ಬೇಲೂರು ಶನೇಶ್ವರಸ್ವಾಮಿ ರಥೋತ್ಸವ
ಬೇಲೂರು: ಪಟ್ಟಣ ಸಮೀಪದ ಭೀಷ್ಮ (ವಿಷ್ಣುಸಮುದ್ರ ಕೆರೆ) ಕೆರೆ ಕೋಡಿ ಶನೇಶ್ವರಸ್ವಾಮಿಯ ದಿವ್ಯ ರಥೋತ್ಸವವು ಇತ್ತೀಚೆಗೆ ವಿಜೃಂಭಣೆಯಿಂದ ನೆರವೇರಿತು.
ಗಂಗಾಪೂಜೆ, ಮಹಾಭಿಷೇಕ, ಗಣಪತಿ ಪೂಜೆ, ನವಗ್ರಹಪೂಜೆ, ನವಧಾನ್ಯ ಹೀಗೆ ಆರಂಭವಾದ ಪೂಜಾವಿಧಿ- ವಿಧಾನಗಳೊಂದಿಗೆ ಶನೇಶ್ವರಸ್ವಾಮಿ ದಿವ್ಯ ರಥೋತ್ಸವ ಕಾರ್ಯಕ್ರಮ ನಡೆಯಿತು. ರಥೋತ್ಸವದಲ್ಲಿ ಪಟ್ಟಣದ ಭಕ್ತರು ಸೇರಿದಂತೆ ಮಲ್ಲಾಪುರ, ಸನ್ಯಾಸಿಹಳ್ಳಿ, ಬಿಟ್ರವಳ್ಳಿ, ಉತ್ಪಾತನಹಳ್ಳಿ ಮತ್ತು ಸುಮಾರು 25 ಗ್ರಾಮಗಳ ಗ್ರಾಮಸ್ಥರು ಹಾಗೂ ಮುಖಂಡರು ಪಾಲ್ಗೊಂಡಿದ್ದರು. ರಥೋತ್ಸವದ ನಂತರ ನೆರೆದಿದ್ದ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಅಪಘಾತ: 25ಕ್ಕೂ ಹೆಚ್ಚು ಜನರಿಗೆ ಗಾಯ
ಅರಕಲಗೂಡು: ಪಟ್ಟಣದ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ನಡೆದ ಗೂಡ್ಸ್ ವಾಹನದ ಅಪಘಾತವೊಂದರಲ್ಲಿ 25ಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯಗಳಾದ ಘಟನೆ ನಡೆದಿದೆ. ತಾಲೂಕಿನ ಕಂಚೇನಹಳ್ಳಿ ಮತ್ತು ನರಸಿನಕುಪ್ಪೆ ಗ್ರಾಮದ ಕೆಲವರು ಕಾಶೀಪುರದಲ್ಲಿ ಮೃತರೊಬ್ಬರ ಅಂತಿಮ ದರ್ಶನ ಪಡೆದು ಹಿಂದಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ಆಟೋ ಪಟ್ಟಣದ ಹೊರವಲಯದ ತಿರುವಿನಲ್ಲಿ ಚಾಲಕನ ಹತೋಟಿ ತಪ್ಪಿ ಆಟೋ ಮಗುಚಿದೆ. ಇದರಿಂದ ವಾಹನದಲ್ಲಿದ್ದ ಬಹುತೇಕ ಎಲ್ಲರಿಗೂ ತೀವ್ರ ಗಾಯಗಳಾಗಿವೆ. ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡಿದ್ದ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕಳುಹಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

