಿಲ್ಲವೆಂದು ಆರೋಪಿಸಿದ ಅಭ್ಯರ್ಥಿ ರಂಗಸ್ವಾಮಿ ಮರು ಎಣಿಕೆಗೆ ಆಗ್ರಹಿಸಿ ಧರಣಿ ನಡೆಸಿದ ಹಿನ್ನಲೆಯಲ್ಲಿ ಅನುಮಾನಸ್ಪಾದ 35 ಮತ ಪತ್ರಗಳನ್ನು ಚುನಾವಣಾಧಿಕಾರಿ ಆಶಾಲತಾ ಪರಿಶೀಲನೆ ನಡೆಸಲಾಯಿತು. ಮತ ಚಲಾವಣೆಯಾದ 542 ಮತಗಳಲ್ಲಿ ಮಂಜೇಗೌಡ 217 ಹಾಗೂ ರಂಗಸ್ವಾಮಿ 216 ಮತಗಳನ್ನು ಪಡೆದಿದ್ದು, ಒಂದು ಮತದಿಂದ ಮಂಜೇಗೌಡ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದರು. ಬಿಗಿ ಪೋಲಿಸ್ ಬಂದೋಬಸ್ತ್ನಲ್ಲಿ ಚುನಾವಣಾಧಿಕಾರಿ ಅವರನ್ನು ಚನ್ನರಾಯಪಟ್ಟಣಕ್ಕೆ ಕಳುಹಿಸಲಾಯಿತು. ಸಾಲಗಾರರ ಕ್ಷೇತ್ರದಿಂದ ಬಸವರಾಜು, ಕುಮಾರ್, ಗುರುವೇಗೌಡ, ಪ್ರಕಾಶ್, ಕುಮಾರ್, ಕೆಂಪಮ್ಮ, ಜಯಮ್ಮ, ಸುಬ್ಬೇಗೌಡ ಹಾಗೂ ನಂಜಮ್ಮ ಆಯ್ಕೆಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

