ಹಾಸನ

20 ನಿಮಿಷ 20 ಸುದ್ದಿ

Published On :

ಪರ್ಯಾಯ ವ್ಯವಸ್ಥೆ ಮಾಡದೇಅಡಕೆ ಬೆಳೆ ನಿಷೇಧಿಸಬಾರದು
ರಾಮನಾಥಪುರ: ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಮಾಡದೇ ಕೇಂದ್ರ ಸರ್ಕಾರ ಅಡಕೆ ಬೆಳೆ ನಿಷೇಧ ಮಾಡಕೂಡದು ಎಂದು ಅಡಿಕೆ ಬೆಳೆಗಾರ ಬಸವಾಪಟ್ಟಣದ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ರಾಮನಾಥಪುರದಲ್ಲಿ ಇತ್ತೀಚೆಗೆ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ತಾಲೂಕಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆ ಬೆಳೆಯುತ್ತಿದ್ದೇವೆ. ಹಳದಿ ಮತ್ತು ಕೊಳೆ ರೋಗಗಳಿಂದ ಈ ಭಾಗದ ರೈತರಿಗೆ ಭಾರಿ ನಷ್ಟವಾಗಿದೆ. ಅತ್ತ ಸಾಲದ ಬಾಧೆ ಹೆಚ್ಚಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಈ ಹಂತದಲ್ಲಿ ಸರ್ಕಾರ, ಜನ ಪ್ರತನಿಧಿಗಳು ಹಾಗೂ ತೋಟಗಾರಿಕೆ ಇಲಾಖೆ, ರೈತರ ಸಂಕಷ್ಟ ನಿವಾರಿಸಬೇಕು ಎಂದು ಅವರು ಒತ್ತಾಯವಾಗಿದೆ.

'ಪರಿಸರ ಸಂಪತ್ತು ಮಾತ್ರ ಜನರ ಭವಿಷ್ಯ ಕಾಯಬಲ್ಲದು'
ಹೊಳೆನರಸೀಪುರ: ಯಾವುದೇ ಸಂಪತ್ತಿಗಿಂತ ಪರಿಸರ ಸಂಪತ್ತು ಮಾತ್ರ ಜನರ ಭವಿಷ್ಯ ಕಾಯ ಬಲ್ಲದು ಎಂದು ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರೇಗೌಡ ತಿಳಿಸಿದರು. ಪಡುಲಹಿಪ್ಪೆಯ ಶ್ರೀ ಹೆಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಮೊದಲನೇ ದಿನದ ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಕಾಡುಗಳ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಎಂಬ ಎರಡನೇ ವಿಷಯ ಕುರಿತು ಅವರು ಮಾತನಾಡಿದರು. ಪ್ರಾಣಿ ಪಕ್ಷಿ ಸಂಕುಲಗಳಿಂದ ಕೂಡಿದ ಕಾಡು ಜೀವ ವ್ಯವಸ್ಥೆಯ ಜೀವಾಳವಾಗಿದೆ. ಅದನ್ನು ಉಳಿಸಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ಹೇಳಿದರು. ಹಾಸನ ಲಯನ್ಸ್ ಕ್ಲಬ್ನ ಅಧ್ಯಕ್ಷ ಗಿರೀಶ್ ಕುಮಾರ್, ಹೊಳೆನರಸೀಪುರ ಕ್ಲಬ್ನ ಅಧ್ಯಕ್ಷ  ಮುಕುಂದೇಗೌಡ, ಶಿಬಿರದ ಸಂಯೋಜಕ ಕೆ.ವಿ. ಪಾರ್ಥೇಶ್ ಮತ್ತು ಪ್ರಾಂಶುಪಾಲ ಡಾ.ಜಿ.ಡಿ. ನಾರಾಯಣ ಇದ್ದರು. ಹೊಳೆನರಸೀಪುರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಸವಣ್ಣ ಅಧ್ಯಕ್ಷತೆ  ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕಿ ರಶ್ಮಿ ನಿರೂಪಿಸಿದರು. ಆಂಧ್ರ ಪ್ರದೇಶದ ರಾಷ್ಟ್ರೀಯ ಸ್ವಯಂ ಸೇವಕಿ ಪ್ರಾರ್ಥಿಸಿದರು. ಉತ್ತರ ಪ್ರದೇಶದ ರಾಷ್ಟ್ರೀಯ ಸ್ವಯಂ ಸೇವಕಿ ಸ್ವಾಗತಿಸಿದರು, ಬಿಹಾರದ ರಾಷ್ಟ್ರೀಯ ಸ್ವಯಂ ಸೇವಕಿ ವಂದಿಸಿದರು.



