ಬಸವಣ್ಣ ನಾಡು ಕಂಡ ಮೇರು ಪುರುಷ: ಸಿದ್ದಲಿಂಗ ಶ್ರೀ
ರಾಮನಾಥಪುರ: ಸಾಮಾಜಿಕ ಕ್ರಾಂತಿಯನ್ನು 12ನೇ ಶತಮಾನದಲ್ಲೇ ನಡೆಸಿದ ಭಕ್ತಿ ಭಂಡಾರಿ ಬಸವಣ್ಣನವರು ಈ ನಾಡು ಕಂಡ ಮೇರು ಪುರುಷರಾಗಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಸಿದ್ದಗಂಗಾ ಮಠದ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಹಳ್ಳಿಮೈಸೂರು ಹೋಬಳಿ ಕಲ್ಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ನೂತನ ಶ್ರೀ ರಾಮೇಶ್ವರ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಮಾನವೀಯ ಮೌಲ್ಯಗಳನ್ನು ಬಿತ್ತಿದ ಬಸವಣ್ಣನ ಶರಣ ಧರ್ಮ, ಸಿದ್ಧಾಂತಗಳು ಇಲ್ಲವಾಗಿವೆ. ಇದನ್ನು ಉಳಿಸಲು ನಾವು ಸನಾತನಧರ್ಮ. ಸಂಸ್ಕೃತಿ ಇಂದು ಉಳಿಸಲು ಮುಂದಿನ ಪೀಳಿಗೆಗೆ ಸಂಸ್ಕಾರ ಅಗತ್ಯ ಸಮಾಜದ ಎಲ್ಲ ವರ್ಗಗಳಲ್ಲಿ ಚಾರಿತ್ರ್ಯವಂತ, ಸಾತ್ವಿಕ ಸಮುದಾಯ ಬೆಳೆದು ಬರಬೇಕಾಗಿದೆ. ಸಂಸ್ಕಾರ ಆದರ್ಶ ವಿಚಾರ ಬೆಳೆಯುವುದರಿಂದ ಇದು ಸಾಧ್ಯ ಎಂದರು.
ಪ್ರಶಂಸೆ: ಕ್ಷೇತ್ರದ ಶಾಸಕ ಮಂಜು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಲಹಳ್ಳಿ ಗ್ರಾಮವನ್ನು ಸುವರ್ಣ ಗ್ರಾಮಕ್ಕೆ ಸೇರಿಸುವುದಾಗಿ ಭರವಸೆ ನೀಡಿದ ಅವರು ವೀರಶೈವ ಧರ್ಮ, ಅನ್ಯ ಧರ್ಮಗಳ ಜೊತೆಗೂಡಿ ವಿದ್ಯೆ ನೀಡುವುದರ ಜೊತೆಗೆ ದಾಸೋಹ ಹಮ್ಮಿಕೊಂಡು ಬಡ ಜನೆತೆಯ ಅಶ್ರಯವಾಗಿವೆ. ಅಂಥ ಮಠಗಳಲ್ಲಿ ಸಿದ್ದಗಂಗಾ ಮಠ ಹಾಗೂ ಸುತ್ತೂರು ಮಠ ಮಾಡುತ್ತಿರುವುದರ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದರು.
ಹೆಚ್ಚುವರಿ ಶಾಲೆ ಭರವಸೆ: ಮಾಜಿ ಸಚಿವ ಹಾಗೂ ಶಾಸಕ ಹೆಚ್.ಡಿ. ರೇವಣ್ಣ ಮಾತನಾಡಿ, ಮುಂದಿನ ದಿನಗಳಲ್ಲಿ ಕಲ್ಲಹಳ್ಳಿ ಗ್ರಾಮದಲ್ಲಿ ಒಂದು ಸಮುದಾಯ ಭವನ ಹಾಗೂ ಹೆಚ್ಚುವರಿ ಶಾಲೆಗಳನ್ನು ಮಾಡಿಸಿಕೊಡುವುದಾಗಿ ಭರವಸೆ ಇತ್ತರು.
ತೇಜೂರು ಮಠದ ಶ್ರೀ ಕಲ್ಯಾಣಸ್ವಾಮೀಜಿ, ದೊಡ್ಡಮಠ ಶ್ರೀ ಮಲ್ಲಿಕಾರ್ಜುನಸ್ವಾಮಿಜಿ, ಬೇಬಿಮಠ ಸದಾಶಿವ ಸ್ವಾಮೀಜಿ, ಟಿ. ಮಾಯಿಗೌಡನಹಳ್ಳಿ ಮಠದ ಶ್ರೀ ಸೋಮಶೇಖರಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೆಂದ್ರಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಪ್ರಾಧ್ಯಾಪಕ ವೀರಭದ್ರಯ್ಯ, ಧರ್ಮಸ್ಥಳ ಶ್ರೀ ಕ್ಷೇತ್ರ ನಿರ್ದೇಶಕ ಹರಿಕಾಂತ್, ಹೊಳೆನರಸಿಪುರ ಧರ್ಮಸ್ಥಳದ ಗ್ರಾಮೀಣಭಿವೃದ್ಧಿ ಯೋಜನಾಧಿಕಾರಿ ಪುರುಷೋತ್ತಮ್ ಮಾತನಾಡಿದರು.
ತಹಸೀಲ್ದಾರ್ ಅರ್.ಬಿ. ಶಿವಶಂಕರಪ್ಪ, ದೇವಸ್ಥಾನ ಸಮಿತಿಯ ಅಧ್ಯಕ್ಷ ಶಾಂಭಶಿವಪ್ಪ, ಕಾರ್ಯದರ್ಶಿ ಕುಮಾರಸ್ವಾಮಿ, ಸದಸ್ಯರಾದ ಶಿವನಂಜಪ್ಪ, ಸಿದ್ದಪ್ಪ, ಕೆ.ಎಸ್. ಕುಮಾರಸ್ವಾಮಿ, ಮಹದೇವಪ್ಪ, ಸೋಮಶೇಖರಪ್ಪ, ಶಾಂಭಶಿವ, ಮಾ.ಜಿ. ಪಂ.ಸದಸ್ಯ ಕುಮಾರಸ್ವಾಮಿ, ದೇವರಾಜ್ ಮುಂತಾದವರು ಉಪಸ್ಥಿತರಿದ್ದರು.
ಸಿದ್ದಗಂಗಾ ಮಠದ ಶ್ರೀ ಬಸವೆಶ್ವರ ಕಲಾ ತಂಡದವರಿಂದ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನ ನಡೆಯಿತು. ತೇಜೂರು ಶಿವಯೋಗಿ ಸಿದ್ದರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಲ್ಲಹಳ್ಳಿ ಗ್ರಾಮಕ್ಕೆ ಬಂದಂತಹ ಸಾವಿರಾರು ಶರಣ- ಶರಣೆಯರಿಗೆ ಮಹಾದಾಸೋಹದ ವ್ಯವಸ್ಥೆ ಗ್ರಾಮಸ್ಥರು ಮಾಡಿದ್ದರು.
ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಂಬಶಿವಪ್ಪ ಸ್ವಾಗತಿಸಿ, ಬೆಂಗಳೂರು ಶ್ರೀನಿವಾಸ್ ನಿರೂಪಿಸಿದರು. ಕುಮಾರಸ್ವಾಮಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

