ನವಿಲೆ ಯೋಜನೆಯಿಂದ ನೀರು ಹರಿಸಲು ಆಗ್ರಹ
ಚನ್ನರಾಯಪಟ್ಟಣ: ನವಿಲೆ ಏತ ನೀರಾವರಿ ಯೋಜನೆಯಿಂದ ನೀರು ಹರಿಸುವಂತೆ ಆಗ್ರಹಿಸಿ, ಕೆಂಬಾಳು, ಬಳಘಟ್ಟೆ ಹಾಗೂ ಸುತ್ತಮುತ್ತಲಿನ 20ಹಳ್ಳಿಯ ಗ್ರಾಮಸ್ಥರು ನವಿಲೆ ಏತ ನೀರಾವರಿ ಯೋಜನೆಯ ನೀರು ವಿತರಣಾ ತೊಟ್ಟಿ ಬಳಿ ರೈತ ಸಂಘದ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಪುಟ್ಟಣ್ಣಯ್ಯ ಮಾತನಾಡಿ, ನವಿಲೆ ಏತ ನೀರಾವರಿ ಯೋಜನೆಯಲ್ಲಿ ಅಳವಡಿಸಿರುವ 7 ಮೋಟಾರ್ಗಳಲ್ಲಿ ಒಂದು ಮೋಟಾರ್ನಿಂದ ನೇರವಾಗಿ ಬಳಘಟ್ಟೆ ಬಳಿಗೆ ನೀರು ಹಾಯಿಸಿ ಅಲ್ಲಿಂದ ವಿತರಣಾ ನಾಲೆಯಿಂದ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ತರಲು ನೀರಾವರಿ ಸಚಿವರು ಹಾಗೂ ಕಾವೇರಿ ನೀರಾವರಿ ನಿಗಮದ ಉನ್ನತ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಅವರು ಈ ಯೋಜನೆ ಅನುಷ್ಠಾನಕ್ಕೆ ಒಪ್ಪಿದಲ್ಲಿ ಅವರನ್ನು ಸ್ವಾಗತಿಸುತ್ತೇವೆ.
ಯೋಜನೆ ಕೈಗೊಳ್ಳಲು ಹಿಂದೇಟು ಹಾಕುವುದು ಅಥವಾ ತಮ್ಮ ಜತೆ ಸ್ಪಂದಿಸದೆ ನಿರಾಕರಣೆ ಮಾಡಿದರೆ ಅವರ ವಿರುದ್ಧ ಹೋರಾಟದ ದಾರಿ ಹಿಡಿದು ಜನತೆಗೆ ಕುಡಿಯುವ ನೀರು ನೀಡುವುದು ತಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಬೆಂಗಳೂರಿಗೆ ನಿಯೋಗ: ಮುಂದಿನ ವಾರದಲ್ಲಿ ಗ್ರಾಮದ ಮುಖಂಡರು ಸೇರಿ ಸಮಿತಿ ರಚಿಸಿಕೊಂಡು, ಬೆಂಗಳೂರಿಗೆ ನಿಯೋಗ ಬರುವಂತೆ ಸೂಚಿಸಿದ ಪುಟ್ಟಣ್ಣಯ್ಯ ಅವರು ಈ ಭಾಗದಲ್ಲಿ ಸುರಂಗ ಮಾರ್ಗಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಅಂತರ್ಜಲ ಕುಸಿದಿದೆ. ಅದನ್ನು ಸರಿದೂಗಿಸಲು ಏತ ನೀರಾವರಿ ಮುಖೇನ ಕುಡಿಯುವ ನೀರು ಹಾಗೂ ಜಮೀನಿಗೆ ನೀರು ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಇದಕ್ಕೆ ಸಮ್ಮತಿ ಸೂಚಿಸದಿದ್ದರೆ, ಹೋರಾಟದ ಹಾದಿ ಹಿಡಿಯಲಾಗುವುದು ಎಂದು ತಿಳಿಸಿದರು.
ಎಚ್ಚರಿಕೆ: ತಾಲೂಕಿನ ಮತ್ತೊಂದು ಕಾಚೇನಹಳ್ಳಿ ಏತ ನೀರಾವರಿ ಯೋಜನೆಯನ್ನು ರಾಜಕೀಯ ದ್ವೇಷದಿಂದ ನೆನೆಗುದಿಗೆ ಬೀಳಲು ಜಿಲ್ಲೆಯ ರಾಜಕಾರಣಿಗಳು ಕಾರಣರಾಗಿದ್ದು, ರಾಜಕೀಯ ದ್ವೇಷದಿಂದ ದಂಡಿಗನಹಳ್ಳಿ ಹಾಗೂ ಗಂಡಸಿ ಹೋಬಳಿ ರೈತರಿಗೆ ಮೋಸ ಮಾಡುತ್ತಿರುವ ರಾಜಕಾರಣಿಗಳು ತಮ್ಮ ಸ್ವಾರ್ಥವನ್ನು ಬಿಟ್ಟು ಯೋಜನೆಯನ್ನು ಕೈಗೆತ್ತಿಕೊಳ್ಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