ದಾನಗಳಲ್ಲಿ ಶ್ರೇಷ್ಠವಾದುದು ರಕ್ತದಾನ: ಧರ್ಮಯ್ಯ
ಸಕಲೇಶಪುರ: ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ ಎಂದು ನಿವೃತ್ತ ಪೊಲೀಸ್ ಅಧಿಕಾರಿ (ಡಿಸಿಪಿ) ಧರ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ. ತಾಲೂಕು ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತನಿಧಿ ಆಶ್ರಯದಲ್ಲಿ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಡಾ. ಅಶೋಕ್ ಆಚಾರ್ಯ ಮಾತನಾಡಿದರು. ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್, ಡಿ.ವೈ.ಎಸ್.ಪಿ ಕುಮಾರಸ್ವಾಮಿ, ಸಾರಿಗೆ ನಿರೀಕ್ಷಕ ಅನಿಲ್ ಕುಮಾರ್, ಪುರಸಭಾ ಉಪಾಧ್ಯಕ್ಷ ಮುಖೇಶ್ ಶೆಟ್ಟಿ, ಪಿಎಸ್ಐಗಳಾದ ಜೀವನ್, ಭರತ್ ಗೌಡ, ಬಜರಂಗದಳ ಜಿಲ್ಲಾ ಸಂಚಾಲಕ ವಿಜಯ್ ಕುಮಾರ್, ಬಜರಂಗದಳದ ಪೂರ್ಣಾವಧಿ ಕಾರ್ಯಕರ್ತ ರಘು, ವಿಹೆಚ್ಪಿ ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್ ಹಾಗೂ ಇನ್ನು ಅನೇಕ ಮಂದಿ ಇದ್ದರು.

 ಹೀರೋ ಬೈಕ್ಗಳ ಉಚಿತ ಸರ್ವಿಸ್, ಎಕ್ಸ್ಚೇಂಜ್ ಮೇಳ
ಅರಸೀಕೆರೆ: ಪಟ್ಟಣದ ವಿನಾಯಕ ಮೋಟಾರ್ಸ್ ಇವರ ವತಿಯಿಂದ ಹೀರೋ ಬೈಕ್ಗಳ ಬೃಹತ್ ಉಚಿತ ಸರ್ವೀಸ್ ಕ್ಯಾಂಪ್, ವಾಹನ ಖರೀದಿಸುವವರಿಗೆ ಸಾಲ ಸೌಲಭ್ಯ ಮತ್ತು ಎಕ್ಸ್ಚೇಂಜ್ ಮೇಳವನ್ನು ಏರ್ಪಡಿಸಲಾಗಿತ್ತು.
ಮಾಲೀಕ ಮಹಾಲಿಂಗಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಲ್ಲೂಕು ಮಟ್ಟದಲ್ಲಿ ಇದೇ ಪ್ರಥಮ ಬಾರಿಗೆ ಬೃಹತ್ ಕ್ಯಾಂಪ್ ಆಯೋಜಿಸಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಪುರಸಭಾಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಕ್ಯಾಂಪ್ ಸದ್ಬಳಕೆ ಎಲ್ಲರಿಗೂ ದೊರೆಯಲಿ ಎಂದು ಹಾರೈಸಿದರು.

