ನೀರಿನ ಕಾಮಗಾರಿಗೆ ರು. 29.11 ಕೋಟಿ ನೀಡಿ
ಹಾಸನ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಕೂಡಲೇ ರಾಜ್ಯಸರ್ಕಾರ ತುರ್ತು ಕುಡಿಯುವ ನೀರಿನ ಕಾಮಗಾರಿಗೆ ರು. 29.11 ಕೋಟಿ ಹಣ ಬಿಡುಗಡೆ ಮಾಡುವಂತೆ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ 8 ತಾಲೂಕುಗಳಲ್ಲಿ ಕುಡಿಯುವ ನೀರಿಲ್ಲದೆ ಜನ ಪರಿತಪಿಸುತಿದ್ದಾರೆ. ಹಾಸನ ನಗದರಲ್ಲಿ ವಾರಕ್ಕೆ ಒಂದು ಬಾರಿ ನೀರನ್ನು ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 500 ಅಡಿಗಳಷ್ಟು ತೋಡಿದರು ನೀರು ಲಭ್ಯವಾಗುತ್ತಿಲ್ಲ. ಆದ್ದರಿಂದ, ದೇವೇಗೌಡರು ಈಗಾಗಲೇ ರಾಜ್ಯ ಸರ್ಕಾರಕ್ಕೆ ಜಿಲ್ಲಾಪಂಚಾಯ್ತಿ ವತಿಯಿಂದ ರು. 29.11 ಕೋಟಿಗಳ ತುರ್ತು ಕುಡಿಯುವ ನೀರಿನ ಕಾಮಗಾರಿಗೆ ಪ್ರಸ್ತಾವನೆಯನ್ನು ಕಳುಸಿದ್ದಾರೆ.
ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಹಣವನ್ನು ಬಿಡುಗಡೆ ಮಾಡಿ ಕುಡಿಯುವ ನೀರಿಗೆ ಸಹಕರಿಸಬೇಕು. ಜೊತೆಗೆ ಪ್ರತ್ಯೇಕವಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪೈಪ್ಲೈನ್ ಹಾಗೂ ಇತರೆ ಕೆಲಸಗಳನ್ನು ಅಳವಡಿಸಲು ತಲಾ 5 ಕೋಟಿ ರು. ಹಣವನ್ನು ನೀಡಬೇಕು ಎಂದರು.
ಕ್ರಮಕೈಗೊಳ್ಳಿ: ರಾಜ್ಯದ 226 ವಿಧಾನಸಭಾ ಕ್ಷೇತ್ರಗಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂಡವನ್ನು ಕಳುಹಿಸಿ ಪರಿಶೀಲಿಸಬೇಕು ಎಂದ ಅವರು, ತಕ್ಷಣದಿಂದಲೇ ಟ್ಯಾಂಕರ್ಗಳ ಮೂಲಕ ನೀರನ್ನು ಒದಗಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಹಾಸನ ನಗರಕ್ಕೆ ಹೇಮಾವತಿ ಜಲಾಶಯದಿಂದ ಕುಡಿಯುವ ನೀರನ್ನು ಒದಗಿಸುವಂತಹ ಯೋಜನೆಗೆ ಸಂಬಂಧಿಸಿದಂತೆ ರು. 450 ಕೋಟಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಅದು ಅನುಮೋದನೆಗೊಳ್ಳಲಿದೆ ಎಂದರು.
'ಸಚಿವ ಖರ್ಗೆ ಏನು ಬೇಕೋ ಮಾಡಲಿ'
ದೇವೇಗೌಡರ ಕಾಲದಲ್ಲಿ ದುದ್ದ- ತಿಪಟೂರು ರೇಲ್ವೆ ಮಾರ್ಗದ ಸರ್ವೇ ಆಗಿತ್ತು. ಈಗ ಮತ್ತೆ ಅದಕ್ಕೆ ಕೇಂದ್ರ ರೇಲ್ವೆ ಬಜೆಟ್ ಸರ್ವೇ ಮಾಡಲು ನಿರ್ದೇಶನ ಮಾಡಿದ್ದಾರೆ. ಕೊಡಗಿಗೂ ರೇಲ್ವೆ ಮಾರ್ಗ ಕಲ್ಪಿಸುವ ನಿಟ್ಟಿನಲ್ಲಿ ಸರ್ವೇ ಕಾರ್ಯ ನಡೆಸಲಾಗಿತ್ತು. ಈರೀತಿಯಾಗಿ ಸಾಕಷ್ಟು ಯೋಜನೆಗಳನ್ನು ದೇವೇಗೌಡರ ಕಾಲದಲ್ಲಿ ಸರ್ವೇ ಮಾಡಲಾಗಿತ್ತು. ಆದರೆ ಅದೆಲ್ಲ ಪ್ರಗತಿಯನ್ನು ಕಾಣಲಿಲ್ಲ. ಖರ್ಗೆ ಅವರು ಅಧಿಕಾರದಿಂದ ಕೆಳಗೆ ಇಳಿಯುವಷ್ಟರಲ್ಲಿ ತಮಗೆ ಏನೇನ್ ಬೇಕು ಅದನ್ನು ಮಾಡಿಕೊಳ್ಳಲಿ ಅಥವಾ ಗುಲ್ಬರ್ಗ ಬಜೆಟ್ ಮಾಡಲಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

