ಹಾಸನ

ಸಲಗ ಸೆರೆ ಕಾರ್ಯ ನಾಳೆಗೆ

Published On :

ಆಲೂರು: ಒಂಟಿ ಸಲಗ ಹಿಡಿಯುವ ಕಾರ್ಯಾಚರಣೆ ಗುರುವಾರದಿಂದ ಆರಂಭಗೊಂಡಿದ್ದು, ಮೊದಲ ದಿನದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬರಿಗೈಯ್ಯಲ್ಲಿ ವಾಪಸಾದರು. ಶುಕ್ರವಾರಕ್ಕೆ ಕಾರ್ಯಾಚರಣೆ ಮುಂದುವರಿಯಲಿದೆ.
ಗುರುವಾರ ಬೆಳಗ್ಗೆ 7.30ಕ್ಕೆ ಸಿ.ಸಿ.ಎಫ್ ರಂಗಾರಾವ್, ಡಿ.ಎಫ್.ಓ ಅಪ್ಪುರಾವ್,ಅರ್.ಎಓ ದೇವರಾಜ್, ವೈದ್ಯರು, ಗುರಿಕಾರರು, ಮಾವುತರು, ಕಾವಾಡಿಗಳು, ಕಾಡುಕುರುಬರು  ಹಾಗೂ   ಸಿಬ್ಬಂದಿ ವರ್ಗದೊಂದಿಗೆ ಸಾಕಾನೆ ಗಳಿಗೆ ಪೂಜೆ ಸಲ್ಲಿಸಿ ಪ್ರಥಮ ದಿನದ ಕಾರ್ಯಾಚರಣೆಯನ್ನು ಅರ್ಜುನ, ವಿಕ್ರಂ ,ಅಭಿಮನ್ಯು, ಗಜೇಂದ್ರ, ಭೀಮಾ, ಶ್ರೀರಾಮ ಆನೆಗಳೊಂದಿಗೆ ನಾಗಾವಾರ ಬಳಿಯ ಚಿಕ್ಕಬೆಟ್ಟ ಅರಣ್ಯ ಪ್ರದೇಶದಲ್ಲಿ ಪ್ರಾರಂಭಿಸಿದರು.
ಪಾಲಾಯನ: ಬೆಳಗ್ಗೆಯಿಂದ ಸಂಜೆಯವರೆಗೂ ನರಹಂತಕ ಒಂಟಿಸಲಗ ವನ್ನು ಹುಡುಕಾಡಿದ ತಂಡ ಒಂಟಿಸಲಗ ಸಿಗದ ಕಾರಣ ಬರಿಗೈಯಲ್ಲಿ ಮಾಗಡಿಯಳ್ಳಿ ಕ್ಯಾಂಪ್‌ಗೆ ವಾಪಸ್ ಹಿಂದಿರುಗಿತು.  ಇಂದು ಚಿಕ್ಕಬೆಟ್ಟ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗ, ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಸಾಕಾನೆಗಳೊಂದಿಗೆ ನಾಗವರ ಅರಣ್ಯ ಪ್ರದೇಶಕ್ಕೆ ಪ್ರವೇಶಿಸುತ್ತಿದಂತೆ ಸಾಕಾನೆಗಳ ವಾಸನೆ ಅರಿತು ಹೇಮಾವತಿ ಹಿನ್ನಿರಿನ ಆಚೆ ಬದಿಯಿರುವ ಕೊಡಗಿನ ಕಟ್ಟೇಪುರ ಅರಣ್ಯ ಪ್ರದೇಶಕ್ಕೆ ಪಲಾಯನಗೈದಿದೆ.
ನಿರಾಸೆ: ಇದರಿಂದಾಗಿ ಕಾರ್ಯಾಚರಣೆ ಪ್ರಾಂರಂಭಿಸಿದ ಮೊದಲ ದಿನವೇ ಮಂಗಳವಾರವಷ್ಟೇ ಕಲ್ಲಾರೆ ಗ್ರಾಮದಲ್ಲಿ ಕೃಷ್ಣೇಗೌಡ ಎಂಬವರನ್ನು ಬಲಿತೆಗೆದುಕೊಂಡ ಒಂಟಿಸಲಗವನ್ನು ಹಿಡಿದು ಅಂದು ಅರಣ್ಯ ಇಲಾಖೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದವರಿಗೆ ತಕ್ಕ ಉತ್ತರ ನೀಡಬೇಕೇಂದುಕೊಂಡಿದ್ದ ಅಧಿಕಾರಿಗಳಿಗೆ ನಿರಾಸೆಯಾಗಿದೆ.
ಕಾರ್ಯಾಚರಣೆಯಲ್ಲಿ ಡಾ. ಚೆಟ್ಟಿಯಪ್ಪ, ಡಾ. ಉಮಾಶಂಕರ್,ಡಾ. ನಾಗರಾಜು, ಗುರಿಕಾರರಾದ ವೆಂಕಟೇಶ್, ಕರಂಬಯ್, ಅಕ್ರಂ, ಮಾವುತರು, ಕಾವಾಡಿಗಳು, ಕಾಡುಕುರುಬರು ಇದ್ದರು.
ಮಂಗಳವಾರ ಕಲ್ಲಾರೆ ಗ್ರಾಮದಲ್ಲಿ ಡಿ.ಎಪ್.ಒ, ದೇವರಾಜರವರ ಮೇಲೆ ಹಲ್ಲೆ ನೆಡೆಸಿದ್ದ 9  ಜನರ ಮೇಲೆ ಆಲೂರು ಪಟ್ಟಣದ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.