ಕೋಮುವಾದಿ ಪಠ್ಯ ಬಿಡಿ
ಹಾಸನ: ಕೋಮುವಾದಿ ಪಠ್ಯಕ್ರಮಗಳನ್ನು ಪ್ರೌಢಶಾಲೆಗಳ ಪುಸ್ತಕದಲ್ಲಿ ಅಳವಡಿಸಲು ಮುಂದಾಗಿರುವುದನ್ನು ಖಂಡಿಸಿ ಭಾರತ ವಿದ್ಯಾರ್ಥಿ ಷೆಡರೇಷನ್ (ಎಸ್ಎಫ್ಐ) ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆಯ ಬಳಿ ಕೋಮುವಾದಿ ಪಠ್ಯಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಪೂರಕವಾಗಿರುವ ಶಿಕ್ಷಣವು ಸಮಾಜಮುಖಿ ಆಗಿರಬೇಕು. ನಮ್ಮ ದೇಶದ ಮಕ್ಕಳೇ ಸಂಪತ್ತು ಎಂಬುದನ್ನು ಮರೆಯಬಾರದು. ನಮ್ಮ ದೇಶದ ಸಂಶೋಧನ ಶೀಲರನ್ನಾಗಿ ಹಾಗೂ ಅಭಿವೃದ್ಧಿಕಾರರನ್ನಾಗಿ ಪಠ್ಯಕ್ರಮ ಹಾಗೂ ಕಾರ್ಯಕ್ರಮ ರೂಪಿಸಬೇಕೆಂದು ಆಗ್ರಹಿಸಿದರು.
ಲೈಬ್ರರಿಗಳಿಗೆ ಪುಸ್ತಕ ಸರಬರಾಜು: ಸರ್ಕಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಲ್ಲಿ ರಾಜ್ಯದ ಎಲ್ಲಾ ಶಾಲೆಗಳ ಲೈಬ್ರರಿಗಳಿಗೆ ಪ್ರತಿವರ್ಷ ಪುಸ್ತಕ ಸರಬರಾಜು ಮಾಡುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರ ಬಂದಾಗ ಕೋಮು ವಿಷ ಬೀಜವನ್ನು ಬಿತ್ತುವ ಸಲುವಾಗಿ ರಾಷ್ಟ್ರೋತ್ಥಾನ ಸಂಸ್ಥೆಯು ಪ್ರಕಟಿಸಿದ ಅನೇಕ ಕೋಮುವಾದಿ ಪುಸ್ತಕ ಖರೀದಿ ಮಾಡಿ ಶಾಲೆಗೆ ನೀಡಲಾಯಿತು. ಈ ಬಗ್ಗೆ ಅನೇಕರು ವಿರೋಧ ಮಾಡಿದರೂ ಸಹ ಸರ್ಕಾರ ತಮ್ಮ ಕೆಲಸ ನಿರ್ವಹಿಸಿದೆ ಎಂದು ದೂರಿದರು.
ವಿಷ ಬೀಜ ಬಿತ್ತಲು: ಪ್ರೊ. ಹಂಪಣ್ಣ ನೇತೃತ್ವದ ಸಮಿತಿಯನ್ನು ರಚನೆ ಮಾಡಿ ಈಗಾಗಲೇ ಫೆ.3, 2014 ರಂದು ಸಭೆ ಸೇರಿ ಈ ವರ್ಷದ ಪುಸ್ತಕ ಆಯ್ಕೆ ಮಾಡಲಾಗಿದೆ. ಈ ಪುಸ್ತಕ ಗಮನಿಸಿದರೇ ಬಿಜೆಪಿ ಸರ್ಕಾರ ಹಿಂದೆ ಮಾಡಿದ ರೀತಿಯಲ್ಲಿಯೇ ವಿದ್ಯಾರ್ಥಿಗಳ ನಡುವೆ ಕೋಮು ವಿಷ ಬೀಜ ಬಿತ್ತಲು ಹೊರಟಿದೆ ಎಂಬಂತಿದೆ ಎಂದು ದೂರಿದ ಅವರು, ಎಲ್ಲಾ ಪುಸ್ತಕಗಳು ಒಂದು ವರ್ಗವನ್ನು ಪ್ರಚೋದಿಸುವಂತಹ ಮನುಸ್ಮೃತಿ ಕೃತಿಗಳೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಯ್ಕೆ ಪ್ರಕ್ರಿಯೆಯಲ್ಲಿ ಕೆ.ವಿ. ಶ್ರೀನಿವಾಸ್ ಎಂಬ ಹೆಸರಿನಲ್ಲಿ ಸಲ್ಲಿಸಿದ 49 ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಅನೇಕ ಅವ್ಯವಹಾರಗಳು ನಡೆದಿರುವುದು ತಿಳಿದು ಬಂದಿದೆ. ತಕ್ಷಣ ಆಯ್ಕೆಯಾಗಿರುವ ಪುಸ್ತಕವನ್ನು ತಡೆ ಹಿಡಿದು ಹೆಚ್ಚು ಪ್ರಗತಿಪರ ಮತ್ತು ವೈಜ್ಞಾನಿಕ, ವೈಚಾರಿಕ ಪುಸ್ತಕವನ್ನು ರಾಜ್ಯದ ಎಲ್ಲಾ ಪ್ರೌಢಶಾಲಾ ಗ್ರಂಥಾಲಯಗಳಿಗೆ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಎಚ್.ಇ. ಹರ್ಷಾದ್, ಕಾರ್ಯದರ್ಶಿ ಎಂ.ಜಿ. ಪ್ರದೀಪ್ ಕುಮಾರ್, ಎನ್.ಡಿ. ಧನಲಕ್ಷ್ಮಿ, ಅಸ್ಲಾಂ, ಸಿತಾರ, ವಿದ್ಯಾ, ಲಾವಣ್ಯ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

