ಸುದ್ದಿ ಸಂಕ್ಷೇಪ
ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಕೊಲೆ
ಹೊಳೆನರಸೀಪುರ: ಯುವಕನೋರ್ವನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಹೊರವಲಯದಲ್ಲಿ ಕೊಡಂಗಿಕೊಪ್ಪಲಿನ ಬಯಲು ಪ್ರದೇಶದಲ್ಲಿ ನಡೆದಿದೆ. ಪಟ್ಟಣದ ಶಿಯಾ ಮೊಹಲ್ಲಾದ ಸಾಧಿಕ್ ಪಾಷ (30) ಎಂಬ ಯುವಕನೇ ಮೃತಪಟ್ಟಿರುವ ದುರ್ದೈವಿ.
ಸಾದಿಕ್ ಪಾಷ ಪೇಂಟರ್ ಆಗಿದ್ದು, ಜೊತೆಯಲ್ಲಿ ಪಟ್ಟಣದಲ್ಲಿ ನಡೆದ ಬಹಳಷ್ಟು ಮನೆಗಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಆದರೆ ಇತ್ತೀಚೆಗೆ ಆತ ತನ್ನ ಕಳ್ಳತನದ ಕೃತ್ಯವನ್ನು ಕೈಬಿಟ್ಟದ್ದನೆಂದು ಹೇಳಲಾಗಿದೆ. ದುರ್ಷ್ಕಕಿ ಸಾದಿಕ್ ಪಾಷನ ತಲೆ ಮೇಲೆ ದಪ್ಪ ಕಲ್ಲನ್ನು ಹಾಕಿ ಕೊಲೆಗೈದಿದ್ದಾರೆ. ಜತೆಗೆ ಆತನ ಮುಖವನ್ನು ಕಲ್ಲಿನಿಂದ ಜಜ್ಜಿ ಗುರುತು ಕಾಣದಂತೆ ಮುಖ ಮತ್ತು ದೇಹ ಸಂಪೂರ್ಣ ವಿರೂಪಗೊಳಿಸಲಾಗಿದೆ. ಸಾದಿಕ್ ಪಾಷ ಇತ್ತೀಚೆಗೆ ಹಳ್ಳಿಮೈಸೂರು ಸಮೀಪದ ಹೊನ್ನಾವರ ಗ್ರಾಮದಲ್ಲಿ ಮನೆಯನ್ನು ಬಾಡಿಗೆ ಪಡೆದು ವಾಸವಾಗಿದ್ದ ಎನ್ನಲಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆ ಸಾದಿಕ್ಪಾಷ ಕುಟುಂಬ ಸ್ಥಳಕ್ಕೆ ಆಗಮಿಸಿ ಶವವನ್ನು ಗುರುತು ಹಿಡಿದರು. ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದ ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಯ್ಯ, ಪಿಎಸ್ಐ ಪಿ. ಶಿವಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ಕಳವು ಆರೋಪಿಗಳ ಬಂಧನ
ಜಾವಗಲ್: ಜಾವಗಲ್ ಹೋಬಳಿ ಹಳೇಕಲ್ಯಾಡಿಯಿಂದ ಸಿಂಗಟಗೆರೆಗೆ ಹೋಗಿರುವ ನಿರಂತರ ಜ್ಯೋತಿ ವಿದ್ಯುತ್ ಲೈನ್ನ ಸುಮಾರು 48 ಸಾವಿರ ರು. ಮೌಲ್ಯದ ವೈರ್ ಮತ್ತಿತರ ವಸ್ತುಗಳನ್ನು ಕಳವು ಮಾಡಿಗ್ಗ 5 ಜನರನ್ನು ಬಂಧಿಸಿರುವ ಪ್ರಕರಣ ಜಾವಗಲ್ ಪೊಲೀಸ್ ಠಾಣೆ ಸರಹದ್ದಿನಲ್ಲಿ ಇತ್ತೀಚೆಗೆ ನಡೆದಿದೆ. ಕಾರವಾರ ಜಿಲ್ಲೆ ಕೋಟೆಮಣಿ ಗ್ರಾಮದ ಲೋಕೇಶ, ಮಂಜಿಗೆರೆಯ ರಾಮಕೃಷ್ಣ, ಅಂಕೋಲ ತಾಲೂಕಿನ ವಿನಾಯಕ, ಅಳುವಳ್ಳಿಯ ಸುರೇಶ, ರಾಜೇಶ, ಎಂಬವರೇ ಬಂಧಿತ ಆರೋಪಿಗಳು. ಹಳೇಕಲ್ಯಾಡಿ ಯಿಂದ ಸಿಂಗಟಗೆರೆಗೆ ಮಾರ್ಗ ನಿರಂತ ಜ್ಯೋತಿ ವಿದ್ಯುತ್ ಲೈನ್ ಕಾಮಗಾರಿಗೆ ಅಳವಡಿಸಿದ ರ್ಯಾಬಿಟ್ ವೈರನ್ನು ಯಾರೋ ಬಿಚ್ಚಿಕೊಂಡು ಟ್ರಾಕ್ಟರ್ನಲ್ಲಿ ಹಾಕಿಕೊಂಡು ಹೋಗುತ್ತಿದ್ದಾರೆಂದು ಗ್ರಾಮಸ್ಥರ ದೂರವಾಣಿ ಕರೆಯ ಮೇರೆಗೆ ಹಾರನಹಳ್ಳಿ ಸೆಸ್ಕ್ ಶಾಖಾಧಿಕಾರಿ ಜಾವಗಲ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಜಾವಗಲ್ ಪಿ.