ಹಾಸನ

ಅಬಕಾರಿ ಅಧಿಕಾರಿಗಳಿಗೆ ಘೇರಾವ್

Published On :

ಬೇಲೂರು: ನಿಯಮಗಳನ್ನು ಗಾಳಿಗೆ ತೂರಿ ಬಾರ್ ತೆರೆಯಲು ಅವಕಾಶ ಕೊಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪಟ್ಟಣದ ಮದೀನ ಮಸೀದಿ ಸಮಿತಿಯವರು  ಹಾಗೂ ನಿವಾಸಿಗಳು ಸ್ತಳಕ್ಕೆ ಬಂದ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಘೇರಾವ್ ಹಾಕಿ ಹಿಂದಕ್ಕೆ ಕಳುಹಿಸಿದ ಘಟನೆ ಶನಿವಾರ ನಡೆಯಿತು.
ನಿವಾಸಿಗಳಿಂದ ದೂರು: ಪಟ್ಟಣದ ಪುರಸಭೆ ಹಿಂಭಾಗವಿದ್ದ ಬಿ.ಎಸ್. ಚನ್ನಕೇಶವ ಸಿ.ಎಲ್- 2 ರೇಣುಕಾಂಬ  ಮದ್ಯದಂಗಡಿಯನ್ನು ನೆಹರೂ ನಗರಕ್ಕೆ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಅಬಕಾರಿ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಮದೀನಾ ಮಸೀದಿ ಸಮಿತಿ ಸದಸ್ಯರು ಹಾಗೂ ಅಕ್ಕಪಕ್ಕದ ನಿವಾಸಿಗಳು ದೂರಿದ್ದರು. ಮಸೀದಿಯಿಂದ ಬಾರ್‌ವರೆಗೆ ಅಳತೆ ಮಾಡುವಾಗ ಸರಿಯಾದ ರೀತಿಯಲ್ಲಿ ಅಳತೆ ಮಾಡಿಲ್ಲ ಎಂಬುದಾಗಿ ಮಸೀದಿ ಸಮಿತಿ ಹಾಗೂ ನಿವಾಸಿಗಳು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ಅಳತೆ ಮಾಡಲು ಅಬಕಾರಿ ಉಪ ಅಧೀಕ್ಷಕ ಸುನೀಲ್ ಹಾಗೂ ನಿರೀಕ್ಷಕ ಕೇಶವಮೂರ್ತಿ ಹಾಗೂ ಸಿಬ್ಬಂದಿ ಬಂದಿದ್ದರು. ಅಳತೆ ಮಾಡುವಾಗ ಬಾರರ್ನಿಂದ ಮಸೀದಿ ವರೆಗೆ ಪಾದಾಚಾರಿ ರಸ್ತೆಯನ್ನನುಸರಿಸಿ ಅಳತೆ ಮಾಡಲು ಅಬ್ಕಾರಿ ಅಧಿಕಾರಿಗಳು ಮುಂದಾದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಸೀದಿಯವರು ಹಾಗೂ ನಿವಾಸಿಗಳು, ಮಸೀದಿಯಿಂದ ನೇರವಾಗಿ ಬಾರ್‌ವರೆಗೆ ಅಳತೆ ಮಾಡುವಂತೆ ಪಟ್ಟುಹಿಡಿದರು.
ಗೊಂದಲದ ವಾತಾವರಣ: ಅಬಕಾರಿ ನಿಯಮದಂತೆ ತಾವು ಅಳತೆ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿ ಅಳತೆಗೆ ಮುಂದಾದಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭ ಸಬ್ ಇನ್ಸ್‌ಪೆಕ್ಟರ್ ಅಶ್ವಿನ್ ಕುಮಾರ್ ಮಧ್ಯೆ ಪ್ರವೇಶಿಸಿ ಶಾಂತಿಯಿಂದ ಸಮಸ್ಯೆ ಬಗೆಹರಿಸಿಕೊಳ್ಳುಂತೆ ಮನವಿ ಮಾಡಿದರು.
ಮಸೀದಿ ಅಧ್ಯಕ್ಷ ಅಬ್ದುಲ್ ಆಲಿ ಮಾತನಾಡಿ, ಅಬಕಾರಿ ಜಿಲ್ಲಾಧಿಕಾರಿಗೆ ವರದಿ ಕಳಿಸುವ ಸಂದರ್ಭದಲ್ಲಿ ಸ್ಥಳಿಯ ಅಬಕಾರಿ ಅಧಿಕಾರಿಗಳು ಬಾರ್ ಇರುವ ಕಟ್ಟಡದಿಂದ ಮಸೀದಿ ಹಾಗೂ ಸರ್ಕಾರಿ ಕಚೇರಿ 90 ಮೀಟರ್ ಅಂತರದಲ್ಲಿ ಇರುವುದು, ಹಾಗೂ ಬಾರ್ ಗೋಡೆಗೆ ಹೊಂದಿಕೊಂಡಂತೆ ಮನೆಗಳಿದ್ದು ಇವೆಲ್ಲವನ್ನೂ ಮರೆಮಾಚಿ ಸತ್ಯಕ್ಕೆ ದೂರವಾದ ವರಿದಿಯನ್ನು ಕಳಿಸಿದ್ದಾರೆ. ಕೂಡಲೆ ಉನ್ನತ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
ನಂತರ ನಿವಾಸಿಗಳು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಜಗದೀಶ್ ಅವರಿಗೆ ಬಾರ್ ತೆರೆಯದಂತೆ ಮನವಿ ಅರ್ಪಿಸಿದರು.
ತಹಸೀಲ್ದಾರ್ ಸ್ಪಷ್ಟನೆ: ಮನವಿ ಬಗ್ಗೆ ಮಾತನಾಡಿದ ತಹಸೀಲ್ದಾರ್ ಜಗದೀಶ್, ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ನೋಡಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯವಾಗಿದ್ದು, ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಕಳುಸಿಕೊಡುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.