ಲೋಕಾಯುಕ್ತರ ಪ್ರವಾಸ ಇಂದು
ಹಾಸನ: ಲೋಕಾಯುಕ್ತ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ಹಾಗೂ ಪೊಲೀಸ್ ಉಪಾಧಿಕ್ಷಕರು ಮತ್ತು ಪೊಲೀಸ್ ನಿರೀಕ್ಷಕರು ಮತ್ತು ತಂಡದವರು ಫೆ.26 ರಂದು ಬೇಲೂರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಹಾಸನ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಧ್ಯಾಹ 2 ರಿಂದ ಸಂಜೆ 5.30 ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.
ವಿದ್ಯುತ್ ಸಂಪರ್ಕ: ಸಾರ್ವಜನಿಕರಿಗೆ ಎಚ್ಚರಿಕೆ
ಹಾಸನ: ಹಾಲಿ ಇರುವ 66 ಕೆ.ವಿ. ಹಾಸನ ಅರಕಲಗೂಡು ವಿದ್ಯುತ್ ಮಾರ್ಗದ ಮಧ್ಯೆ ಅಂದರೆ ಪಿರುಮನಹಳ್ಳಿ ವ್ಯಾಪ್ತಿಯ ಪ್ರಿಕಾಟ್ ಮೆರಿಡಿಯನ್ ಲಿಮಿಟೆಡ್, ಪಿರುಮನಹಳ್ಳಿ ಕೈಗಾರಿಕ ಪ್ರದೇಶ, ಹಾಸನ ಇವರ ಕೇಂದ್ರದವರೆಗೆ ನೂತನವಾಗಿ ನಿರ್ಮಿಸಿರುವ ವಿದ್ಯುತ್ ಮಾರ್ಗವನ್ನು ಫೆ.26 ರಂದು ಅಥವಾ ನಂತರದ ದಿನಗಳಲ್ಲಿ 66ಕೆ.ವಿ ವಿದ್ಯುತ್ನ್ನು ಹರಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಈ ಮಾರ್ಗದ ವಿದ್ಯುತ್ ಗೋಪುರವನ್ನು ಹತ್ತುವುದಾಗಲಿ, ಅವುಗಳಿಗೆ ದನ- ಕರುಗಳನ್ನು ಕಟ್ಟುವುದಾಗಲಿ, ಹಸಿರು ಬಳ್ಳಿ ಅಥವಾ ಲೋಹದ ತಂತಿಗಳನ್ನು ಎಸೆಯುವುದಾಗಲಿ ಮಾಡಬಾರದು. ಇದರಿಂದ ಸಾರ್ವಜನಿಕರ ಆಸ್ತಿ- ಪಾಸ್ತಿ ಮತ್ತು ಪ್ರಾಣಕ್ಕೆ ಹಾನಿಯಾಗುವ ಸಂಭವವಿದೆ. ಮೇಲೆ ತಿಳಿಸಿರುವ ಯಾವುದೇ ತರಹದ ದುಷ್ಕತ್ಯಗಳಿಗೆ ಒಳಗೊಂಡ ಅಪಘಾತ ಅಥವಾ ಹಾನಿ ಸಂಭವಿಸಿದರೆ ಅವರೇ ಜವಾಬ್ದಾರರಾಗಿರುತ್ತಾರೆ. ಸಾರ್ವಜನಿಕರ ಬೇಜವಾಬ್ದಾರಿಯಿಂದ ಆಗುವ ಅನಾಹುತಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜವಾಬ್ದಾರಿಯಾಗುವುದಿಲ್ಲ ಎಂದು ಕಾರ್ಯ ನಿರ್ವಾಹಕ ಎಂಜಿನಿಯರ್ ಎನ್.ಎಂ. ರೇವಣಸಿದ್ದಪ್ಪ ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