ಎಸ್.ಐ. ಸಿ.ಪಿ. ನವೀನ್ ಸಿಬ್ಬಂದಿ ಶಿವರಾಂ, ಮಲ್ಲೇಶ್, ಮಂಜುನಾಥ್ ಅಮೃತೇಶ್, ಪುನೀತ್ ಬುಧವಾರ ಮಧ್ಯಾಹ್ನ ಸಿಂಗಟಗೆರೆ ಹತ್ತಿರ ನಂಬರ್ ಇಲ್ಲದ ಟ್ರಾಕ್ಟರ್ನಲ್ಲಿ 5 ಜನ ಕೆ.ಪಿ.ಟಿ.ಸಿ.ಎಲ್ ಸೇರಿದ 9 ಸ್ಪ್ಯಾನ್ 110 ಮೀ. ತಂತಿ 3 ಕಂಬದ ಹಾರಿಜೇಂಟರ್, 11 ಕೆ.ವಿ ಪೀನ್ ಇನನ್ಸುಲೇಟರ್ 45 ಕೆ.ಎನ್.ಡಿಕ್ಸ್. ಇನ್ಸುಲೇಟರ್ ಟ್ರ್ಯಾಕ್ಟರ್ನಲ್ಲಿ ಸಾಗಿಸುತ್ತಿರುವುದನ್ನು ತಡೆದು ಪರಿಶೀಲಿಸಿದಾಗ ಕಳವು ಮಾಡಿ ಸಾಗಿಸುತ್ತಿದ್ದು ಪತ್ತೆಯಾಗಿದೆ. ನಂತರ ಆರೋಪಿಗಳನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪರಾರಿಯಾದ ಇಬ್ಬರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
400 ಸೈಜುಗಲ್ಲು ವಶ
ಜಾವಗಲ್ ಹೋಬಳಿ ಸಂಕೀಹಳ್ಳಿ ಗ್ರಾಮದ ಹತ್ತಿರ ಬುಧವಾರ ಸಂಜೆ 7ರಲ್ಲಿ ಎ.ಎಸ್.ಐ ತಿಮ್ಮೇಗೌಡ, ಪುನೀತ್ ಗಸ್ತಿನಲ್ಲಿದಾಗ ಬಾಣಾವರದಿಂದ ಜಾವಗಲ್ ಕಡೆಗೆ ಪರವಾನಗಿ ಇಲ್ಲದೆ ಅಕ್ರಮವಾಗಿ ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ಬರುತ್ತಿದ್ದ 400 ಸೈಜುಗಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ. ಚಾಲಕ ಕೋಳಗುಂದ ಗ್ರಾಮದ ಮಂಜುನಾಥ್ನನ್ನು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಕಲ್ಲುಗಳ ಅಂದಾಜು ಬೆಲೆ ರು. 3200 ಆಗಿದೆ.
ನಾಳೆ ಸಂತೆ ಹರಾಜು
ರಾಮನಾಥಪುರ: ರಾಮನಾಥಪುರ ಗ್ರಾಮ ಪಂಚಾಯ್ತಿಯ 2014-15ನೇ ಸಾಲಿನ ಸಂತೆ ಹಾಗೂ ಇತರೆ ಹರಾಜುಗಳನ್ನು ಫೆ. 25ರಂದು ಬೆಳಗ್ಗೆ 11ಕ್ಕೆ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆಯಲ್ಲಿ ಹರಾಜು ನಡೆಸಲಾಗುವುದು ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜೆ.ಎಂ. ನಟರಾಜ್ ತಿಳಿಸಿದರು. ಗ್ರಾಮ ಪಂಚಾಯ್ತಿಯಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆ ಬರುವ ಹಿನ್ನೆಲೆಯಲ್ಲಿ ಸಂತೆ ಹರಾಜಿಗೆ ತೊಂದರೆಯಾಗದಿರಲು ಗ್ರಾಮ ಪಂಚಾಯ್ತಿ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಿ ಮುಂಚಿತವಾಗಿ ಹರಾಜು ಪ್ರಕ್ರಿಯೆ ಮಾಡಲಾಗುತ್ತಿದೆ ಎಂದರು. ಅಖೈರು ಬಿಡ್ದಾರರನ್ನು ಬಿಟ್ಟು ಉಳಿದವರಿಗೆ ಹರಾಜು ಪೂರ್ಣಗೊಂಡ ಕೂಡಲೇ ಠೇವಣಿ ಮೊಬಗಲನ್ನು ಹಿಂದಿರುಗಿಸಲಾಗುವುದು.