ಅರಕಲಗೂಡಿನಲ್ಲಿ ಇಂದು ಕೃಷಿ ಉತ್ಸವ
ಅರಕಲಗೂಡು: ಇಲ್ಲಿನ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಫೆ. 23ರಂದು ಕೃಷಿ ಉತ್ಸವ-2014 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ಮಹಾಬಲ ಕುಲಾಲ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ  ನೆರವೇರಿಸಲಿದ್ದು, ಶಾಸಕ ಎ. ಮಂಜು, ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೃಷಿ ಉತ್ಪನ್ನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗೋವಿಂದಪ್ಪ, ಜಂಟಿ ಕಾರ್ಯದರ್ಶಿ ವಾಟಾಳ್ ರಮೇಶ್, ಅಬ್ದುಲ್ ರೆಹಮಾನ್, ಯೋಜನಾಧಿಕಾರಿ ಅಜಿತ್ ಹೆಗ್ಡೆ, ಬೇಲೂರೇಗೌಡ ಸೇರಿದಂತೆ ಹಲವರು ಇದ್ದರು.


'ಹಳ್ಳಿಗಳ ಉದ್ದಾರವಾಗದೆ  ರಾಷ್ಟ್ರೋದ್ಧಾರ ಸಾಧ್ಯವಿಲ್ಲ'
ಹೊಳೆನರಸೀಪುರ: ಭಾರತ ದೇಶ ಹಳ್ಳಿಗಳಿಂದ ಕೂಡಿದ ರಾಷ್ಟ್ರವಾಗಿದ್ದು, ಹಳ್ಳಿಗಳ ಉದ್ಧಾರವಾಗದ ಹೊರತು ರಾಷ್ಟ್ರದ ಉದ್ಧಾರ ಸಾಧ್ಯವಿಲ್ಲ ಎಂದು ಇಲ್ಲಿನ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಕುಸುಮ ಸಣ್ಣಸ್ವಾಮಿ ನುಡಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ತಾಲೂಕಿನ ಅರೇಕಲ್ಲುಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ.ಇರ್ಷಾದ್, ಇ. ಮಧುಸೂದನ್ ಇದ್ದರು. ತಾಪಂ ಸದಸ್ಯೆ ಭಾಗ್ಯವತಿ, ಗ್ರಾಪಂ ಸದಸ್ಯೆ ಪುಟ್ಟಮ್ಮ, ಎಸ್ಡಿಎಂಸಿ ಅಧ್ಯಕ್ಷ ಲೋಕೇಶ್, ಪಟೇಲ್ ರಾಮಚಂದ್ರ, ಡೈರಿ ತಿಮ್ಮೇಗೌಡ ಇದ್ದರು.

 'ಮಾಧ್ಯಮಗಳ ಸದ್ಬಳಕೆಯಿಂದ ಗ್ರಾಮೀಣಾಭಿವೃದ್ಧಿ ಸಾಧ್ಯ'
ಹಾಸನ: ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಹಾಗೂ ಆಕಾಶವಾಣಿಯಂತಹ ಮಾಧ್ಯಮಗಳ ಸದ್ಬಳಕೆಯಿಂದ ಹೇಗೆ ಯುವ ಜನತೆ ಗ್ರಾಮಿಣಾಭಿವೃದ್ಧಿಯಲ್ಲಿ ತೊಡಗಬಹುದು ಎಂಬುದನ್ನು ಹಾಸನ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಎಚ್. ಶ್ರೀನಿವಾಸ್ ತಿಳಿಸಿಕೊಟ್ಟರು.
ಕೌಶಿಕ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ತಂಡದ ವಿಶೇಷ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಗುರುಬಸವರಾಜ್ ಎಲಗಚ್ಚಿನ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿ ಡಾ. ರಕ್ಷಿತ್ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಲಕ್ಷ್ಮೀ ಪ್ರಾರ್ಥಿಸಿದರು. ಶಿಬಿರಾಧಿಕಾರಿ ರಮ್ಯ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಡಾ. ನವೀನ್ ಕುಮಾರ್ ಇದ್ದರು.

