ಅರ್ಧಂಬರ್ಧ ಭೂಸ್ವಾಧೀನ
ಹಾಸನ ವಿಮಾನ ನಿಲ್ದಾಣಕ್ಕೆ ಒಟ್ಟು 960 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿತ್ತು. ಅದರಲ್ಲೀ ಈಗಾಗಲೇ 536 ಎಕರೆ ಸ್ವಾಧೀನ ಪಡಿಸಲಾಗಿದೆ. ಇನ್ನೂ 434 ಎಕರೆ ಸ್ವಾಧೀನವಾಗಬೇಕಿದೆ. 2007ರ ಸಮ್ಮಿಶ್ರ ಸರ್ಕಾರ, ನಂತರ ಬಿಜೆಪಿ ಸರ್ಕಾರ, ಈಗ ಕಾಂಗ್ರೆಸ್ ಸರ್ಕಾರ ಬಂದಿದ್ದರೂ, ನೆನೆಗುದಿಗೆ ಬಿದ್ದಿರುವ ಯೋಜನೆಗೆ ಮತ್ತೆ ಚಾಲನೆ ನೀಡಲು ಮನಸು ಮಾಡುತ್ತಿಲ್ಲ. ಹೀಗಾಗಿ ಮಹತ್ವಾಕಾಂಕ್ಷೆಯ ಯೋಜನೆಯ ಕನಸು ಸಮಾಧಿಯ ಹಾದಿ ಹಿಡಿದಿದೆ.
ದೇವೇಗೌಡರ ಕನಸಿನ ಕೂಸು
ಅಂದಹಾಗೆ, ಹಾಸನ ವಿಮಾನ ನಿಲ್ದಾಣ ದೇವೇಗೌಡರ ಕನಸಿನ ಕೂಸು. ಅವರು ಪ್ರಧಾನಿಯಾಗಿದ್ದಾಗ ಅಂಕುರಿಸಿದ ಕನಸಿದು. ಆಗಲೇ ವಿಮಾನ ನಿಲ್ದಾಣ ಯೋಜನೆಗೆ ಚಾಲನೆ ಕೊಡಿಸಿದರಾದರೂ, ಅಷ್ಟರೊಳಗೆ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು. ಗೌಡರು ಮಾಜಿಯಾಗುತ್ತಿದ್ದಂತೆಯೇ ಕ್ರಮೇಣ ವಿಮಾನ ನಿಲ್ದಾಣದ ಆಸೆಯೂ ಮಂಕಾಗುತ್ತಾ ಹೋಯಿತು. ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಶಂಕುಸ್ಥಾಪನೆ ಭಾಗ್ಯ ಕಂಡರೂ ನಂತರ ಬಂದ ಮುಖ್ಯಮಂತ್ರಿಗಳ ನಿರಾಸಕ್ತಿಯಿಂದಾಗಿ ಕನಸಿನ ಯೋಜನೆಗೆ ಈಗ ಅಕ್ಷರಶಃ ರೆಕ್ಕೆ ಮುರಿದಿದೆ.
ಸರ್ಕಾರದ ನೆರವಿಲ್ಲ?
ಹಾಲಿ ಸರ್ಕಾರ ನೀಡುತ್ತಿರುವ ಸಬೂಬು ಎಂದರೆ 4 ವಿಮಾನ ನಿಲ್ದಾಣ ಸ್ಥಾಪನೆ ಸಹಭಾಗಿತ್ವ ವಹಿಸಿಕೊಳ್ಳಲು ಖಾಸಗಿ ಕಂಪನಿಗಳು ಮುಂದಾಗುತ್ತಿಲ್ಲ ಅನ್ನೋದು. ಹೀಗಾಗಿ ಈ ಸರ್ಕಾರದ ಅವಧಿಯಲ್ಲೂ ಹಾರುವ ಕನಸು ನನಸಾಗೋದು ಕನಸಿನ ಮಾತು ಎಂದು ಅನಿವಾರ್ಯವಾದರೂ ಒಪ್ಪಿಕೊಳ್ಳಲೇಬೇಕಿದೆ. ಇಂಥ ಅಡೆತಡೆಗಳು ಏನೇ ಇರಲಿ, ಸರ್ಕಾರಗಳ ಇಚ್ಛಾಶಕ್ತಿ ಇಲ್ಲದೆ ಹಾಸನದ ವಿಮಾನ ನಿಲ್ದಾಣದ ಕನಸು ಕಮರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

