ಪ್ರತ್ಯೇಕ ಅಪಘಾತ: ಐವರ ಸಾವು
ಕನ್ನಡಪ್ರಭ ವಾರ್ತೆ ಹಾಸನ್ಣ ಫೆ 24
ಜಿಲ್ಲೆಯ ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಐವರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಬೆಂಗಳೂರು ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬೆಳವಾಡಿ ಹೋಬಳಿ ಅದ್ರಿ ಗ್ರಾಮದ ಸಿದ್ದರಾಜು(35) ರವರು ಗ್ರಾಮದವರಾದ ಹನುಮಂತರಾಜು, ರವಿಕುಮಾರ್, ಶ್ರೀನಿವಾಸ, ಗೋವಿಂದರಾಜು, ಕುಮಾರ್ ಇತರರೊಂದಿಗೆ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗಲು ಹಾಸನ ತಾಲೂಕಿನ ಬೂವನಹಳ್ಳಿ ಕ್ರಾಸ್, ಬಿ.ಎಂ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಕಾರು ಚಾಲಕನ ನಿರ್ಲಕ್ಷ್ಯದಿಂದ ಡಿಕ್ಕಿ ಹೊಡೆದ ಪರಿಣಾಮ ಪೆಟ್ಟು ಬಿದ್ದು ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸುವ ಸಂದರ್ಭದಲ್ಲಿ ಸಿದ್ದರಾಜು ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿ ರಾಜು ರವರು ಹಾಸನ ಸಂಚಾರಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹಾಸನದ ಸಾಲಗಾಮೆ ರಸ್ತೆ ವಾಸಿ ಚನ್ನಶೆಟ್ಟಿ (80) ಸರ್ಕಾರಿ ಎಂಜಿನಿಯರ್ ಕಾಲೇಜು ಗೇಟ್ ಹತ್ತಿರ ಕರ್ನಾಟಕ ಮಟನ್ ಸ್ಟಾಲ್ ಮುಂದೆ ಸಂಜೀವಿನಿ ಆಸ್ಪತ್ರೆ ಕಡೆಯಿಂದ ತರಕಾರಿ ತೆಗೆದುಕೊಂಡು ಹೋಗುತ್ತಿದ್ದಾಗ ಬೈಕ್ ಚಾಲಕನ ನಿರ್ಲಕ್ಷ್ಯತೆಯಿಂದ ಚನ್ನಶೆಟ್ಟಿ ರವರಿಗೆ ಡಿಕ್ಕಿ ಹೊಡಿದ ಪರಿಣಾಮ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಂಬಂಧಿ ಶ್ರೀಧರ್ ಹಾಸನ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರರಕಣ ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಚನ್ನರಾಯಪಟ್ಟಣ ತಾಲೂಕಿನ ಜೋಗಿಪುರ ಗ್ರಾಮದ ರಂಗಸ್ವಾಮಿ (44) ರವರು ಸೈಕಲ್ನಲ್ಲಿ ಚನ್ನರಾಯಪಟ್ಟಣ ತಾಲೂಕು, ಜೋಗಿಪುರ ಗೇಟ್, ಎನ್.ಎಚ್-78 ಬಿ.ಎಂ. ರಸ್ತೆ ದಾಟುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಮಾರುತಿ ಕಾರಿನ ಚಾಲಕನ ನಿರ್ಲಕ್ಷ್ಯತೆಯಿಂದ ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ರಂಗಸ್ವಾಮಿಗೆ ತೀವ್ರ ಗಾಯಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿ ರವರು ಸುರೇಗೌಡ ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಹೋಬಳಿ, ಸೊಸಲಗೆರೆ ಗ್ರಾಮ ವಾಸಿ ಮೂಡ್ಲಿಗಿರಿಯಯ್ಯ(55) ರವರು ಸಂಬಂಧಿಕ ಗಂಗಯ್ಯ ರವರ ಬೈಕಿನಲ್ಲಿ ನವಿಲೆ ಹೋಸೂರು ಗ್ರಾಮಕ್ಕೆ ಹಬ್ಬಕ್ಕೆ ಹೋಗಿ ವಾಪಸ್ ಊರಿಗೆ ಹೋಗಲು ಚನ್ನರಾಯಪಟ್ಟಣ- ತಿಪಟೂರು ರಸ್ತೆ, ಯಾಚೇನಹಳ್ಳಿಗೇಟ್ ಹತ್ತಿರ ಹೋಗುತ್ತಿದ್ದಾಗ ಚನ್ನರಾಯಪಟ್ಟಣ ಕಡೆಯಿಂದ ಬಂದ ಲಾರಿ ಚಾಲಕನ ನಿರ್ಲಕ್ಷ್ಯತೆಯಿಂದ ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಮೂಡ್ಲಿಗಿರಿಯಯ್ಯ ರಿಗೆ ತೀವ್ರ ಗಾಯಗಳಾಗಿ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೂಡ್ಲಗಿರಿಯಯ್ಯ ಮೃತಪಟ್ಟಿದ್ದಾರೆ. ಸಂಬಂಧಿಕ ಶ್ರೀನಿವಾಸ ರವರು ನುಗ್ಗೇಹಳ್ಳಿ ಠಾಣೆ ದೂರು ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿ, ಮರ್ಕುಲಿಕೊಪ್ಪಲು ಗ್ರಾಮದ ತಮ್ಮಯ್ಯ(35)ರವರ ಜಮೀನಿನಲ್ಲಿ ಜೆಸಿಬಿಯಿಂದ ಟ್ರೆಂಚನ್ನು ತೆಗೆಸುತ್ತಿದ್ದಾಗ ಜೆಸಿಬಿ ಚಾಲಕನ ನಿರ್ಲಕ್ಷ್ಯತೆಯಿಂದ ಬಿಸಿಬಿ ಯಂತ್ರದ ಬಕೆಟ್ ತಮ್ಮಯ ರವರ ತಲೆಯ ಬಿದ್ದ ಪರಿಣಾಮ ತೀವ್ರ ಗಾಯಗಳಾಗಿ ತಮ್ಮಯ್ಯ ಸ್ಥಳದಲ್ಲೇ ಮೃಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿ ಶಶಿಕುಮಾರ್ ಶಾಂತಿಗ್ರಾಮ ಠಾಣೆಗೆ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

