ಬಿಜೆಪಿ ಬೂತ್ಮಟ್ಟದ ಸಮಾವೇಶ ಇಂದು
ಅರಕಲಗೂಡು: ಪಟ್ಟಣದಲ್ಲಿ ಫೆ. 22ರಂದು ಬಿಜೆಪಿಯ ಬೂತ್ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದ್ದು, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ನಿವೃತ್ತ ಎಂಜಿನಿಯರ್ ಎಂ.ಜಿ. ಸೋಮಶೇಖರ್ ಅವರು, ಭಾರತೀಯ ಜನತಾ ಪಕ್ಷ ಸೇರುತ್ತಿರುವುದಾಗಿ ಘೋಷಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಸರ್ಕಾರಿ ಸೇವೆಯಲ್ಲಿ ಇದ್ದ ಸಂದರ್ಭದಲ್ಲೂ ಜನಸೇವೆ ಮಾಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲೂ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವ ಸಲುವಾಗಿ ಭಾರತೀಯ ಜನತಾ ಪಕ್ಷವನ್ನು ಸೇರುತ್ತಿರುವುದಾಗಿ ತಿಳಿಸಿದ ಅವರು ತಮ್ಮೊಂದಿಗೆ ಸಾವಿರಾರು ಜನರು ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ಫೆ. 22ರಂದು ಪಟ್ಟಣದಲ್ಲಿ ನಡೆಯಲಿರುವ ಬೂತ್ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶದ ಸಂದರ್ಭದಲ್ಲೇ ತಾವು ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ ಅವರು ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಹಲವು ಮುಖಂಡರು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.
ಪರೋಕ್ಷ ಟೀಕೆ: ತಾಲೂಕಿನ ದುಃಸ್ಥಿತಿ ತಮಗೆ ಬೇಸರ ತಂದಿದೆ ಎಂದ ಅವರು ಇಲ್ಲಿ ನಾಯಕರ ತಪ್ಪು ಮಾತ್ರವಲ್ಲ ಮತದಾರರ ಪಾಲೂ ಇದೆ ಎಂದ ಅವರು ತಾವು ಯಾವುದೇ ಸ್ವಹಿತಕ್ಕಾಗಿ ರಾಜಕೀಯ ಸೇರ್ಪಡೆ ಆಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಕೆಲವರು ಬಿಜೆಪಿಯನ್ನು ಏಣಿಯಾಗಿ ಬಳಸಿಕೊಂಡು ಶಾಸಕರೂ ಆದರು. ನಂತರ ಏರಿದ ಏಣಿಯನ್ನೇ ಒದ್ದರು ಎಂದು ಎ. ಮಂಜು ಅವರ ಹೆಸರು ಹೇಳದೇ ಟೀಕಿಸಿದರು. ಇಬ್ಬರು ನಿವೃತ್ತ ಅಧಿಕಾರಿಗಳೂ ಇದೇ ರೀತಿ ಮಾಡಿದ್ದಾರೆ ಎಂದ ಅವರು ತಾವು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಹೊಂದಿದ್ದು, ತಾವು ಬಿಜೆಪಿಯಲ್ಲಿ ಮಾತ್ರ ಇರುತ್ತೇನೆ. ಇಲ್ಲದಿದ್ದಲ್ಲಿ ರಾಜಕೀಯ ನಿವೃತ್ತಿ ಹೊಂದಿ ಮನೆಗೆ ತೆರಳುವುದಾಗಿ ತಿಳಿಸಿದರು.
ರೋಡ್ ಶೋ: ಇದೇ ಸಂದರ್ಭದಲ್ಲಿ ಶನಿವಾರ ಬೆಳಗ್ಗೆ 10.30ರಿಂದ ದೊಡ್ಡಮ್ಮ ದೇವಸ್ಥಾನ ವೃತ್ತದಿಂದ ಸಮಾರಂಭದ ಸ್ಥಳದವರೆಗೆ ಬೈಕ್ ರ್ಯಾಲಿ ಮತ್ತು ಕಾರ್ಯಕ್ರಮಕ್ಕೆ ಆಗಮಿಸಲಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಶಾಸಕ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ ವಿ. ಸೋಮಣ್ಣ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಬಿ.ಬಿ. ಶಿವಪ್ಪ ಸೇರಿದಂತೆ ಹಲವು ಗಣ್ಯರನ್ನು ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು ಮತ್ತು ಕಪ್ಪು ಹಣದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಧರ ರಾಜೇ ಅರಸ್, ನರಸಿನಕುಪ್ಪೆ ರಂಗೇಗೌಡ, ಭಾಸ್ಕರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

