ಹಾಸನ

'ತಪ್ಪದೇ ಮಕ್ಕಳಿಗೆ ಲಸಿಕೆ ಹಾಕಿಸಿ'

Published On :

ಆಲೂರು: ಐದು ವರ್ಷದ ಎಲ್ಲಾ ಮಕ್ಕಳಿಗೂ ತಪ್ಪದೆ ಪೋಷಕರು ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ತಹಸೀಲ್ದಾರ್ ಶಾರದಾಂಬ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಮಕ್ಕಳ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕಿ ಮಾತನಾಡಿದ ಅವರು, ಭಾರವನ್ನು ಪೋಲಿಯೊ ಮುಕ್ತ ರಾಷ್ಟ್ರವನ್ನಾಗಿ ಮಾಡುವಲ್ಲಿ ಸರ್ಕಾರಿ ಪೋಲಿಯೋ ಲಸಿಕಾ ಆಂದೋಲನವನ್ನೇ ನಡೆಸುತ್ತಿದ್ದು, ಇದರ ಸದುಪಯೋಗ ಪಡೆದು ತನ್ನ ಜವಬ್ದಾರಿಯನ್ನು ಪೋಷಕರು ಅರಿತು ನಿರ್ಲಕ್ಷಿಸದಂತೆ ಮಕ್ಕಳಿಗೆ ತಪ್ಪದೆ ಲಸಿಕೆಯನ್ನು ಹಾಕಿಬೇಕು ಎಂದರು. ಪೆಲ್ಸ್ ಪೋಲಿಯೊ ಬೂತ್‌ಗಳಿಗೆ ಮಕ್ಕಳನ್ನು ಕರೆತಂದು ಲಸಿಕೆ ಹಾಕುವಂತೆ ತಿಳಿಸಿದರು. ವೈದ್ಯಾಧಿಕಾರಿ ಡಾ. ತಿಮ್ಮಯ್ಯ ಮಾತನಾಡಿ, ಒಟ್ಟು 83,132 ಜನಸಂಖ್ಯೆ ಇರುವ ತಾಲೂಕಿನಲ್ಲಿ 7,988 ಮಕ್ಕಳು ಐದು ವರ್ಷ ವಯಸ್ಸಿಗೂ ಚಿಕ್ಕವರಿದ್ದಾರೆ. 19,906 ಮನೆಗಳಿದ್ದು ತಾಲೂಕಿನಲ್ಲಿ ಪಟ್ಟಣ ಪ್ರದೇಶದಲ್ಲಿ 1,127 ಮಕ್ಕಳಿದ್ದು, ಗ್ರಾಮೀಣ ಭಾಗದಲ್ಲಿ 6,801 ಮಕ್ಕಳಿದ್ದಾರೆ. ಪಟ್ಟಣದಲ್ಲಿ 2016 ಮನೆಗಳು ಹಾಗೂ ಗ್ರಾಮೀಣ ಭಾಗದಲ್ಲಿ 17,800 ಮನೆಗಳು ಇದ್ದಾವೆ. 46 ಬೂತ್‌ಗಳನ್ನು ನಿರ್ಮಿಸಿದ್ದು, ಗ್ರಾಮೀಣ ಭಾಗದಲ್ಲಿ 42, ಪಟ್ಟಣದಲ್ಲಿ 4 ಬೂತ್‌ಗಳನ್ನು ನಿಯೋಜಿಸಲಾಗಿದೆ. ಒಟ್ಟು 92 ತಂಡಗಳನ್ನು ನಿಯೋಜಿಸಿದ್ದು, ಎಚ್‌ಆರ್‌ಎ ಪ್ರದೇಶಗಳು 102, ಇತರೆ ಹೊಲಸೆ ಪ್ರದೇಶಗಳು 25, ಇದಕ್ಕಾಗಿ ಕಾರ್ಯನಿರ್ವಹಿಸುವವರ ಸಿಬ್ಬಂದಿ 184, 8 ಜನ ಮೇಲ್ವಿಚಾರಕರು, 8 ವಾಹನಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಈಗಾಗಲೇ ಮೊದಲ ಸುತ್ತಿನಲ್ಲಿ ನಗರ ಪ್ರದೇಶದಲ್ಲಿ 1227 ಗುರಿಯನ್ನು ಹೊಂದಿದ್ದು, 1352 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಶೇಕಡಾವಾರು 110.18 ಆಗಿದೆ. ಗ್ರಾಮೀಣ ಪ್ರದೇಶದಲ್ಲಿ ಗುರಿ 7,360 ಆಗಿದ್ದು, 6982 ಮಕ್ಕಳಿಗೆ ಹಾಕಲಾಗಿದೆ. ಶೇ.94.86ರಷ್ಟಾಗಿದೆ. ಒಟ್ಟಾರೆಯಾಗಿ ಶೇ. 97.05ರಷ್ಟು ಸಾಧನೆಯಾಗಿದ್ದು, ಈ ಬಾರಿ ಶೇ. 100ರಷ್ಟು ಸಾಧನೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಡಾ. ಉಮಾದೇವಿ, ಪಪಂ ಹೆಲ್ತ್ ಇನ್ಸ್‌ಪೆಕ್ಟರ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.