ಸಂಗೀತ ವಿದ್ವಾಂಸರ ಪ್ರತಿಭಟನೆ ಇಂದು
ಅರಕಲಗೂಡು: ಜಿಲ್ಲಾ ಕೇಂದ್ರ ಹಾಸನದಿಂದ ಅರಕಲಗೂಡು, ರಾಮನಾಥಪುರ ಮತ್ತು ಪಿರಿಯಾಪಟ್ಟಣದವರೆಗಿನ ಅಂತರ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ ಮತ್ತು ಇತರೆ 30ಕ್ಕೂ ಹೆಚ್ಚು ಜನ ಸಂಗೀತ ವಿದ್ವಾಂಸರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಪಟ್ಟಣದ ಅ.ನ.ಕೃ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು ನಂತರ ಅ.ನ.ಕೃ ವೃತ್ತದಲ್ಲಿ ಸಂಗೀತ ವಿದ್ವಾಂಸರು ಸಂಗೀತ ಹಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸುವರು. ಆರ್.ಕೆ. ಪದ್ಮನಾಭ ನಡೆಸಲಿರುವ ಪ್ರತಿಭಟನೆಗೆ ಪಟ್ಟಣದ ಸುಮಾರು 30ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದು, ಈ ಮಧ್ಯೆ ಅರಕಲಗೂಡು ಬಂದ್ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ.
ನಾಗರೀಕ ವೇದಿಕೆ ಬೆಂಬಲ: ಆರ್.ಕೆ. ಪದ್ಮನಾಭ ಹಮ್ಮಿಕೊಳ್ಳುತ್ತಿರುವ ಪ್ರತಿಭಟನೆಗೆ ಇಲ್ಲಿನ ನಾಗರಿಕ ವೇದಿಕೆ ತನ್ನ ಬೆಂಬಲ ವ್ಯಕ್ತಪಡಿಸಿದೆ.
ಉದ್ಯೋಗ ಮಾಹಿತಿ ಕೇಂದ್ರಕ್ಕೆ ಚಾಲನೆ
ಹಾಸನ: ನೂತನ ಉದ್ಯೋಗ ಮಾಹಿತಿ ಕೇಂದ್ರ ಹಾಗೂ ಜೆರಾಕ್ಸ್ ಮತ್ತು ಡಿಟಿಪಿ ಸೆಂಟರ್ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್ ನೆರವೇರಿಸಿದರು.
ನಗರದ ಸ್ವಾಭಿಮಾನ ಭವನದಲ್ಲಿ ಭಾನುವಾರ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಧಿಕಾರಿ ಹಾಗೂ ನಿವೃತ್ತ ಅಧಿಕಾರಿಗಳ ಸಂಘದ ವತಿಯಿಂದ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಎಷ್ಟು ಓದಿದರೂ ಸಹ ಉದ್ಯೋಗದ ಬಗ್ಗೆ ಮಾಹಿತಿ ಪಡೆಯದೆ ವಂಚಿತರಾಗುತ್ತಿದ್ದಾರೆ. ಅಂತವರಿಗೆ ಉದ್ಯೋಗದ ಬಗ್ಗೆ ಮಾಹಿತಿ ನೀಡಲು ಈ ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಉದ್ಯೋಗ ಮಾಹಿತಿ ಕೇಂದ್ರ ನಾಮಫಲಕ ಅನಾವರಣಗೊಳಿಸಿದರು. ಲೈಬ್ರರಿ ಸ್ಥಳ ವೀಕ್ಷಿಸಿ, ಮಾಹಿತಿ ನೀಡುವ ಕಂಪ್ಯೂಟರ್ ಕೊಠಡಿಗೆ ತೆರಳಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಧಿಕಾರಿ ಹಾಗೂ ನಿವೃತ್ತ ಅಧಿಕಾರಿಗಳ ಸಂಘದ ಅಧ್ಯಕ್ಷ ನಿರ್ವಾಹಣಯ್ಯ, ಸಂಘದ ಕಾರ್ಯದರ್ಶಿ ಎಂ.ಆರ್. ತಿಮ್ಮಯ್ಯ, ಗೌರಾವಧ್ಯಕ್ಷ ನಿವೃತ್ತ ವಿಭಾಗೀಯ ನಿಯಂತ್ರಣಾಧಿಕಾರಿ ಕೆ. ವೆಂಕಟಯ್ಯ, ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮೂಡಿಗೆರೆಯ ಬಿ.ಎಚ್. ಕೊಮಾರಯ್ಯ ಇತರರು ಇದ್ದರು. ಲಕ್ಷಣ್ ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

