ಹಾಸನ

ಜೈಂಟ್ ವ್ಹೀಲ್ ತುಂಡು: ನಾಲ್ವರಿಗೆ ಗಾಯ

Published On :

ಸಕಲೇಶಪುರ: ಪಟ್ಟಣದ ಸುಭಾಷ್ ಮೈದಾನದಲ್ಲಿ ನಡೆಯುತ್ತಿದ್ದ ವಸ್ತುಪ್ರದರ್ಶನದ ವೇಳೆ ಜಾಯಿಂಟ್ ವ್ಹೀಲ್ ತುಂಡಾಗಿದ್ದರಿಂದ ಬಿದ್ದು ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮಡಿಕೇರಿಯ ಅಬ್ಬಾಸ್ (50), ಮೈಸೂರಿನ ಕಿಶೋರ್ (27), ಸ್ಥಳೀಯರಾದ ರಿಯಾಸ್ (25), ಕುಶಾಲ ನಗರದ ನಸ್ರೀನ್ (26) ಅವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪ: ಪ್ರತಿವರ್ಷ ನಡೆಯುವ ಈ ವಸ್ತು ಪ್ರದರ್ಶನದ ವೇಳೆ ಪ್ರತಿ ಬಾರಿ ಟೆಂಡರ್ ಕರೆದು, ಭದ್ರತಾ ಕ್ರಮಗಳನ್ನು ಕೂಲಂಕಷ ಪರಿಶೀಲಿಸಿ, ಜಾಯಿಂಟ್ ವ್ಹೀಲ್ ಸ್ಥಾಪಿಸಲು ಅನುಮತಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಹಾಗಾಗಿಲ್ಲ. ಅವಸರದಲ್ಲಿ ಮನಬಂದವರಿಗೆ ಜಾಯಿಂಟ್ ವ್ಹೀಲ್ ಸ್ಥಾಪಿಸಲು ಅನುವು ಮಾಡಲಾಗಿದೆ. ಈ ಬಾರಿ ಜಾಯಿಂಟ್ ವ್ಹೀಲ್ ಸ್ಥಾಪಿಸಿದವರು, ಭದ್ರತಾ ನಿಯಮಗಳನ್ನು ಸರಿಯಾಗಿ ಅಳವಡಿಸದೇ ಇದ್ದ ಕಾರಣದಿಂದ ಈ ಅವಗಢ ನಡೆದಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.