ಮೀನುಗಾರರಿಗೆ ಸರ್ಕಾರದಿಂದ ನ್ಯಾಯ
ಹಾಸನ: ರಾಜ್ಯದ 24 ಜಲಾಶಯಗಳಲ್ಲಿ ಮೀನು ಹಿಡಿಯುವ ಸ್ಥಳೀಯ ಮೀನುಗಾರರಿಗೆ ಪರವಾನಿಗೆ ನೀಡುವ ಆದೇಶವನ್ನು ಸರ್ಕಾರ ಹೊರಡಿಸುವ ಮೂಲಕ ಮೀನುಗಾರರಿಗೆ ಸರ್ಕಾರ ನ್ಯಾಯ ಒದಗಿಸಿದೆ ಎಂದು ದಲಿತ ವಿಮೋಚನ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಘಟನಾ ಸಂಚಾಲಕ ಆರ್. ಮರಿಜೋಸೆಫ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಹೇಮಾವತಿ ಜಲಾಶಯದ ಮೀನುಗಾರರ ಪರವಾಗಿ ನೀಡಿದ ವರದಿಯಿಂದಾಗಿ ರಾಜ್ಯದ ಎಲ್ಲಾ 24 ಜಲಾಶಯಗಳ ಮೀನುಗಾರರಿಗೆ ಸಾಮಾಜಿಕ ನ್ಯಾಯ ಸಿಗುವಂತಾಗಿದ್ದು, ಸರ್ಕಾರ ಜಲಾಶಯಗಳಿಗೆ ನೂತನ ಪಾಲಿಸಿ ಜಾರಿಗೆ ತರುತ್ತಿರುವುದು ಸ್ವಾಗತಾರ್ಹ ಎಂದ ಅವರು, 2 ವರ್ಷಗಳ ಕಾಲ ಹೇಮಾವತಿ ಜಲಾಶಯದ ಮೀನುಗಾರರ ಹಕ್ಕಿಗಾಗಿ ಹೋರಾಟ ಮಾಡಿದ್ದರ ಪ್ರತಿಫಲವಾಗಿ ಹಾಗೂ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ನೀಡಿದ ವರದಿ ಸಾಮಾಜಿಕ ನ್ಯಾಯದ ಪರವಾಗಿದ್ದ ಕಾರಣದಿಂದಾಗಿ ರಾಜ್ಯ ಸರ್ಕಾರವೇ ಮೀನುಗಾರಿಕೆ ಇಲಾಖೆಯಿಂದ ಪರವಾನಗಿ ನೀಡಲು ತೀರ್ಮಾನಿಸಿದೆ ಎಂದು ಹೇಳಿದರು.
ಅಭಿನಂದನೆ ಸಲ್ಲಿಸುತ್ತದೆ: ಪ್ರಸಕ್ತ ಸಾಲಿನ ಜೂನ್, ಜುಲೈನಲ್ಲಿ ಎಲ್ಲಾ ಜಲಾಶಯಗಳ ಮೀನು ಪಾಶುವಾರು ಹಕ್ಕನ್ನು ಹೊಸ ಪಾಲಿಸಿ ತರುವುದರ ಮುಖಾಂತರ ಸರ್ಕಾರ ಜಲಾಶಯದ ಎಲ್ಲಾ ಮೀನುಗಾರರಿಗೆ ಸಾಮಾಜಿಕ ನ್ಯಾಯ ಕೊಡುವಲ್ಲಿ ಮುಖ್ಯ ಮಂತ್ರಿಗಳು ಕೈಗೊಂಡಿರುವ ಕ್ರಮ ಸ್ವಾಗತಾರ್ಹವಾಗಿದ್ದು, ಇದರಿಂದಾಗಿ ಹೊಸ ಬದುಕು ಕಂಡುಕೊಳ್ಳಲಿರುವ ಜಿಲ್ಲೆಯ 600 ಮೀನುಗಾರರ ಕುಟುಂಬಗಳು ಅಭಿನಂದನೆ ಸಲ್ಲಿಸುತ್ತದೆ ಎಂದರು.
ಅಭಿನಂದನೆ: ಈ ನಮ್ಮ ಹೋರಾಟಕ್ಕೆ ಶಾಸಕ ಹಾಗೂ ರೈತ ಹೋರಾಟಗಾರ ಪುಟ್ಟಣಯ್ಯ ಹಾಗೂ ಶಾಸಕ ನರೇಂದ್ರ ಸ್ವಾಮಿ ಅವರು ಸಹ ಬೆಂಬಲಿಸಿ ನ್ಯಾಯ ಸಿಗುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಅವರಿಗೂ ಅಭಿನಂದಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಚಿಕ್ರ ಕಲಾವಿದ ಕೆ.ಟಿ. ಶಿವಪ್ರಸಾದ್, ಮಾದಿಗ ದಂಡೋರ ಟಿ.ಆರ್. ವಿಜಯ್ ಕುಮಾರ್, ಮೀನುಗಾರರ ಮುಖಂಡ ಸುಬ್ರಹ್ಮಣಿ, ರಾಜು ಮತ್ತು ಮೂಡಲಗಿರಿ ಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