 ರಾಮೇಶ್ವರ ದೇಗುಲದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ
ರಾಮನಾಥಪುರ: ಪಟ್ಟಣದ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ನೇತೃತ್ವದಲ್ಲಿ ನೂರಾರು ಮಂದಿ ಭಕ್ತಾದಿಗಳು ಫೆ. 23ರಂದು ಬೆಳಗ್ಗೆ 9ಕ್ಕೆ ಇಲ್ಲಿನ ರಾಮೇಶ್ವರಸ್ವಾಮಿ ದೇವಸ್ಥಾನದಿಂದ ಹೊರಡುವರು ಎಂದು ಪಾದಯಾತ್ರೆ ಸಮಿತಿ ಸದಸ್ಯ ಸಿದ್ದರಾಜು ತಿಳಿಸಿದರು.
ಶಿವರಾತ್ರಿ ಪ್ರಯುಕ್ತ ಸತತ 3ನೇ ಬಾರಿಗೆ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು,     ಕೇರಳಾಪುರ ಸೇರಿದಂತೆ ವಿವಿಧೆಡೆ ಪಾದಯಾತ್ರಿಗಳಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಿದ್ದರಾಜು ತಿಳಿಸಿದರು.
ಹಾಸನದಿಂದಲೂ ಪಾದಯಾತ್ರೆ: ಮಹಾಶಿವರಾತ್ರಿ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹಾಸನದಿಂದ ಭಕ್ತರ ತಂಡವೊಂದು ಫೆ. 21ರಿಂದಲೇ ಪಾದಯಾತ್ರೆ ಹೊರಟಿದೆ. ಫೆ. 26 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಲಿದೆ.


ಕೊರೆದು ಆರು ತಿಂಗಳಾದರೂ ಬೋರ್ವೆಲ್ಗೆ ವಿದ್ಯುತ್ ಇಲ್ಲ

ಅರಸೀಕೆರೆ: ಮುಂಬರುವ ಬೇಸಿಗೆ ಕಾಲದಲ್ಲಿ ಸ್ಥಳೀಯ ಪುರಸಭೆ ಮುನ್ನೆಚ್ಚರಿಕೆ ಕ್ರಮವಾಗಿ  ನಾಗರಿಕರಿಗೆ ಕುಡಿಯುವ ನೀರು ಸರಬರಾಜು ಒದಗಿಸಲು ಸನ್ನದ್ಧವಾಗಿದ್ದರೆ ಮತ್ತೊಂದೆಡೆ  ಬೋರ್ವೆಲ್ ಕೊರೆಸಿ ಆರು ತಿಂಗಳಾದರೂ ವಿದ್ಯುತ್ ಸಂಪರ್ಕ ನೀಡದ ಕಾರಣ ನಾಗರಿಕರು ನೀರಿನ ಬವಣೆಯನ್ನು ಅನುಭವಿಸುತ್ತಿರುವ ನಿದರ್ಶನ ಪಟ್ಟಣದ 19 ನೇ ವಾರ್ಡ್ನಲ್ಲಿ ಕಂಡುಬರುತ್ತಿದೆ.
ನಾಗರಿಕರಿಂದ ಹಿಡಿಶಾಪ: ಪ್ರತಿ ಬಾರಿ ಪಟ್ಟಣದ ಪುರಸಭೆಯಲ್ಲಿ ನಡೆಯುವ ಸಾಮಾನ್ಯ ಸಭೆಗಳು ಕಾಮಗಾರಿಗಳು, ಕೋತಿ ಹಿಡಿಯುವುದು, ನಾಯಿ ಹಿಡಿಯುವುದು, ಆಗಬೇಕಾದ ಕಾಮ ಗಾರಿಗಳು ಸೇರಿದಂತೆ ಆದಾಯ ತರುವ ವಿಷಯಗಳಿಗೆ ಮಾತ್ರ ಸೀಮಿತವಾಗುತ್ತಿ ರುವ ಈ ಸಭೆಗಳು ಕಾಟಾಚಾರದ ಸಭೆಗಳಾಗುತ್ತಿರುವುದಕ್ಕೆ ಈ ಪಟ್ಟಣದ ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಇದಕ್ಕೆ ಜೆಡಿಎಸ್ ಯಾವ ರೀತಿ ಸ್ಪಂದಿಸುತ್ತದೆ ಹಾಗೂ ಈ  ನೂತನ ಬೋರ್ವೆಲ್ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ತನ್ನ ಮೇಲಿನ ಆರೋಪವನ್ನು ಸುಳ್ಳಾಗಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.


