'ಮಕ್ಕಳ ಪ್ರಗತಿಯಲ್ಲಿ ಅಡುಗೆ ಸಿಬ್ಬಂದಿ ಶ್ರಮವಿದೆ'
ಜಾವಗಲ್: ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಅಡುಗೆ ಸಿಬ್ಬಂದಿಗಳ ಪರಿಶ್ರಮವೂಅಡಗಿದೆ ಎಂದು ತಾಲೂಕು ಪಂಚಾಯ್ತಿ ಸದಸ್ಯೆ ಲಕ್ಷ್ಮೀ ರವಿಶಂಕರ್ ಅಭಿಪ್ರಾಯ ಪಟ್ಟರು.
ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೋಬಳಿಯ 5 ಕ್ಲಸ್ಟರ್ ವ್ಯಾಪ್ತಿಯ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಶುಚಿ ರುಚಿಗೆ ಗಮನ ನೀಡಬೇಕು. ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸರ್ಕಾರವನ್ನು ಒತ್ತಾಯ ಪಡಿಸಿದರು.
ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್ ಮಾತನಾಡಿ, ಅಡುಗೆ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ತರಬೇತಿ ನೀಡಬೇಕು ಎಂದರು.
ಸಬಲಗೊಳಿಸುವುದು ಮುಖ್ಯ: ಅಕ್ಷರದಾಸೋಹ ಸಹಾಯಕ ನಿರ್ದೇಶಕ ಕೆ.ಬಿ. ಪ್ರಕಾಶ್ ಮಾತನಾಡಿ, ಬಿಸಿಯೂಟ ತಯಾರಿಸುವಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿರುವುದು ಅವರಲ್ಲಿನ ಮಾತೃವಾತ್ಸಲ್ಯ ಹಾಗೂ ಆರ್ಥಿಕವಾಗಿ ಸಬಲಗೊಳಿಸುವುದು ಮುಖ್ಯವಾಗಿದೆ ಎಂದರು.
800ಕ್ಕೂ ಹೆಚ್ಚು ಸಿಬ್ಬಂದಿ: ಅರಸೀಕೆರೆ ತಾಲೂಕಿನಲ್ಲಿ ಅಕ್ಷರ ದಾಸೋಹ ಯೋಜನೆಯಡಿ 496 ಬಿಸಿಯೂಟ ಕೇಂದ್ರಗಳಿದ್ದು, 31000 ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದು 867 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ತರಬೇತಿ: ಮಕ್ಕಳ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಸ್ವಚ್ಛತೆಗೆ ಗಮನ ನೀಡಬೇಕು. ಸಂಪನ್ಮೂಲ ವ್ಯಕ್ತಿಗಳಾದ ನಿವೃತ್ತ ಸಹಾಯಕ ನಿರ್ದೇಶಕ ಮೇಲೆಗೌಡ ಮಿತವ್ಯಯ, ಮಕ್ಕಳ ಸುರಕ್ಷತೆ, ಆರೋಗ್ಯ ಇಲಾಖೆಯ ಬಿ. ಪರಮೇಶ್ ವೈಯಕ್ತಿಕ ಕುರಿತು ಸ್ವಚ್ಛ ಹಾಗೂ ಪೌಷ್ಠಿಕ ಆಹಾರ, ಸಾಂಕ್ರಾಮಿಕ ರೋಗಗಳು ಅಡುಗೆ ಕೋಣೆ ಸುರಕ್ಷತೆ, ವಿಜ್ಞಾನ ಶಿಕ್ಷಕ ಚನ್ನಪ್ಪ, ಕ್ಷೀರಭಾಗ್ಯ, ಆಹಾರ ಪದಾರ್ಥಗಳಲ್ಲಿರುವ ಪೋಷಕಾಂಶಗಳು, ಸಿಲಿಂಡರ್, ಗ್ಯಾಸ್ ಬಳಕೆ ಮತ್ತು ಸುರಕ್ಷತೆ ಬಗ್ಗೆ ಲೋಕೇಶ್ ತರಬೇತಿ ನೀಡಿದರು.
ಶುಚಿತ್ವಕ್ಕೆ ಗಮನ ನೀಡಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪಪ್ರಾಂಶುಪಾಲ ಯೋಗೀಶ್ ಶಾಲೆಯ ಶಿಕ್ಷಕರಂತೆ ಅಡುಗೆ ಸಿಬ್ಬಂದಿಯವರ ಕರ್ತವ್ಯ ಮತ್ತು ಜವಾಬ್ದಾರಿಯು ಮುಖ್ಯವಾಗಿದ್ದು, ಸಮಯಕ್ಕೆ ಮತ್ತು ಶುಚಿತ್ವಕ್ಕೆ ಗಮನ ನೀಡಬೇಕು ಎಂದರು.
ಸಿ.ಆರ್.ಪಿ. ಚಂದ್ರಪ್ಪ, ಹಿರಿಯ ಶಿಕ್ಷಕರಾದ ಪುಟ್ಟಶಂಕರಪ್ಪ, ಚಂದ್ರೇಗೌಡ, ಮರುಳಸಿದ್ದಪ್ಪ ಮಾತನಾಡಿದರು. ರುದ್ರಯ್ಯಡಿಂಗಾಲಿ ಇದ್ದರು. ಹೋಬಳಿಯ 60 ಅಡುಗೆ ಕೇಂದ್ರಗಳ 100ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

