ಹಾಸನ

'ಕುಟುಂಬವೇ ದೊಡ್ಡದು ಎನ್ನುವವರನ್ನು ದೂರವಿಡಿ'

Published On :

ಅರಕಲಗೂಡು: ದೇಶದಿಂದ ಕುಟುಂಬ ದೊಡ್ಡದು ಎಂಬ ಮನಸ್ಥಿತಿ ಪಕ್ಷಗಳನ್ನು ತಿರಸ್ಕರಿಸಿ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಕರೆ ನೀಡಿದರು.
ರಕಲಗೂಡಿನಲ್ಲಿ ಭಾರತೀಯ ಜನತಾ ಪಕ್ಷ ಏರ್ಪಡಿಸಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದ 10 ವರ್ಷಗಳಿಂದ ಕಾಂಗ್ರೆಸ್ ದೇಶದ ಅಧಿಕಾರ ಹಿಡಿದಿದೆ. ದೇಶದ ಅಭಿವೃದ್ಧಿಗಾಗಿ ಆ ಸರ್ಕಾರ ಯಾವ ಕೆಲಸವನ್ನು ಮಾಡಿದೆ ಎಂಬುದನ್ನು ಮತದಾರರು ಮನಗಾಣಬೇಕು ಎಂದರು.
ಜೆಡಿಎಸ್ ಬಗ್ಗೆ ಟೀಕೆ: ದೇಶ ಎಂದರೆ ಕುಟುಂಬಕ್ಕಿಂತ ದೊಡ್ಡದಲ್ಲ ಎಂಬ ಚಿಂತನೆಯ ನಾಯಕರಿದ್ದಾರೆ. ಕೆಲವರಿಗೆ ಕುಟುಂಬಕ್ಕೆ ಅಧಿಕಾರವಿಲ್ಲದಿದ್ದರೆ ತಾವಿಲ್ಲ ಎಂಬ ಧೋರಣೆ ಹೊಂದಿದ್ದಾರೆ. ಜಾತಿ, ಪ್ರಚೋದನೆಗಳ ಮೂಲಕ ರಾಜಕೀಯ ಲಾಭ ಪಡೆಯುವ ನಾಯಕರಿದ್ದು, ಅವರು ಬಿಜೆಪಿಯನ್ನು ಕೋಮುವಾದಿ ಎನ್ನುತ್ತಾ ತಮ್ಮನ್ನು ತಾವು ಜಾತ್ಯಾತೀತರು ಎಂದು ಬಣ್ಣಿಸಿಕೊಳ್ಳುತ್ತಾರೆ ಎಂದು ಜೆಡಿಎಸ್ ಪಕ್ಷವನ್ನು ಕುಟುಕಿದರು.
ಆಗ ಬಿಜೆಪಿ ಇರಲಿಲ್ಲ: ದೇಶದ ರಕ್ಷಣೆಗಾಗಿ ರಾಜಕೀಯ ನಾಯಕತ್ವ ಬೇಕಿದ್ದು,ಸಮರ್ಥವಾಗಿ ದೇಶವನ್ನು ಮುನ್ನಡೆಸಲು ಜನ ನಾಯಕರಾಗಿ ಹೊಮ್ಮಿರುವ ನರೇಂದ್ರ ಮೋದಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.ದೇಶ ಒಡೆದದ್ದು ಕಾಂಗ್ರೆಸ್ ಪಕ್ಷ, ಬಿಜೆಪಿ ಅಲ್ಲ ಎಂದ ಅವರು, ಚೀನ, ಪಾಕಿಸ್ತಾನಗಳನ್ನು ಭಾಗ ಮಾಡಿದಾಗ ಬಿಜೆಪಿ ಇರಲಿಲ್ಲ ಎಂದರು.
ಮುಂದೆ ತಪ್ಪು ಮಾಡಲ್ಲ: ಇನ್ನೆಂದೂ ಈ ಹಿಂದೆ ಮಾಡಿದ ತಪ್ಪನ್ನು ಮಾಡುವುದಿಲ್ಲ ಎಂದು ಹೇಳಿದ ಅವರು, ನಾವು ಮಾಡಿದ ತಪ್ಪಿನ ಅರಿವಾಗಿದೆ. ಮುಖಂಡರ ಒಳಜಗಳ ಮತ್ತು ಸ್ವಾರ್ಥ ಬಿಜೆಪಿ ಎರಡಾಗಲು ಕಾರಣವಾಗಿತ್ತು ಎಂದರು.
ಸಮಾವೇಶದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರೇಣುಕುಮಾರ್, ಸಿ.ಎಸ್. ಕೃಷ್ಣಸ್ವಾಮಿ, ನವಿಲೆ ಅಣ್ಣಪ್ಪ, ಎಂ.ಎಸ್. ಕೃಷ್ಣೇಗೌಡ, ಬಿ.ಕೆ. ಮಂಜುನಾಥ್, ಪತ್ರಕರ್ತ ರಮೇಶ್ ಸುರ್ವೆ,ಮಂಡಲ ಅಧ್ಯಕ್ಷ ಪಿ.ಟಿ. ಕೇಶವೇಗೌಡ, ಎನ್. ರವಿಕುಮಾರ್, ಷಡಾಕ್ಷರಿ ಇತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಪಟ್ಟಣದ ಶ್ರೀ ದೊಡ್ಡಮ್ಮದೇವಿ ದೇವಾಲಯದಿಂದ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.