ಮನ ಕಾಡುವಂಥ ಕಾವ್ಯ ರಚನೆಯಾಗಬೇಕು: ಶಿವೇಶ್
ಹಾಸನ: ಸಾಹಿತ್ಯ ಸಮ್ಮೇಳನಗಳಲ್ಲಿ ಕವಿಗೋಷ್ಠಿಗಳು ಅತ್ಯವಶ್ಯಕವಾಗಿದ್ದು, ಕಾವ್ಯಗಳು ವ್ಯಕ್ತಿಯ ಮನಸನ್ನು ಕಾಡುವಂತೆ ರಚನೆಯಾಗಬೇಕು ಎಂದು ಸಾಹಿತಿ ಗೊರುರು ಶಿವೇಶ್ ಹೇಳಿದರು.
ಗೊರೂರಿನ ಗೊರೂರು ರಾಮಸ್ವಾಮಿ ಅಯ್ಯಂಗಾರ್ ವೇದಿಕೆಯಲ್ಲಿ ಹಾಸನ ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯದಲ್ಲಿ ಗದ್ಯ ಮತ್ತು ಪದ್ಯಗಳೆರೆಡು ಅತಿ ಮುಖ್ಯವಾಗಿದೆ. ಆದರೆ, ಗದ್ಯವನ್ನು ವಾಚಿಸುವಷ್ಟು ಸುಲಭವಾಗಿ ಪದ್ಯಗಳನ್ನು ವಾಚಿಸಲು ಸಾಧ್ಯವಿಲ್ಲ. ಕಾವ್ಯಗಳ ಗಾತ್ರ ಸಣ್ಣದಾದರು ಅವುಗಳು ವ್ಯಕ್ತಿಯ ಮೇಲೆ ಬಿರುವ ಪರಿಣಾಮ ಮಾತ್ರ ಬಹುದೊಡ್ಡದು. ಕವಿತೆಗಳು ಎಲ್ಲವನ್ನೂ ಹೇಳುವಂತಿರಬಾರದು ಎಂಬುದು ಕವಿಗಳ ಆಶಯವಾಗಿದೆ  ಎಂದರು.
ಗೋಷ್ಠಿಯಲ್ಲಿ ಸಾಹಿತಿಗಳಾದ ಪರಮೇಶ್, ಐಚನಹಳ್ಳಿ ಕೃಷ್ಣಪ್ಪ, ಪ್ರೀತಿ, ಪ್ರದೀಪ್, ರಾಮಕೃಷ್ಣ, ಸಾತ್ವಿಕ್ ಹಾಗೂ ಇತರರು ಕಾವ್ಯ ವಾಚಿಸಿದರು. ಸಾಹಿತ್ಯ ಸಮ್ಮೇಳನಾಧ್ಯಕ್ಷ ಎನ್.ಎಲ್. ಚನ್ನೇಗೌಡ ಅವರು ಕೂಡ ಕಾವ್ಯ ವಾಚಿಸಿದರು.

