ಹಾಸನ

ಬನಶಂಕರಿ ದೇವಾಲಯ ಜೀರ್ಣೋದ್ಧಾರ, ಚಂಡಿಕಾ ಹೋಮ

Published On :

ಜಾವಗಲ್: ಇಲ್ಲಿನ ಇತಿಹಾಸ ಪ್ರಸಿದ್ಧ ಬನಶಂಕರಿ ದೇವಾಲಯ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾಪನಾ ಕಾರ್ಯಕ್ರಮ ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಶುದ್ಧಪುಣ್ಯಾಹ, ಪಂಚಗವ್ಯ, ಗಣಪತಿ ಹೋಮ, ಆಶ್ಲೇಷ ಪೂಜೆ ಮತ್ತು ಆಶ್ಲೇಷ ಬಲಿ ವಾಸ್ತು ಹೋಮ, ನವಗ್ರಹ, ಅನುಜ್ಞಾಹೋಮ, ಕಳಸಪೂಜೆ, ಪವಮಾನ, ಆಶ್ಲೇಷ ಹೋಮ ಪ್ರತಿಷ್ಠಾಪನಾ ಕಾರ್ಯಗಳು ನೆರವೇರಿತು. ಚಂಡಿಕಾ ಹೋಮ, ದುರ್ಗಾ ನಮಸ್ಕಾರ ಹೋಮ, ಅಭಿಷೇಕ ನಡೆದು ಪೂರ್ಣಾಹುತಿ ನೆರವೇರಿತು. ನಂತರ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಮಾಡಲಾಯಿತು. ವೇದಮೂರ್ತಿ ದಿವಾಕರ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು, ಹೋಮಾದಿಗಳು ನಡೆದವು. ದೇವಾಂಗ ಸಂಘದ ಅಧ್ಯಕ್ಷ ಜೆ.ಎಂ.ಶಿವಶಂಕರ್, ಕಾರ್ಯದರ್ಶಿ ಜೆ.ಜಿ.ತಿಮ್ಮಪ್ಪ, ಧರ್ಮರಾಜು. ಮಂಜುನಾಥ್, ಗ್ರಾಮ ಪಂಚಾಯ್ತಿ  ಅಧ್ಯಕ್ಷೆ ಕವಿತಾ ಮಂಜುನಾಥ್, ಸದಸ್ಯ ಜೆ.ಕೆ.ಶ್ರೀನಿವಾಸ್, ಕುಮಾರ್, ರಮೇಶ್, ಜೆ.ಆರ್.ಗಂಗಾಧರಶೆಟ್ಟಿ, ನಿವೃತ್ತ  ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜೆ.ಕೆ.ಅಣ್ಣಪ್ಪಶೆಟ್ಟಿ, ಜೆ.ಎಸ್.ತಿಮ್ಮಶೆಟ್ಟಿ  ಸಮಾಜ ಬಾಂಧವರು, ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.