ಶಿವರಾತ್ರಿ ಪ್ರಯುಕ್ತ ಗಾನಸುಧೆ
ಅರಕಲಗೂಡು: ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಪಟ್ಟಣದ ನಿವೇದಿತಾ ವಿದ್ಯಾಶಾಲೆಯ ಪ್ರಾಯೋಜಕತ್ವದಲ್ಲಿ ಗಾನಸುಧೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಮೃತೇಶ್ವರ ಸ್ವಾಮಿ ದೇವಾಲಯದ ಸಮೀಪ ನಡೆಯುವ ಕಾರ್ಯಕ್ರಮದಲ್ಲಿ ವಿದುಷಿ ಜಂಬೆ ಎಸ್.ವಿದ್ಯಾರಾಣಿ, ನಾಗಮಣಿ ವೆಂಕಟೇಶಮೂರ್ತಿ ಮತ್ತು ಅನು ಕೌಶಿಕ್ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದು, ವಿದ್ವಾನ್ ರಾಘವೇಂದ್ರ ಮತ್ತು ವಿದ್ವಾನ್ ಮಂಜುನಾಥ್ ಪಕ್ಕವಾದ್ಯ ನುಡಿಸುವರು.
ದೀಪಾರಾಧನೆ: ಇಲ್ಲಿನ ಪುರಾಣ ಪ್ರಸಿದ್ದ ಅಮೃತೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ನಂದಿಕೇಶ್ವರ ಸ್ವಾಮಿಗೆ ದೀಪಾರಾಧನೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಂಜೆ 6ಕ್ಕೆ ಧಾರ್ಮಿಕ ವಿಧಿಯಂತೆ ಪೂಜಾ ಕೈಂಕರ್ಯದ ನಂತರ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಶಿವರಾತ್ರಿ ಆಚರಣಾ ಸಮಿತಿ ತಿಳಿಸಿದೆ.
ಅಮೃತೇಶ್ವರ ಸ್ವಾಮಿ ರಥೋತ್ಸವ
ಅರಕಲಗೂಡು: ಇಲ್ಲಿನ ಪುರಾಣ ಪ್ರಸಿದ್ಧ ಅಮೃತೇಶ್ವರ ಸ್ವಾಮಿ ಮಹಾರಥೋತ್ಸವ ನಡೆಯಲಿದೆ. ಪ್ರತಿವರ್ಷ ಶಿವರಾತ್ರಿ ಮಹೋತ್ಸವದ ಮರುದಿನ ನೆಡೆಯುವ ಮಹಾರಥೋತ್ಸವಕ್ಕೆ ತಹಸೀಲ್ದಾರ್ ಚಿದಾನಂದ ಅವರು ಚಾಲನೆ ನೀಡುವರು. ಇದಕ್ಕೂ ಮುನ್ನ ಕೃಷ್ಣಗಂಧೋತ್ಸವ ರಥಬೀದಿಗಳಲ್ಲಿ ನಡೆಯಲಿದೆ.
'ಮಾತೃಭಾಷೆ ಸಂಸ್ಕೃತಿಯ ಪ್ರತೀಕ'
ಹಾಸನ: ಹಲವಾರು ಭಾಷೆಗಳ ಪದಗಳನ್ನು ತನ್ನ ಒಡಲಲ್ಲಿರಿಸಿ ಕೊಂಡು ವಿಶಾಲವಾದ ಮನೋ ಭೂಮಿಕೆಯನ್ನು ಹೊಂದಿ, ಸ್ವತಂತ್ರವಾದ ಅಸ್ತಿತ್ವವನ್ನು ಬಿಟ್ಟುಕೊಡದ ಸ್ನಿಗ್ಧ ಸೌಂದರ್ಯ ಪಡೆದ ಕನ್ನಡ ಭಾಷೆ ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹೆಚ್.ಜಿ. ಸುಧಾ ಅಭಿಪ್ರಾಯಪಟ್ಟರು.
ತಾಲೂಕಿನ ಮೊಸಳೆಹೊಸಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾತೃ ಭಾಷಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಡಿ. ಶ್ರೀನಿವಾಸ ಮಾತನಾಡಿ, ತಾಯಿ ನಮಗೆ ಜನ್ಮ ನೀಡಿದರೆ ತಾಯಿ ಭಾಷೆ ಸಂಸ್ಕಾರ ನೀಡುತ್ತದೆ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮಾತೃಭಾಷೆಯಷ್ಟು ಸುಲಭವಾದ ಮಾಧ್ಯಮ ಮತ್ತೊಂದಿಲ್ಲ ಎಂದರು. ಎಂ.ಪಿ. ಗೋಪಾಲ್ ಮಾತನಾಡಿ, ಕನ್ನಡ ಭಾಷೆ, ಪರಂಪರೆ, ಸಂಸ್ಕೃತಿಗಳು ನಮ್ಮ ಹೆಮ್ಮೆಯ ಪ್ರತೀಕವಾಗಿವೆ. ಕನ್ನಡಿಗರಾದ ನಾವು ನಮ್ಮ ಭಾಷೆಯ ಬಗೆಗೆ ತೋರುವ ಪ್ರೀತಿ ಕೇವಲ ಆಚರಣೆ ಯಾಗದೆ ನಿರಂತರ ವಾಗಿರಲಿ ಎಂದು ಆಶಿಸಿದರು. ಅಧ್ಯಕ್ಷತೆ ವಹಿಸಿದ್ದ ಗ್ರಂಥಪಾಲಕ ಎನ್. ಮಂಜುನಾಥ್ ಮಾತನಾಡಿದರು. ಗೌತಮಿ ಸ್ವಾಗತಿಸಿದರು, ಸುಷ್ಮಿತ ವಂದಿಸಿದರು, ಉಮೇಶ್ ಮತ್ತು ಮೇಘನ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

