ಹಾಸನ

ಮಟ್ಕಾ ಜೂಜು: ಮೂವರ ಸೆರೆ

Published On :

ಹಾಸನ: ನಗರದ ಪ್ರತ್ಯೇಕ ಪ್ರಕರಣದಲ್ಲಿ ಮಟ್ಕಾ ಜೂಜಾಡುತ್ತಿದ್ದ ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ.
ನಗರದ ಚನ್ನಪಟ್ಟಣ ಅರಳೆಕಟ್ಟೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಬೈಕಿನ ಮೇಲೆ ಕುಳಿತುಕೊಂಡು ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ 11ಗೆ  80ಕೊಡುವುದಾಗಿ ಮಟ್ಕಾ ಜೂಜಾಡುಸುತ್ತಿದ್ದ ಮಂಜುನಾಥ್ (37)ನ್ನು ಬಂಧಿಸಿದ್ದು,   ಜೂಜಾಟದಿಂದ ಗಳಿಸಿದ್ದ 280 ನಗದು ಮತ್ತು ಬೈಕನ್ನು ವಶಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹಾಸನದ ಕಸ್ತೂರಿ ಬಾ ರಸ್ತೆ, ಕಟ್ಟಿನಕೆರೆ ಮಾರ್ಕೆಟ್ ಹತ್ತಿರ ಸಾರ್ವಜನಿಕರನ್ನು ವಂಚಿಸುವ ಉದ್ದೇಶದಿಂದ 1ಗೆ  80 ಕೊಡುವುದಾಗಿ ಮಟ್ಕಾ-ಜೂಜಾಟಾಡುತ್ತಿದ್ದ ಮಸ್ತಾಫ್ (19) ಮತ್ತು ಅಬ್ದುಲ್ ರಜಾಕ್(32)ನ್ನು ಬಂಧಿಸಿದ್ದು, ಜಾಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 3,000ವನ್ನು ವಶಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.