ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಹೊಸ ಸಮಿತಿ
ಅರಸೀಕೆರೆ: ಪಟ್ಟಣದ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ 11 ಮಂದಿ ಆಯ್ಕೆಗೊಂಡಿದ್ದು, ಹೊಸ ಸಮಿತಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.
ತೀವ್ರ ಕುತೂಹಲ: ಕಳೆದ 15 ವರ್ಷಗಳಿಂದಲೂ ಅವಿರೋಧ ಆಯ್ಕೆಗೆ ಸೀಮಿತವಾಗಿದ್ದ ಸಂಘದ ಆಡಳಿತ ಮಂಡಳಿಗೆ ನಡೆಸಲಾಗಿದ್ದ ಚುನಾವಣೆಯಲ್ಲಿ 11 ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದರು. ವಿವಿಧ ಪದಾಧಿಕಾರಿಗಳ ಸ್ಥಾನಗಳಿಗೆ ಸೇರಿ, ಒಟ್ಟು 21 ಮಂದಿ ಚುನಾವಣಾ ಅಖಾಡಕ್ಕೆ ಇಳಿದಿದ್ದರಿಂದ ಇದೇ ಮೊದಲ ಬಾರಿಗೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದರಿಂದ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು.
ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನದ ಪ್ರಕ್ರಿಯೆ ಸಂಜೆ 4 ಗಂಟೆವರೆಗೆ ನಡೆದು ಮತ ಎಣಿಕೆ ಪ್ರಕ್ರಿಯೆ ಭಾನುವಾರ ತಡರಾತ್ರಿಯವರೆಗೂ ಮುಂದುವರಿಯಿತು.
ಪ್ರಕಟವಾದ ಫಲಿತಾಂಶದಲ್ಲಿ ಹಾಲಿ ಅಧ್ಯಕ್ಷ ಶಿವಕುಮಾರಸ್ವಾಮಿ, ಉಪಾಧ್ಯಕ್ಷೆ ಸಿ.ಪಿ. ಶಿವಲೀಲಾ, ಮಾಜಿ ಅಧ್ಯಕ್ಷ ಕೆ.ವಿ. ನಿರ್ವಾಣಸ್ವಾಮಿ, ನಿವೃತ್ತ ಶಿಕ್ಷಣಾಧಿಕಾರಿ ರುದ್ರ ಮುನಿಸ್ವಾಮಿ, ಬಿ.ಪಿ.ಎಸ್. ರಾಜಕುಮಾರ್, ಹಿಂದುಳಿದ ವರ್ಗದ ಕ್ಷೇತ್ರದಿಂದ ಮಂಜುನಾಥ್ ಜವಳಿ ಮರು ಆಯ್ಕೆಗೊಂಡರೆ, ವಕೀಲ ಎಂ.ಎಂ. ನಂದೀಶ್ ಹಾಗೂ ಎಂ. ಗಣೇಶ್, ಬಿ.ಎನ್. ರೇಣುಕಾಪ್ರಸಾದ್, ವಿಜಯಾ ಬ್ಯಾಂಕ್ನ ನಿವೃತ್ತ ಮ್ಯಾನೇಜರ್ ಶ್ರೀಕಾಂತ್, ಮಹಿಳಾ ಮೀಸಲು ಕ್ಷೇತ್ರದಿಂದ ರೂಪಶ್ರೀ ನೂತನ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. ನಂತರ, ಮಾತನಾಡಿದ ಉಭಯ ಸದಸ್ಯರು, ಸಹಕಾರ ಸಂಘ ಆರಂಭವಾದಾಗಿನಿಂದಲೂ ಸದಸ್ಯರ ಸಹಕಾರದಿಂದ ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರ ಸಂಘವನ್ನು ಬ್ಯಾಂಕಾಗಿ ಪರಿವರ್ತಿಸುವುದು ಹಾಗೂ ಬ್ಯಾಂಕಿನ ಸ್ವಂತ ಕಟ್ಟಡ ಹೊಂದುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