ರು. 64 ಲಕ್ಷ ಮೊತ್ತದ ಪರಿಹಾರ ವಿತರಣೆ: ಶಾಸಕ ಮಂಜು
ಅರಕಲಗೂಡು: ರಾಷ್ಟ್ರೀಯ ಕುಟುಂಬ ನೆರವು ಯೋಜನೆ ವತಿಯಿಂದ ತಾಲೂಕಿನ 625 ಮಂದಿ ಫಲಾನುಭವಿಗಳಿಗೆ 64.70 ಲಕ್ಷ ರು. ಪರಿಹಾರವನ್ನು ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಎ. ಮಂಜು ತಿಳಿಸಿದರು. ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತಲಾ 10 ಸಾವಿರ ರು.ಗಳ ನೆರವಿನ ಚೆಕ್ಕುಗಳನ್ನು ಫಲಾನುಭವಿಗಳಿಗೆ  ವಿತರಣೆ ಮಾಡಿ ಮಾತನಾಡುತ್ತಾ,ಕಳೆದ 2006ರಿಂದಲೂ ಕೂಡ ಕೆಲವು ತಾಂತ್ರಿಕ ಕಾರಣಗಳಿಂದ ನೆರವಿನ ಹಣ ನೀಡಲಾಗಿರಲಿಲ್ಲ. ನೊಂದ ಇಡೀ ಕುಟುಂಬದ ನೆರವಿಗೆ ಈ ಹಣವನ್ನು ನೀಡಲಾಗುತ್ತಿದ್ದು,ಇದನ್ನು ದುರುಪಯೋಗಪಡಿಸಿಕೊಳ್ಳದೇ ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಸಲಹೆ ಮಾಡಿದರು.
ಈಗ ಪಡೆದಿರುವ ಹಣವನ್ನು ಯಾರಿಗೂ ಕೂಡ ಲಂಚದ ರೂಪದಲ್ಲಿ ಹಣ ನೀಡುವ ಅಗತ್ಯ ಇಲ್ಲ.ಈ ಬಗ್ಗೆ ಏನಾದರೂ ಒತ್ತಡ ಇದ್ದರೇ ತಿಳಿಸಿ ಅಂತಹ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಸರು ಸೂಚಿಸಿದರೆ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.
ತಹಸೀಲ್ದಾರ್ ಜಗದೀಶ್, ತಾಪಂ ಇಒ ಶಿವರಾಮ್ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಜಿಲ್ಲಾಸ್ಪತ್ರೆಯ ಸಾಮರ್ಥ್ಯ ಹೆಚ್ಚಳ: ಸಚಿವ ಪಾಟೀಲ್
ಹಾಸನ: ಹಾಸನದ ನೂತನ ಆಸ್ಪತ್ರೆಯು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಿರುವುದಿಲ್ಲ. ಆದರೆ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನು 350ರಿಂದ 750ಕ್ಕೆ ಹೆಚ್ಚಿಸಲಾಗಿದೆ. ಇದಕ್ಕೆ 7950 ಲಕ್ಷ ರು. ಅನುದಾನ ಮಂಜೂರಾಗಿದೆ. ಇದರಲ್ಲಿ 7725.76 ಲಕ್ಷ ರು. ಬಿಡುಗಡೆ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಅವರು ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರು ವಿಧಾನ ಪರಿಷತ್ನಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಂಉ ಆಟಿಛಡ್ಟಿಟಣ ವಿಭಾಗವನ್ನು 2011ನೇ ಸಾಲಿನಿಂದ ಪ್ರಾರಂಭಿಸಲಾಗಿದೆ. ಸದರಿ ಸಂಸ್ಥೆಯಲ್ಲಿ ಪಿ.ಜಿ. ಸೀಟುಗಳನ್ನು ಹೆಚ್ಚಿಸುವುದು ಸರ್ಕಾರದ ಧ್ಯೇಯ ಉದ್ದೇಶವಾಗಿದೆ. ಹೆಚ್ಚಿನ ಸ್ನಾತಕೋತ್ತರ ಸೀಟುಗಳನ್ನು ಪಡೆಯಲು ಎಂ.ಸಿ.ಐ.ಗೆ ನಿಯಮಾನುಸಾರ ಹಂತಹಂತವಾಗಿ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

