18ರಂದು ಜಿಲ್ಲಾ ಯುವಜನ ಮೇಳ; ವಿವಿಧ ಸ್ಪರ್ಧೆ
ಹಾಸನ: ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಫೆ.18ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ನಡೆಸಲಾಗುತ್ತಿದೆ. ಈ ಕೆಳಕಂಡ ಸ್ಪರ್ಧೆಗಳನ್ನು ಯುವಕ ಮತ್ತು ಯುವತಿಯರಿಗಾಗಿ ಹಮ್ಮಿಕೊಳ್ಳಲಾಗಿದೆ.
ಯುವಕರಿಗೆ ಭಾವಗೀತೆ- 3 ನಿಮಿಷ (ವೈಯಕ್ತಿಕ), ಗೀಗೀಪದ - 3 ಜನಗಳು- 4 ನಿಮಿಷ, ಲಾವಣಿ - 4 ನಿಮಿಷ (ವೈಯುಕ್ತಿಕ), ಕೋಲಾಟ - 6 ನಿಮಿಷ, 12 ಮಂದಿ, ವೀರಗಾಸೆ - 12 ಜನ, 10 ನಿಮಿಷ, ರಂಗಗೀತೆ -3 ನಿಮಿಷ(ವೈಯುಕ್ತಿಕ), ಸಣ್ಣಾಟ -12 ಮಂದಿ, 30 ನಿಮಿಷಗಳು, ಯಕ್ಷಗಾನ - 15 ಮಂದಿ, 45 ನಿಮಿಷ, ಸೋಬಾನೆ ಪದ-(ಯುವತಿಯರಿಗೆ)4 ಮಂದಿ, 5ನಿಮಿಷ, ಏಕಪಾತ್ರಾಭಿನಯ-(ವೈಯುಕ್ತಿಕ) 5 ನಿಮಿಷ, ಚರ್ಮವಾದ್ಯ- 6 ಮಂದಿ, 10 ನಿಮಿಷ, ಜಾನಪದಗೀತೆ-6 ಮಂದಿ, 4 ನಿಮಿಷ, ಭಜನೆ ಗೀತೆ- 8 ಮಂದಿ 7 ನಿಮಿಷ, ಜನಪದ ನೃತ್ಯ- 10 ನಿಮಿಷ, 12 ಜನ ಭಾಗವಹಿಸುವುದು.
ಯುವತಿಯರಿಗೆ ಭಾವಗೀತೆ - 3 ನಿಮಿಷ (ವೈಯುಕ್ತಿಕ), ಗೀಗಿಪದ - 5 ಜನ- 4 ನಿಮಿಷ, ಲಾವಣಿ - 4 ನಿಮಿಷ (ವೈಯುಕ್ತಿಕ), ಕೋಲಾಟ - 6 ನಿಮಿಷ, 12 ಮಂದಿ, ಜಾನಪದ ಗೀತೆ -6 ಮಂದಿ, 4 ನಿಮಿಷ, ಜಾನಪದ ನೃತ್ಯ- 10 ನಿಮಿಷ, 12 ಜನ, ದೊಡ್ಡಾಟ - 15 ಮಂದಿ, 45 ನಿಮಿಷ, ಭಜನೆ - 8 ಮಂದಿ 7 ನಿಮಿಷ, ಏಕಪಾತ್ರಾಭಿನಯ -(ವೈಯುಕ್ತಿಕ) 5 ನಿಮಿಷ, ರಾಗಿ ಜೋಳ ಬೀಸುವ ಪದ (ಯಾವುದಾದರೂ ಒಂದು) 2 ಮಂದಿ - 3 ನಿಮಿಷ, ರಂಗಗೀತೆ - 3 ನಿಮಿಷ (ವೈಯುಕ್ತಿಕ).
ಸೂಚನೆಗಳು: ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಫೆ. 18ರಂದು ಬೆಳಗ್ಗೆ 9ಕ್ಕೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳತಕ್ಕದ್ದು.
ಹೆಚ್ಚಿನ ವಿವರಗಳಿಗೆ ದೂ. 08172- 246056 ಸಂಪರ್ಕಿಸುವಂತೆ ಹಾಸನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

