ಮತ್ತಿಗೋಡು ಆನೆ ಧಾಮಕ್ಕೆ ಮಕ್ನಾ, ಒಂಟಿ ಸಲಗ
ಆಲೂರು: ಸತತವಾಗಿ ಎರಡು ದಿನಗಳಿಂದ ಒಂದರ ಹಿಂದೆ ಒಂದಂತೆ ತಾಲೂಕಿನ ಕೆಂಚಮ್ಮನಹೊಸ ಹೋಬಳಿ ಹಾಗೂ ಕೊಡಗಿನ ಉಂಬಳಿಬೆಟ್ಟ ಅರಣ್ಯ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದ ಮಕ್ನಾ ಹಾಗೂ ದೈತ್ಯ ಒಂಟಿ ಸಲಗವನ್ನು ಬುಧವಾರ ಮತ್ತಿಗೋಡು ಆನೆಧಾಮಕ್ಕೆ ಅರಣ್ಯ ಇಲಾಖೆಯವರು ಸಾಗಿಸಿದರು.
ಸೋಮವಾರ ಉಂಬಳಿಬೆಟ್ಟ ಅರಣ್ಯಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಹೇಮಾವತಿ ಹಿನ್ನೀರಿನ ನದಿ ಪಾತ್ರದಲ್ಲಿ ಹಿಡಿದಿದ್ದ ಮಕ್ನಾ ಆನೆಯನ್ನು ಮಾಗಡಿಹಳ್ಳಿ ಕ್ಯಾಂಪ್ಗೆ ತಂದಿದ್ದ ಈ ಆನೆಯನ್ನು ಸಾಗಿಸಲು ಇಲಾಖೆಯವರು ತೀರ್ಮಾನಿಸಿದ್ದರು. ಆದರೆ ಸೋಮವಾರ ರಾತ್ರಿಯೇ ಸೆರೆ ಹಿಡಿದ ಒಂಟಿ ಸಲಗ ಸೇರಿದಂತೆ 7 ಆನೆಗಳ ಹಿಂಡು ಕ್ಯಾಂಪ್ಗೆ ನುಗ್ಗಿ ದಾಂದಲೆ ನಡೆಸಿ ಮಕ್ನಾವನ್ನು ಬಿಡಿಸಲು ಪ್ರಯತ್ನಿಸಿದ್ದವು. ಈ ಸಂದರ್ಭದಲ್ಲಿ ಮೂರು ಭಾರಿ ಗಾಳಿಯಲ್ಲಿ ಗುಂಡು ಹಾರಿಸಿ ಆರಣ್ಯ ಇಲಾಖೆಯವರು ಕಾಡಾನೆಗಳನ್ನು ಓಡಿಸಿದ್ದರು.
ಆದರೆ ಮಂಗಳವಾರ ಬೆಳಗಿನ ಜಾವದಲ್ಲಿ ನರಹಂತಕ ಒಂಟಿ ಸಲಗ ಉಂಬಳಿಬೆಟ್ಟ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವುದು ಕಂಡು ಬಂದು ಮಕ್ನಾ ಆನೆಯನ್ನು ಮತ್ತಿಗೋಡು ಅರಣ್ಯ ಧಾಮಕ್ಕೆ ಸಾಗಿಸುವುದನ್ನು ಕೈಬಿಟ್ಟ ಅರಣ್ಯ ಇಲಾಖೆಯವರು ಒಂಟಿ ಸಲಗ ಹಿಡಿಯಲು ತೀರ್ಮಾನಿಸಿ ಅದರಂತೆ ಬೆಳಗಿನಿಂದಲೂ ಉಂಬಳಿಬೆಟ್ಟ ಅರಣ್ಯ ಪ್ರದೇಶದಲ್ಲಿ ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಸಿ ಸಂಜೆ 6 ಗಂಟೆ ವೇಳೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದ ತಂಡ ಅದನ್ನು ಉಂಬಳಿಬೆಟ್ಟ ಅರಣ್ಯ ಪ್ರದೇಶದಿಂದ ಮಾಗಡಿಹಳ್ಳಿ ಕ್ಯಾಂಪ್ಗೆ ಸಾಗಿಸಲು ಸತತ 6 ತಾಸು ಪರಿಶ್ರಮ ಪಡಬೇಕಾಯಿತು.
ಕಾಡಾನೆಗಳನ್ನು ಹಿಡಿಯವಲ್ಲಿ ಪ್ರಮುಖ ಪಾತ್ರ ವಹಿಸುವ ಅಭಿಮನ್ಯು ಆನೆಗೆ ಗಾಯವಾಗಿ ಅದರ ದಂತದ ಬಳಿ ರಕ್ತಸ್ರಾವವಾಗುತ್ತಿತ್ತು. ಏನಾದರು ಅಭಿಮನ್ಯು ಹಿಡಿದ ಒಂಟಿ ಸಲಗದೊಂದಿಗೆ ಸ್ಪರ್ಧಿಸಲು ಗಾಯಗೊಂಡು ಹಿಂದೆ ಸರಿದಿದ್ದರೆ ಉಳಿದ 5 ಆನೆಗಳು ಈ ಆನೆಯನ್ನು ಕ್ಯಾಂಪ್ಗೆ ತರಲು ಯಾವುದೇ ಕಾರಣಕ್ಕೂ ಸಾಧ್ಯವಾಗುತ್ತಿರಲಿಲ್ಲ.