'ಪರಿಶಿಷ್ಟ ವರ್ಗದ ಏಳ್ಗೆ ಸಹಿಸದೆ ಅಡ್ಡಗಾಲು'
ರಾಮನಾಥಪುರ: ಕೊಣನೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿ ಕೃಷ್ಣ ಅವರು ಅಧಿಕಾರಿ ಚುಕ್ಕಾಣಿ ಹಿಡಿದ 7 ತಿಂಗಳ ಅಲ್ಪಾವಧಿಯಲ್ಲೇ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಚುರುಕಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿರುವುದು ಕೆಲವು ರಾಜಕೀಯ ಬದ್ಧ ದ್ವೇಷಿಗಳಿಗೆ ನುಂಗಲಾರದ ತುತ್ತಾಗಿದೆ.
ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿರುವುದರ ಜತೆಗೆ ಸಲ್ಲದ ಆರೋಪ ಕುರಿತು ಆಕ್ಷೇಪಿಸಿ ಗ್ರಾಮ ಪಂಚಾಯ್ತಿ ಹಾಲಿ ಸದಸ್ಯೆ ಲತಾ ಲೋಕೇಶ್ ಮಾತನಾಡಿ, ಈಗಿನ ಪಂಚಾಯ್ತಿ ಅಧ್ಯಕ್ಷರು ತಮ್ಮ ದೊರಕಿದ ಅಲ್ಪಾವಧಿಯಲ್ಲೇ ಶಿಥಿಲಗೊಂಡಿದ್ದ ಪಂಚಾಯ್ತಿ ಕಟ್ಟಡ ದುರಸ್ತಿ ಕಾರ್ಯ, ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಸ್ಥಳದಲ್ಲಿ 20 ವಾಣಿಜ್ಯ ಮಳಿಗೆಗಳ ನಿರ್ಮಾಣ ಆರಂಭಿಸಿ ಮುಕ್ತಾಯ ಹಂತಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಅಧ್ಯಕ್ಷ ಸ್ಥಾನ ಪಡೆದು ಅಲ್ಪಾವಧಿಯಲ್ಲಿ ಪಟ್ಟಣದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಿ ಜನರಿಂದ ಪ್ರಶಂಸೆಗೆ ಒಳಗಾಗುತ್ತಿರುವುದು ಕೆಲವು ರಾಜಕೀಯ ವಿರೋಧಿಗಳಿಗೆ ಕಣ್ಣು ಕೆಂಪಾಗಿಸಿದೆ ಎಂದು ಅವರು ಹೇಳಿದ್ದಾರೆ.


 ಯೋಜನಾಧಿಕಾರಿಯಿಂದ ನಾನಾ ಕಾಮಗಾರಿಗಳ ಪರಿಶೀಲನೆ
ಅರಕಲಗೂಡು: ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕಿ ಕೆ.ಆರ್. ಪಲ್ಲವಿ ಅವರು ಇಲ್ಲಿನ ಪಟ್ಟಣ ಪಂಚಾಯ್ತಿಗೆ ಇತ್ತೀಚೆಗೆ ಭೇಟಿ  ನೀಡಿ ನಂತರ ಪಟ್ಟಣದಲ್ಲಿ ನಡೆದಿರುವ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ನಡೆದಿರುವ ಐದು ಕೋಟಿ ರು ವೆಚ್ಚದ ನಾನಾ ಕಾಮಗಾರಿಗಳನ್ನು ಪರಿಶೀಲಿಸಿದರು.
ಪ್ರಸ್ತುತ ನಡೆದಿರುವ ನಾನಾ ಕಾಮಗಾರಿಗಳ ಗುಣಮಟ್ಟದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಗುಣಮಟ್ಟವನ್ನು ಕಾಯ್ದುಕೊಳ್ಳುವ ಜೊತೆಗೇ ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಮುಗಿಸುವಂತೆ ಸಲಹೆ ಇತ್ತರು. ಈ ವೇಳೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ಬಾಬು,ಎಂಜಿನಿಯರ್ ಕೆ.ಆರ್. ಕವಿತ ಇದ್ದರು.

