ಹಗಲು ವೇಳೆ ಪ್ರಯಾಣಿಕರ ರೈಲು ಸಂಚಾರ ಆರಂಭಿಸುವಂತೆ ಒತ್ತಾಯ
ಸಕಲೇಶಪುರ: ನಿತ್ಯ ಹಗಲು ವೇಳೆ ಬೆಂಗಳೂರು- ಮಂಗಳೂರು ಮಧ್ಯೆ ಪ್ರಯಾಣಿಕರ ರೈಲು ಸಂಚಾರ ಆರಂಭಿಸುವಂತೆ ರೇಲ್ವೆ ಹಿತರಕ್ಷಣ ಸಮಿತಿ ಸದಸ್ಯರು ರೇಲ್ವೆ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಸಕ್ಷೇನಾ ಅವರಿಗೆ ಸೋಮವಾರ ಮನವಿ ನೀಡಿದರು.
ಪಟ್ಟಣದ ರೇಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ವ್ಯವಸ್ಥಾಪಕರನ್ನು ಭೇಟಿಮಾಡಿದ ರೇಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸದಸ್ಯರು ಕಳೆದ 15 ವರ್ಷಗಳ ಹಿಂದೆಯೇ ಹಗಲು ವೇಳೆ 2 ಪ್ರಯಾಣಿಕರ ರೈಲು ಹಾಗೂ ರಾತ್ರಿ ವೇಳೆ ನಾಲ್ಕು ಪ್ರಯಾಣಿಕರ ರೈಲು ಸಂಚರಿಸುತ್ತಿದ್ದು, ಅತ್ಯಂತ ಹೆಚ್ಚಿನ ಆದಾಯ ಸಹ ರೇಲ್ವೆ ಇಲಾಖೆ ಗಳಿಸುತ್ತಿತ್ತು. ಇದರಿಂದಾಗಿ ಕರಾವಳಿ ಹಾಗೂ ಕೇರಳ ರಾಜ್ಯದ ಜನತೆ ಬೆಂಗಳೂರಿಗೆ ಹೋಗಲು ಅನುಕೂಲವಾಗಿತ್ತು. ಆದರೆ ಕಳೆದ 5 ವರ್ಷಗಳಿಂದ ಈ ರೈಲುಗಳ ಸಂಚಾರವನ್ನು ರದ್ದುಮಾಡಿರುವ ರೇಲ್ವೆ ಇಲಾಖೆ ಹಗಲು ವೇಳೆ ಎರಡು ದಿನಗಳಿಗೊಮ್ಮೆ ಒಂದು ರೈಲು ರಾತ್ರಿ ವೇಳೆ ಎರಡು ರೈಲು ಸಂಚಾರಕ್ಕೆ ಅನುವುಮಾಡಿಕೊಟ್ಟಿದೆ.
ಈ ರೈಲುಗಳು ಕಾರವಾರ, ಮಂಗಳೂರು ಹಾಗೂ ಕೇರಳದ ಕಣ್ಣೂರಿನಿಂದಲೇ ಪ್ರಯಾಣಿಕರನ್ನು ತುಂಬಿ ಕಕೊಂಡು ಬರುವುದರಿಂದ ಇಲ್ಲಿನ ಪ್ರಯಾಣಿಕರಿಗೆ ರೈಲಿನಲ್ಲಿ ಸಂಚರಿಸಲು ಅಸಾದ್ಯ ಎಂಬಷ್ಟು ಜನದಟ್ಟಣೆ ಇರುತ್ತದೆ. ಈ ಬಗ್ಗೆ ಕೇಂದ್ರ ರೇಲ್ವೆ ಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಮುಂದಿನ ದಿನಗಳಲ್ಲಿ ಹಗಲುವೇಳೆ ಪ್ರಯಾಣಿಕರ ರೈಲು ಸಂಚಾರ ಆರಂಭಿಸದಿದ್ದರೆ ತೀವ್ರ ರೂಪದ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಒತ್ತಾಯಿಸಿದ ಮನವಿಯನ್ನು ಅಧಿಕಾರಿಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ರೇಲ್ವೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾರಯಣ ಆಳ್ವ, ದಯಾನಂದ್, ಹೆತ್ತೂರು ದೇವರಾಜ್, ರಘು, ಸಂದೇಶ್ ಶಟ್ಟಿ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