ಮಲಗಿದ್ದ ಒಂಟ ಸಲಗ ಏಳಿಸಲು ಸತತ 2 ತಾಸು ಪರಿಶ್ರಮಿಸಿದರೂ ಸಾಧ್ಯವಾಗಲಿಲ್ಲ. ರಾತ್ರಿ 9.30ಕ್ಕೆ ಒಂಟಿ ಸಲಗವನ್ನು ಎದ್ದೇಳಿಸುವಲ್ಲಿ ಸಾಕಾನೆಗಳು ಯಶಸ್ವಿಯಾದವು. ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಆನೆ ಸಾಗಿಸಲು ಸಿದ್ದವಾಗಿದ್ದ ಲಾರಿಗೆ ಒಂಟಿ ಸಲಗವನ್ನೇ ಮೊದಲಿಗೆ ಮತ್ತಿಗೋಡು ಅರಣ್ಯ ಧಾಮಕ್ಕೆ ಸಾಗಿಸಲು ತೀರ್ಮಾನಿಸಲಾಯಿತು.
ಮತ್ತಿಗೋಡು ಆನೆ ಧಾಮದ ಕ್ರಾಲ್ ಒಳಗೆ ಹೋಗುವಾಗಲು ತೀವ್ರ ಹಠ ಮಾಡಿದ ಒಂಟಿ ಸಲಗ ಕಡೆಗೂ ಕ್ರಾಲ್ ಒಳಗೆ ಸೇರಿತು.
ಅಲ್ಲಿಂದ ಮತ್ತೆ ಲಾರಿಗಳು ಹಾಗೂ ಸಾಕಾನೆಗಳು ಆನೆ ಕ್ಯಾಂಪ್ಗೆ ಬರಲು ಸಂಜೆ 5 ಗಂಟೆ ಆದ ಪರಿಣಾಮ ಸೋಮವಾರ ಸೆರೆಯಾಗಿ ಕ್ಯಾಂಪ್ನಲ್ಲಿದ್ದ ಮಕ್ನಾ ಆನೆಯನ್ನು ಬುಧುವಾರ ಸಂಜೆ 8ಯಲ್ಲಿ ಮಾಗಡಿಹಳ್ಳಿ ಕ್ಯಾಂಪಪ್ನಿಂದ ಲಾರಿಯೊಳಗೆ ಏರಿಸಿ ಮತ್ತಿಗೋಡು ಅರಣ್ಯಕ್ಕೆ ಕಳುಹಿಸಲಾಯಿತು.
ಮಕ್ನಾ ಹಾಗೂ ಒಂಟಿ ಸಲಗ ಗ್ರಾಮಗಳಿಗೆ ನುಗ್ಗಿ ದಾಂದಲೆ ನಡೆಸುತ್ತಿದ್ದು, ಇದರಿಂದಾಗಿ ರಾತ್ರಿ ವೇಳೆ ಇರಲಿ ಹಗಲು ಹೊತ್ತಿನಲ್ಲಿ ಈ ಭಾಗದ ಸುತ್ತಮುತ್ತಲ ಗ್ರಾಮಸ್ಥರು ಗದ್ದೆ, ತೋಟಗಳಿಗೆ ಹೋಗಲು ಭಯ ಪಡುತ್ತಿದ್ದರು.
ಆದರೆ ಮಕ್ನಾ ಹಾಗೂ ಒಂಟಿ ಸಲಗದೊಂದಿಗೆ ಇನ್ನೆರಡು ಪುಂಡಾನೆಗಳು ಸಹ ಸೆರೆ ಸಿಕ್ಕಿರುವುದು ಹಾಗೂ ಅರಣ್ಯ ಇಲಾಖೆಯವರು ಎಲ್ಲಾ ಆನೆಗಳನ್ನು ಮಳೆಗಾಲಕ್ಕೂ ಮುಂಚಿತ ಹಿಡಿದೆ ತೀರುತ್ತೇವೆ ಎಂಬ ಪಣ ತೊಟ್ಟಿರುವದು ಈ ಭಾಗದ ಜನರಲ್ಲಿ ನೆಮ್ಮದಿ ಉಂಟು ಮಾಡಿದೆ.
ಸಾಕಾನೆಗಳು ಕ್ಯಾಂಪ್ನಲ್ಲಿ ಇರುವುದರಿಂದ ದೊಡ್ಡಬೆಟ್ಟ, ಚಿಕ್ಕಬೆಟ್ಟ, ರಂಗನಬೆಟ್ಟ, ಕರಡಿಬೆಟ್ಟ, ಪಾರ್ವತಮ್ಮನಬೆಟ್ಟದ ಸುತ್ತಮುತ್ತಲ ಅರಣ್ಯ ಪ್ರದೇಶಗಳಲ್ಲಿ ಎಡಬಿಡದೆ ಪ್ರತ್ಯೇಕ ಗುಂಪುಗಳಾಗಿ ಬೀಡು ಬಿಟ್ಟು ದಾಂದಲೆ ನಡೆಸುತ್ತಿದ್ದವು.
ಆನೆಗಳು ಈಗ ಸಾಕಾನೆಗಳು ಇರುವ ವಾಸನೆ ಗ್ರಹಿಸಿ ಹಾಗೂ ಎರಡು ಆನೆಗಳನ್ನು ಹಿಡಿದುವುದರಿಂದ ಗಾಬರಿಗೊಳಗಾಗಿದ್ದು, ನಮ್ಮನ್ನು ಹಿಡಿಯುತ್ತಾರೆ ಎಂಬ ಭಯದಿಂದ ಈ ಭಾಗದ ಅರಣ್ಯ ಪ್ರದೇಶವನ್ನು ತೊರೆದು
ಯಸಳೂರು, ಕೊಡಗು ಅರಣ್ಯ ಪ್ರದೇಶಕ್ಕೆ ಫಲಾಯನ ಮಾಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