ಕೊಟ್ಟಿಗೆಗೆ ನುಗ್ಗಿ ಹೋರಿ ತಿಂದ ಚಿರತೆ
ಸಕಲೇಶಪುರ: ಚಿರತೆಯೊಂದು ಕೊಟ್ಟಿಗೆಗೆ ನುಗ್ಗಿ ಹೋರಿಯೊಂದನ್ನು ತಿಂದಿರುವ ಘಟನೆ ಪಶ್ಚಿಮಘಟ್ಟದ ತಪ್ಪಲಿನ ಬೆಟ್ಟಕುಮರಿ ಗ್ರಾಮ ಸಮೀಪದ ವದ್ದಳ್ಳಿ ಯಲ್ಲಿ ಇತ್ತೀಚೆಗೆ ನಡೆದಿದೆ.
ಗ್ರಾಮದ ಸತೀಶ್ ಎಂಬುವವರಿಗೆ ಸೇರಿದ ಸುಮಾರು 10 ಸಾವಿರ ಬೆಲೆ ಬಾಳುವ ಹೋರಿಯನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದು. ಕೊಟ್ಟಿಗೆ ಬಾಗಿಲು ಸರಿಯಿಲ್ಲದ ಕಾರಣ ರಾತ್ರಿ ವೇಳೆ ಚಿರತೆಗೆ ಕೊಟ್ಟಿಗೆಯೊಳಕ್ಕೆ ನುಗ್ಗಲು ಅನುಕೂಲವಾಗಿದೆ. ಸ್ಥಳಕ್ಕೆ ಯಸಳೂರು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಭಾಕರ್ ಗುರೂಜಿಗೆ ಶ್ರದ್ಧಾಂಜಲಿ
ಹಾಸನ: ಇತ್ತೀಚೆಗೆ ಇಹಲೋಕ ತ್ಯಜಿಸಿದ ಕನಕಪುರ ಮರಳವಾದ ಆಶ್ರಮದ ಯೋಗ ಪ್ರಭಾಕರ್ ಗುರೂಜಿಯರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಗರದ ಶ್ರೀ ಸೀತಾರಾಮಾಂಜನೇಯ ದೇವಾಲಯದ ಸಭಾಂಗಣದಲ್ಲಿ ಶನಿವಾರ ನಡೆಯಿತು. ಶ್ರೀ ಸುರೇಶ್ ಗುರೂಜಿರ ಸಾನಿಧ್ಯದಲ್ಲಿ ಎರಡು ನಿಮಿಷ ಮೌನ ಆಚರಿಸಿದರು. ಕಟ್ಟಾಯ ಶಿವಕುಮಾರ್ ಮೊದಲಿಗೆ ಪ್ರಭಾಕರ್ ಗುರೂಜಿ ಸಿದ್ದಾಂತದ ಕಿರು ಪರಿಚಯ ಮಾಡಿದರು. ಸಭೆಯಲ್ಲಿ ಎಚ್.ವಿ.ಲಕ್ಷ್ಮಿನಾರಾಯಣ್, ಚಂದ್ರಣ್ಣ ಗುರೂಜಿ, ರತ್ಮಮ್ಮ ಗುರೂಜಿ, ಇಂದ್ರ ಮಾತಾಜಿ ಹಾಗೂ ಸಿದ್ಧಿ ಸಮಾದಿ ಯೋಗದ ದ್ಯಾನಿಗಳು ಹಾಜರಿದ್ದು, ಸ್ವಾಮಿಜಿಯ ಬಗ್ಗೆ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.