ಮುಂದಿನ ಬಜೆಟ್ನಲ್ಲಿ ಸೌಲಭ್ಯಮೂಲ ಸೌಕರ್ಯಗಳಿಗೆ ಆದ್ಯತೆ
ಸಕಲೇಶಪುರ: ಶ್ರೀ ಸಾಮಾನ್ಯರಿಗೆ ಪುರಸಭೆಯಿಂದ ಸಿಗುವಂತಹ ಸೌಲಭ್ಯ ನೀಡಲು ಮುಂದಿನ ಬಜೆಟ್ನಲ್ಲಿ ಆದ್ಯತೆ ನೀಡಲಾಗುವುದು ಎಂದು ಪುರಸಭೆಯ ಅಧ್ಯಕ್ಷ ಎಸ್. ಎನ್. ಸತೀಶ್ ಹೇಳಿದರು.
ಮಂಗಳವಾರ ಬಜೆಟ್ ಬಗ್ಗೆ ಸಾರ್ವಜನಿಕರೂಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕ, ಆರೋಗ್ಯ, ಶುಚಿತ್ವ, ವಿಕಲ ಚೇತನ, ಶುದ್ಧ ಕುಡಿಯುವ ನೀರಿಗೆ ವಿಶೇಷ ಆದ್ಯತೆ ನೀಡುವ ಅಂಶಗಳನ್ನು ಮುಂದಿನ ಬಜೆಟ್ನಲ್ಲಿ ಅಳವಡಿಸಲಾಗಿವುದು ಎಂದು ಹೇಳಿದರು.
ಮಾಸಾಶನಕ್ಕೆ ಚಿಂತನೆ: ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಆರೋಗ್ಯಕ್ಕೆ ಸಂಬಂದಿಸಿದಂತೆ ಶಸ್ತ್ರ ಚಿಕಿತ್ಸೆಗೆ ನೆರವು, ವಿಕಾಲ ಚೇತನರಿಗೆ ವಿಶೇಷ ಸೌಲಭ್ಯಗಳು, ಮಾಸಾಶನಗಳನ್ನು ನೀಡುವಂಥ ಯೋಜನೆ ರೂಪಿಸಲು ಚಿಂತಿಸಲಾಗಿದೆ ಎಂದು ಅವರು ಹೇಳಿದರು.
ತಂತ್ರಜ್ಞರೊಂದಿಗೆ ಮಾತುಕತೆ: ಶುದ್ಧ ಕುಡಿಯುವ ನೀರು ಪಟ್ಟಣದ ಜನರಿಗೆ ಇಲ್ಲಿಯವರೆಗೂ ನೀಡಲಾಗಿಲ್ಲ. ವಿಶೇಷ ಯೋಜನೆಯ ಮೂಲಕ ಈ ಸಮಸ್ಯೆ ಬಗೆಹರಿಸಲಾಗುವುದು ಈ ಬಗ್ಗೆ ನುರಿತ ತಂತ್ರಜ್ಞರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಮಾರಾಟಕ್ಕೆ ಉಚಿತ ಸ್ಥಳ: ಪಟ್ಟಣದಲ್ಲಿ ಹಸಿ ಮೀನು ಭಾರಿ ದುಬಾರಿಯಾಗಿದೆ, ಜನರ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿಲ್ಲ ಪರವಾನಿಗೆ ಪದ್ಧತಿಯ ಮೂಲಕ ಬೆಲೆ ನಿಯಂತ್ರಿಸಬಹುದಾಗಿದೆ ಈ ನಿಟ್ಟಿನಲ್ಲಿ ಜನಾಬಿಪ್ರಾಯ ಪಡೆದು ತೀರ್ಮಾನಿಸಲಾಗುವುದು. ಒಂದೇ ಪ್ರದೇಶದಲ್ಲಿ ಮೀನು ಮತ್ತು ಮಾಂಸ ದೊರೆಯುವಂತ ವ್ಯವಸ್ಥೆಗೆ ಸಂಬಂದಿಸಿದಂತೆ ಈಗಾಗಲೆ ಯೋಜನೆ ರೂಪಿಸಲಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ಹೂವು, ಹಣ್ಣು ಮಾರಾಟದ ಸೌಲಭ್ಯಕ್ಕೂ ಸ್ಥಳ ಪರಿಶೀಲಿಸಲಾಗುತ್ತಿದೆ ಎಂದು ವಿವರಿಸಿದರು.
ಯೋಜನೆ ರೂಪಿಸಲಾಗಿದೆ: ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಪಟ್ಟಣದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ, ಬಸ್ ತಂಗುದಾಣ, ಸಾರ್ವಜನಿಕರಿಗೆ ವಿಶ್ರಾಂತಿ ಕೂಠಡಿ, ಪಾರ್ಕ ಅಭಿವೃದ್ಧಿ, ದೋಬಿ ಘಾಟ್ ನಿರ್ಮಾಣ, ಸೇರಿದಂತೆ ವಿಶೇಷ ಯೋಜನೆಗಳಿವೆ ಈ ಎಲ್ಲಾ ಯೋಜನೆಗಳು ಕಾರ್ಯಗತವಾಗಲು ಜಿಲ್ಲಾಧಿಕಾರಿಯವರ ಅನುಮತಿ ಅತ್ಯಗತ್ಯ, ಪೌರಾಡಳಿತದ ವ್ಯಾಪ್ತಿಯಲ್ಲಿಯೇ ಯೋಜನೆ ರೂಪಿಸಲಾಗಿದೆ ಎಂದರು.
ಈ ಬಾರಿಯ ದನಗಳ ಜಾತ್ರೆಯ ಹರಾಜಿನ 7 ಲಕ್ಷ ರು. ಆದಾಯ ಪುರಸಭೆಗೆ ದೊರಕಿದೆ ಎಂದುರು ಜೆಡಿಎಸ್ ಸದಸ್ಯರ ಗೈರು. ಮುಂದಿನ ಬಜೆಟ್ ಪೂರ್ವಭಾವಿ ಸಭೆಗೆ ಸಂಬಂಧಿಸಿದಂತೆ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಲು ಕರೆಯಲಾಗಿದ್ದ ಸಬೆಗೆ ಜೆಡಿಎಸ್ ಸದಸ್ಯರು ಗೈರುಹಾಜರಾಗಿದ್ದರೆ ಕಾಂಗ್ರೆಸ್ ಪಕ್ಷದ ಸಯ್ಯದ್ ಮಾಫೀಜ್, ಕಾಳಿಂಗಪ್ಪ, ಸೇರಿದಂತೆ ಆರು ಸದಸ್ಯರು ಇದ್ದರು. ಕೆಜೆಪಿಯ ಸದಸ್ಯೆ ರೇಖಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

