ಧರ್ಮಸ್ಥಳ ಪಾದಯಾತ್ರಿಗಳಿಗೆ ಭೋಜನ, ಪಾನೀಯ
ಬೇಲೂರು: ಧರ್ಮಸ್ಥಳಕ್ಕೆ ತೆರಳುವ ಪಾದಾಯಾತ್ರಿಗಳಿಗೆ ಹಸಿವು ನೀಗಿಸಲು ಹಾಗೂ ಬಾಯಾರಿಕೆ ಇಂಗಿಸಲು ಉಪಾಹಾರ, ಭೋಜನ ಹಾಗೂ ಕಾಫಿ ಟೀ ವ್ಯವಸ್ಥೆಯನ್ನು ಬೆಳಗಿನಿಂದ ರಾತ್ರಿವರೆಗೆ 5 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಯೂನಿಟಿ ಆಸೋಸಿಯೇಷನ್ಸ್ ವತಿಯಿಂದ ನೀಡಲಾಯಿತು.
ಬೇಲೂರು ಪಟ್ಟಣ ಸಮೀಪದ ನೆಟ್ಟೆಕೆರೆ ಕ್ರಾಸ್ಬಳಿ ದೊಡ್ಡ ಶಾಮಿಯಾನ ಹಾಕಿಸಿ ಧರ್ಮಸ್ಥಳಕ್ಕೆ ತೆರಳುತ್ತಿರುವ ಪಾದಾಯಾತ್ರಿಗಳಿಗೆ ಯೂನಿಟಿ ಅಸೋಸಿಯೇಷನ್ ವತಿಯಿಂದ ಹಸಿವು ಹಾಗೂ ದಾಹವನ್ನು ತಣಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಇಲ್ಲಿನ ಭಾರತ್ ಪಟ್ರೇಲ್ ಬಂಕ್ ಮಾಲೀಕ ಹಾಗೂ ಗುತ್ತಿಗೆದಾರ ಸೈಯದ್ ತೌಫಿಕ್ ನೇತೃತ್ವದಲ್ಲಿ ನಡೆದ ದಾಸೋಹ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭೋಜನ ಸವಿದರು.
ಎಲ್ಲೆಡೆ ಕೋಮುಭಾವನೆ ತುಂಬಿ ಪರಸ್ಪರ ಹಲ್ಲೆ, ನಿಂದನೆಯಲ್ಲಿ ತೊಡಗುತ್ತಿರುವ ಸಂದರ್ಭದಲ್ಲಿ ಹೆಚ್ಚಾಗಿ ಮುಸಲ್ಮಾನ ಯುವಕರೇ ನೇತೃತ್ವ ವಹಿಸಿಕೊಂಡು ಪಾದಯಾತ್ರಿಗಳಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸುತ್ತಿರುವುದು ತಾಲೂಕಿನಲ್ಲಿ ಹಿಂದೂ ಮತ್ತು ಮುಸ್ಲಿಂ ಜನಾಂಗದ ನಡುವೆ ಇರುವ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ನೆಟ್ಟೆಕೆರೆ ಬಳಿ ಶಾಮಿಯಾನ ಹಾಕಿಸಿ ಧರ್ಮಸ್ಥಳಕ್ಕೆ ತೆರಳುತ್ತಿರುವ ಸಾವಿರಾರು ಭಕ್ತರಿಗೆ ಶುಚಿ- ರುಚಿಯಾದ ಟ ತಿಂಡಿ, ಕಾಫಿ ಜೊತೆಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಲಾವ್, ಬಿಸಿಬೆಳೆಬಾತ್, ರೈಸ್ ಬಾತ್, ಕೇಸರಿಬಾತ್, ಮೊಸರನ್ನ, ಕಾಫಿ, ಟೀ, ತಂಪು ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಯೂನಿಟಿ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ತೌಫಿಕ್ ಮಾತನಾಡಿ, ಧರ್ಮಸ್ಥಳ ಪಾದಾಯಾತ್ರಿಗಳಿಗೆ ಪಟ್ಟಣದಲ್ಲಿ ಕೆಲವು ಸಂಘ ಸಂಸ್ಥೆಗಳು ಉಪಹಾರ ನೀಡುತ್ತಿದ್ದು, ತಮಗೂ ಅದು ಪ್ರೇರಣೆಯಾಗಿ ದೊಡ್ಡ ಮಟ್ಟದಲ್ಲಿ ವ್ಯವಸ್ಥೆ ಮಾಡಲು ಸ್ನೇಹಿತರ ಜೊತೆ ಸಮಾಲೋಚನೆ ನಡೆಸಿ ಕೇವಲ 2 ದಿನದಲ್ಲಿ ಇಂತಹ ಬೃಹತ್ ಕರ್ಯಕ್ರಮ ಆಯೋಜಿಸಲಾಗಿತ್ತು.
ಮುಂದಿನ ವರ್ಷ ಆಯಾಸಗೊಂಡ ಪಾದಯಾತ್ರಿಗಳು ತಂಗಲು ವಿಶ್ರಾಂತಿಗಾಗಿ ವ್ಯವಸ್ಥೆ, ಉಚಿತ ಆರೋಗ್ಯ ತಪಾಸಣೆ, ಉಚಿತ ಪಾದರಕ್ಷೆ, ಕಾಲು ಕವಚ, ಔಷಧಿಗಳನ್ನು ವಿತರಣೆ ಮಾಡುವ ಆಶಯ ಹೊಂದಿದ್ದು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಶಾಂತಕುಮಾರ್, ಚಂದ್ರಶೇಖರ್, ಎಂ.ಆರ್. ವೆಂಕಟೇಶ್, ಅಕ್ರಂ ಶರೀಫ್, ಗೌಸ್ ಶಿರೀಫ್, ಸೌಯದ್ ಶಿತೀಕ್, ರಂಗನಾಥ್, ಸುಂದ್ರೇಶ್, ಕೋಳಿ ಶಿವು, ದಾನಿ, ಕೃಷ್ಣೇಗೌಡ, ನಿಶಾಂತ್ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

