ನಾಳೆ ಮಹಾಶಿವರಾತ್ರಿ ಮಹೋತ್ಸವ
ಹಾಸನ: ನಗರದ ದ ತಣ್ಣೀರುಹಳ್ಳದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಆವರಣದಲ್ಲಿರುವ 800 ವರ್ಷ ಇತಿಹಾಸವಿರುವ ಹಳ್ಳದ ರಾಮೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಮಹಾಶಿವರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಫೆ.27ರ ಗುರುವಾರ ಬೆಳಗ್ಗೆ 8 ರಿಂದ ಫೆ.28ರ ಶುಕ್ರವಾರ ಬೆಳಗ್ಗೆ 8 ರವರೆಗೆ ಅಲಂಕಾರ ಸಹಿತ ರಾಮೇಶ್ವರ ಸ್ವಾಮಿಯ ದರ್ಶನಕ್ಕೆ ಅವಕಾಶವಿದೆ. ಧಾರ್ಮಿಕ ಸೇವೆ ಹಾಗೂ ಸಾಮೂಹಿಕ ರುದ್ರಾಭಿಷೇಕಕ್ಕೆ ಹೆಸರು ನೋಂದಾಯಿಸಲು 9448653364 ಹಾಗೂ 9035313120 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಗುರುವಾರ ಬೆಳಗ್ಗೆ 5ರಿಂದ 7 ರವರೆಗೆ ಧನ್ವಂತರಿ ಹೋಮ ಜರುಗುವುದು. ನಂತರ ಹೊಸದಾಗಿ ಆಯುರ್ವೇದ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಶಾಸ್ತ್ರೋಕ್ತವಾದ ಪ್ರತಿಜ್ಞಾವಿಧಿ ಸ್ವೀಕರಿಸುವರು. ಇದು ಶಿಷ್ಯೋಪನಯನ ಎಂಬ ಸಂಸ್ಕಾರವಾಗಿರುತ್ತದೆ.
ಗುರುವಾರ ಸಂಜೆ 6ಕ್ಕೆ ಕಾಲೇಜಿನ ವಾರ್ಷಿಕೋತ್ಸವ (ತರಂಗ-2014) ಸಮಾರಂಭ ನೆರವೇರುವುದು. ನಂತರ ರಾತ್ರಿಯಿಡೀ ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಸಾರವುಳ್ಳ, ಭಕ್ತಿರಸವುಳ್ಳ ಮನೋರಂಜನಾ ಕಾರ್ಯಕ್ರಮಗಳು ವಿದ್ಯಾರ್ಥಿ, ಸಿಬ್ಬಂದಿ ವರ್ಗದವರಿಂದ ಮೂಡಿಬರಲಿವೆ. ಈ ಸಂದರ್ಭದಲ್ಲಿ 1 ಗಂಟೆಯ ಸಮಯವನ್ನು ಸ್ಥಳೀಯ, ಆಸಕ್ತ ಕಲಾವಿದರಿಗೆ ನೀಡಲಾಗುವುದು. ಭಜನೆ, ಭಕ್ತಿಗೀತೆ, ವೇದಘೋಷದಂತಹ ಕಾರ್ಯಕ್ರಮಗಳಿಗೆ ಅವಕಾಶ ಇರುತ್ತದೆ. ಇದಕ್ಕಾಗಿ ಹೆಸರು ನೋಂದಾಯಿಸಲು 9986210758 ಅಥವಾ 9448608922 ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ.
ಮಹಾಶಿವರಾತ್ರಿಯ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಳ್ಳದ ರಾಮೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪ್ರಸನ್ನ ನರಸಿಂಹರಾವ್ ಹಾಗೂ ದೇವಸ್ಥಾನದ ಸೇವಾ ಮಂಡಳಿಯ ಸದಸ್ಯರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

