ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ವಕೀಲರ ಪ್ರತ್ಯೇಕ ಪ್ರತಿಭಟನೆ
ಹಾಸನ- ಪಿರಿಯಾಪಟ್ಟಣ ರಸ್ತೆಯನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಸೋಮವಾರ ವಕೀಲರೂ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಅ.ನ.ಕೃ ವೃತ್ತಕ್ಕೆ ಬಂದ ವಕೀಲರ ಪ್ರತಿಭಟನೆ ಹಲವು ಗಮನ ಸೆಳೆಯುವ ಘಟನೆಗಳಿಗೆ ಕಾರಣವಾಯಿತು. ಕೆಲ ವಕೀಲರು ಆರ್.ಕೆ. ಪದ್ಮನಾಭ ಅವರು ನಡೆಸುತ್ತಿದ್ದ ಪ್ರತಿಭಟನಾ ವೇದಿಕೆಗೆ ತೆರಳಿದರೆ ಮತ್ತೆ ಕೆಲವರು ಹಿಂದೆ ಉಳಿದರು.
ಈ ನಡುವೆ ಮತ್ತೆ ಕೆಲವರು ಮತ್ತೆ ನ್ಯಾಯಾಲಯದತ್ತ ತೆರಳಿದರೆ, ಉಳಿದ ಕೆಲ ವಕೀಲರುಗಳು ತಾಲೂಕು ಕಚೇರಿಯತ್ತ ತೆರಳಿ ಧರಣಿಗೆ ಕುಳಿತರು.
ಗಂಟೆಗೂ ಹೆಚ್ಚು ಕಾಲ ಧರಣಿ: ವಕೀಲರು ಪ್ರತಿಭಟನಾ ಧರಣಿ ನಡೆಸುತ್ತಿದ್ದಾಗ ತಾಲೂಕು ತಹಸೀಲ್ದಾರರು ಪ್ರತಿಭಟನೆ ಸ್ಥಳಕ್ಕೆ ಬರುವುದನ್ನು ತಡ ಮಾಡಿದರೆಂಬ ಕಾರಣಕ್ಕೆ ತಹಸೀಲ್ದಾರರು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ ಉಪ ವಿಭಾಗಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ಮುಂದುವರೆಸಿದರು. ನಂತರ ವಿಭಾಗಾಧಿಕಾರಿ ಡಾ. ಮಧುಕೇಶರ್, ತಹಸೀಲ್ದಾರ್ ಚಿದಾನಂದ ಇವರುಗಳು ಸ್ಥಳಕ್ಕೆ ಬಂದ ನಂತರ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ. ಚಂದ್ರಶೇಖರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಸಿ. ರಾಜೇಶ್, ಹಿರಿಯ ವಕೀಲರಾದ ಎಸ್.ಪಿ. ಜಯಪ್ಪ, ಎಂ.ಟಿ. ಸತ್ಯನಾರಾಯಣ, ಶಂಕರಯ್ಯ, ಮಾಜಿ ಕಾರ್ಯದರ್ಶಿ ಪ್ರಕಾಶ್ ಇತರರು ವಹಿಸಿದ್ದರು.
ತಮಗೆ ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ ಕುರಿತು ರಾಗ ದ್ವೇಷಗಳಿಂದ ತಾವು ಪ್ರತಿಭಟನೆಗೆ ಮುಂದಾಗಿಲ್ಲ, ನಮಗೆ ಎಲ್ಲರೂ ಒಂದೇ, ನಮ್ಮವರೇ. ನಮ್ಮ ಮೂಲ ಉದ್ದೇಶ ಸರ್ಕಾರದ ಗಮನ ಸೆಳೆಯುವುದು ಮಾತ್ರವಾಗಿದೆ. ತಾಲೂಕು ಮತ್ತು ಜಿಲ್ಲೆಯನ್ನು ಕಳೆದ ಮೂವತ್ತು ವರ್ಷಗಳಿಂದಲೂ ನಿರ್ಲಕ್ಷಿಸಲಾಗುತ್ತಿದೆ.
ಟಿ ಆರ್.ಕೆ. ಪದ್ಮನಾಭ, ಸಂಗೀತ ವಿದ್ವಾಂಸ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

