ರೈತರ ಹೋರಾಟಕ್ಕೆ ವಿದ್ಯಾರ್ಥಿ ಸಂಘಟನೆ ಬೆಂಬಲ
ಅರಸೀಕೆರೆ: ದಶಕಗಳಿಂದ ಬರಗಾಲ ಎದುರಿಸಿ ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿರುವ ತಾಲ್ಲೂಕಿನ ಕೆರೆ ಕೆರೆಗಳಿಗೆ ನೀರು ಒದಗಿಸಬೇಕು ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ತಾಲ್ಲೂಕು ಘಟಕ, ಹಸಿರುಸೇನೆ ವತಿಯಿಂದ ನಡೆಸುತ್ತಿರುವ ಆಹೋರಾತ್ರಿ 5ನೇ ದಿನದ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತ್ಯೇಕವಾಗಿ ಪ್ರತಿಭಟನಾ ಮೆರವಣಿಗೆ, ಧರಣಿ ನಡೆಸಿ ಉಪತಹಶೀಲ್ದಾರ್ ಭಾಗ್ಯಮ್ಮ ಅವರಿಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ್ಗೆ ಮನವಿ: ಪತ್ರಕರ್ತರ ಸಂಘದ ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬೈಕ್ ರ್ಯಾಲಿ ನಡೆಸಿ ತಾಲ್ಲೂಕಿನ ಕೆರೆ ಕೆರೆಗಳಿಗೆ ನೀರು ಒದಗಿಸಬೇಕೆಂದು ಘೋಷಣೆಗಳ್ನು ಕೂಗುತ್ತಾ ತಾಲ್ಲೂಕು ಕಚೇರಿಗೆ ತೆರಳಿ ಧರಣಿ ನಡೆಸಿ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳು ಭಾಗಿ: 500ಕ್ಕೂ ಹೆಚ್ಚು ಎಬಿವಿಪಿ ವಿದ್ಯಾರ್ಥಿಗಳು ಹೊಯ್ಸಳೇಶ್ವರ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಕಚೇರಿಗೆ ತೆರಳಿ ರೈತರೊಂದಿಗೆ ಧರಣಿಯಲ್ಲಿ ಪಾಲ್ಗೊಂಡು ರೈತ ಸಮುದಾಯ ಆರಂಭಿಸಿರುವ ನ್ಯಾಯಯುತ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ತಾಲೂಕಿನ ನಿರ್ಲಕ್ಷ್ಯ: ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್. ಸೇತುರಾಂ ಮಾತನಾಡಿ, ಜಿಲ್ಲೆಯಲ್ಲಿ 5 ನದಿಗಳು ಹರಿಯುತ್ತಿದ್ದರೂ ನೀರು ಒದಗಿಸಲು ಅನೇಕ ಅವಕಾಶಗಳಿದ್ದರೂ ಕಾವೇರಿ, ಕೃಷ್ಣ ಬೇಸನ್ನ ಹೆಸರಿನಲ್ಲಿ ಜಿಲ್ಲಾ ರಾಜಕಾರಣಿಗಳು ತಾಲ್ಲೂಕಿಗೆ ತೀವ್ರ ಅನ್ಯಾಯವೆಸಗಿದ್ದು ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ತಾಲೂಕನ್ನು ನಿರ್ಲಕ್ಷಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಅಧ್ಯಕ್ಷ ಮಾಡಾಳು ಶಿವಲಿಂಗಪ್ಪ ಹಾಗೂ ಆನಂದ್ ಕೌಶಿಕ್ ಮಾತನಾಡಿದರು. ಪತ್ರಕರ್ತರ ಸಂಘದ ಎಲ್ಲಾ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು. ನಂತರ ನಡೆದ ಎಬಿವಿಪಿ ಕಾರ್ಯಕರ್ತರು ಧರಣಿಯನ್ನುದ್ದೇಶಿಸಿ ಎಬಿವಿಪಿ ಜಿಲ್ಲಾ ಸಂಚಾಲಕ ಕಣಕಟ್ಟೆ ಮಂಜು ಮಾತನಾಡಿ, ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ, 3 ಬಾರಿ ಸಂಸತ್ ಸದಸ್ಯರಾಗಿ ಈ ಭಾಗದಿಂದ ಆಯ್ಕೆಯಾಗಿದ್ದರೂ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಸಾಧನೆಯೇನು ಎಂಬುದನ್ನು ತೋರಿಸಬೇಕು ಎಂದು ಅವರು ಒತ್ತಾಯಿಸಿದರು.
ವಿದ್ಯಾರ್ಥಿ ಮುಖಂಡರಾದ ಅಮಿತ್ ಗೌಡ, ಗಿರೀಶ್, ಅಭಿಷೇಕ್, ನಿಂಗರಾಜ್, ವಿದ್ಯಾ, ನಂದಿನಿ, ಸುನಿತಾ, ರೈತ ಮುಖಂಡರಾದ ಮೇಳೇನಹಳ್ಳಿ ನಾಗರಾಜ್, ಮಾಗೇನಹಳ್ಳಿ ಮಲ್ಲಿಕಾರ್ಜುನ್, ಪಾಲಾಕ್ಷಮೂರ್ತಿ, ಬೋರನಕೊಪ್ಪಲು ಶಿವಲಿಂಗಪ್ಪ, ಜವನಹಳ್ಳಿ ನಿಂಗಪ್ಪ, ಅಣ್ಣಾಯಕನಹಳ್ಳಿ ಶಿವಮೂರ್ತಿ, ಬಿ.ಬಿ. ಶಿವಕುಮಾರ್, ರವೀಶ್ ಬಾಬು, ಕುಮಾರ್, ಗಂಗಾಧರ್, ಮಂಜುನಾಥ್, ಸಿದ್ದೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

