ಹಲ್ಲೆ: ಪಿಎಸ್ಐ ಆರೋಗ್ಯಪ್ಪ ವಜಾಕ್ಕೆ ಆಗ್ರಹ
ಬೇಲೂರು: ಮಾಜಿ ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮೋಹನ್ ಕುಮಾರ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಅರೇಹಳ್ಳಿ ಪಿಎಸ್ಐ ಆರೋಗ್ಯಪ್ಪನವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ತಾಲೂಕು ಪಂಚಾಯ್ತಿ ಸದಸ್ಯರು ಆಗ್ರಹಿಸಿದರು.
ತಾಪಂ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾಜಿ ಉಪಾಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಕಳೆದ ಡಿಸೆಂಬರ್ನಲ್ಲಿ ಬಿಕ್ಕೋಡು ಕೋಡಿಮಠದಲ್ಲಿ ನಡೆದ ಕಾರ್ತಿಕೋತ್ಸವ ಸಂದರ್ಭ ಅರೇಹಳ್ಳಿ ಪೊಲೀಸ್ ಠಾಣೆಯಿಂದ ಬಂದಿದ್ದ ಇಬ್ಬರು ಪಿಸಿ ಕುಡಿದು ಅಸಭ್ಯವಾಗಿ ವರ್ತಿಸಿ ಗಲಾಟೆ ಮಾಡಿದ್ದರು. ಈ ಬಗ್ಗೆ ಕೋಡಿ ಮಠದ ಶ್ರೀಗಳ ಮಗನಕ್ಕೆ ತರಲಾಗಿ ಪತ್ರಿಕೆಯವರ ಗಮನಕ್ಕೆ ತರುವಂತೆ ಸೂಚಿಸಿದ್ದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಪೇದೆಗಳ ದುರ್ನಡತೆ ಬಗ್ಗೆ ಹೇಳಲಾಗಿತ್ತು. ಇದನ್ನೇ ಮನಸಿನಲ್ಲಿಟ್ಟು ಕೊಂಡಿದ್ದ ಪಿಎಸ್ಐ ಆರೋಗ್ಯಪ್ಪ ಕಳೆದ ವಾರ ಸಂಜೆ 7ರಲ್ಲಿ ಬಿಕ್ಕೋಡು ಗ್ರಾಮದಿಂದ ತಾವು ಬರುತ್ತಿದ್ದ ವೇಳೆ ನನ್ನ ಬೈಕ್ ತಡೆದು ಲೈಸೆನ್ಸ್ ಕೇಳಿದರು. ಲೈಸೆನ್ಸ್ ಮನೆಯಲ್ಲಿದೆ ಎಂದು ಹೇಳಿದಾಗ ತಮ್ಮ ಜೀಪಿನಿಂದ ಇಳಿದು ಅವಾಚ್ಯ ಶಬ್ಧದಿಂದ ನಿಂದಿಸಿ ಹಲ್ಲೆ ಮಾಡಿದರು. ಅಲ್ಲದೆ ತಮ್ಮ ಜೀಪಿನಲ್ಲಿ ಚಾಲಕ ಪರಮೇಶ್ನೊಂದಿಗೆ ಬಲವಂತವಾಗಿ ಕೂರಿಸಿಕೊಂಡು ಮನಬಂದಂತೆ ಥಳಿಸಿ ಠಾಣೆಗೆ ಕರೆದುಕೊಂಡು ಬಂದು ಹಿಂಸೆ ನೀಡಿದರು.
ತಾವು ತಮ್ಮ 20 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಮರಳು ಮಾಫಿಯಾ, ಇತರ ದಂಧೆ ನಡೆಸಿಲ್ಲ ಮತ್ತು ಯಾವುದೇ ದೂರು ದಾಖಲಾಗಿಲ್ಲ. ಎಂದರು.
ತಾಪಂ ಸದಸ್ಯ ಬಲ್ಲೇನಹಳ್ಳಿ ರವಿ ಮಾತನಾಡಿ, ಅರೇಹಳ್ಳಿ ಸುತ್ತಮುತ್ತ ಮರಳು ದಂದೆ, ಮರಗಳ್ಳತನ, ಇಸ್ಪೀಟು, ಪೆಟ್ರೋಲ್ ದಂಧೆ, ಪೊಲೀಸರ ಕಣ್ಣಮುಂದೆ ನಡೆಯುತ್ತಿದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳದೇ ಜಾಣ ಕುರುಡರಂತಿದ್ದಾರೆ. ಹಿಂದಿನ ಹಗೆಯನ್ನಿಟ್ಟುಕೊಂಡು ಅಮಾಯಕರ ಮೇಲೆ ಕೇಸು ಹಾಕಿ ಅವರನ್ನು ಥಳಸುವುದು ಅವರ ಹಿಟ್ಲರ್ ಸಂಸ್ಕೃತಿಯನ್ನು ತೋರಿಸುತ್ತಿದೆ.
ಜನಪ್ರತಿನಿಧಿಗಳ ಮೇಲೆ ಪೋಲಿಸರು ದೌರ್ಜನ್ಯ ತೋರಿಸಿದರೆ ಇನ್ನು ಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು. ತಾಪಂ ಸದಸ್ಯ ಪರ್ವತಯ್ಯ ಮಾತನಾಡಿ, ಜನಪ್ರತಿನಿಧಿ ಮೇಲೆ ಅನುಚಿತವಾಗಿ ನಡೆದುಕೊಂಡಿರುವ ಪಿಎಸ್ ಐ ಆರೋಗ್ಯಪ್ಪ ನವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇನ್ನು 2 ದಿನದಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಗಳ ಜೊತೆಗೂಡಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು. ತಾಪಂ ಸದಸ್ಯ ಶೇಖರಯ್ಯ, ಸೋಮಶೇಖರ್, ಗಂಗಮ್ಮ, ಕಮಲಾ ಚೆನ್ನಪ್ಪ ಮಾತನಾಡಿದರು. ಸಭೆಯಲ್ಲಿ ತಾಪಂ ಅಧ್ಯಕ್ಷೆ ಸುಮಿತ್ರಮ್ಮ, ಉಪಾಧ್ಯಕ್ಷೆ ಕಮಲಮ್ಮ, ಇಒ ಐಯ್ಯಣ್ಣನವರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

