ಸೆರೆಯಾದ ಸಲಗ ದುಬಾರೆಗೆ
ಎಚ್.ವಿ. ರಾಘವೇಂದ್ರ
ಕನ್ನಡಪ್ರಭ ವಾರ್ತೆ, ಆಲೂರು. ಫೆ.26
ತಾಲೂಕಿನ ಹಂಪಾಪುರ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸೆರೆ ಹಿಡಿದ ಸಲಗವನ್ನು ಬುಧವಾರ ಬೆಳಗ್ಗೆ ಕೊಡಗಿನ ಕುಶಾಲನಗರ ಬಳಿ ಇರುವ ದುಬಾರೆ ಆನೆ ಧಾಮದ ಕ್ರಾಲ್ಗೆ ಸಾಗಿಸಲಾಯಿತು.
ಹಂಪಾಪುರ ಅರಣ್ಯ ಪ್ರದೇಶದ ಕರೀಕಟ್ಟಿಗಿಡ ಅರಣ್ಯದಲ್ಲಿ ಅರಿವಳಿಗೆ ಮದ್ದನ್ನು ನೀಡಿದ ಬಂಧಿಸಿದ್ದ ಆನೆಯನ್ನು ಮಂಗಳವಾರವೇ ಸಾಗಿಸಲು ತೀರ್ಮಾನಿಸಲಾಗಿತ್ತು. ಆದರೆ ಕಾಡಾನೆ ಕ್ಯಾಂಪ್ಗೆ ಕರೆ ತರುವ ಸಂದರ್ಭದಲ್ಲಿ ವಿಪರೀತ ಪ್ರತಿರೋಧ ತೋರಿದ ಪರಿಣಾಮ ತಾಲೂಕಿನ ಗಡಿಭಾಗದಲ್ಲಿ ಆನೆಯನ್ನು ರಾತ್ರಿಯಿಡೀ ಕಟ್ಟಿ ಹಾಕಲಾಯಿತು. ಕಾಡಿನಲ್ಲೇ ಕಟ್ಟಿ ಹಾಕಿದ ಪರಿಣಾಮ ರಾತ್ರಿ ಕಾಡಾನೆಗಳು ಹಿಡಿದಿದ್ದ ಸಲಗವನ್ನು ಬಿಡಿಸಿಕೊಂಡು ಹೋಗಲು ಪ್ರಯತ್ನಿಸಿದ್ದ ಭಯದಿಂದ ಆನೆಕಟ್ಟಿದ ಸ್ಥಳದಲ್ಲೇ ಅರಣ್ಯ ಇಲಾಖೆಯ ಸಿಬ್ಬಂದಿ ಸಾಕಾನೆಗಳನ್ನು ನಿಯೋಜಿಸಿ ಕಾವಾಡಿಗರು, ಮಾವುತರು ಹಾಗೂ ಅಧಿಕಾರಿಗಳು ರಾತ್ರಿ ಇಡೀ ಅಲ್ಲಿಯೆ ಬೀಡು ಬಿಟ್ಟಿದ್ದರು.
ಸಿದ್ದಪಡಿಸಿದ್ದ ಕ್ರಾಲ್ನಲ್ಲಿ ಬಂಧಿ: ಕಾಡಾನೆ ಕ್ಯಾಂಪ್ಗೆ ಬರಲು ಪ್ರತಿರೋಧ ಒಡ್ಡಿದ ಪರಿಣಾಮ ಗುರುವಾರ ಮಹಾಶಿವರಾತ್ರಿ ಹಬ್ಬ ಪ್ರಯುಕ್ತ ನಡೆಸುವ ಜಾಗರಣೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಂಗಳವಾರ ರಾತ್ರಿಯೇ ಆಯಿತು. ಬೆಳಗ್ಗೆ 9ರಲ್ಲಿ ಕಾಡಾನೆಯನ್ನು ಸಾಗಿಸುವ ಲಾರಿಯೊಳಗೆ ಆನೆಯನ್ನು ಅಭಿಮನ್ಯು, ಅರ್ಜುನಾ, ಶ್ರೀರಾಮ ಆನೆಗಳ ಸಹಾಯದಿಂದ ಲಾರಿಯೊಳಗಿನ ಕಬ್ಬಿಣದ ಪಂಚರದಲ್ಲಿ ಬಂಧಿಸಿ ಕೊಡ್ಲಿಪೇಟೆ ಮಾರ್ಗವಾಗಿ ಕಾಡಾನೆಯನ್ನು ದುಬಾರೆ ಆನೆ ಧಾಮದಲ್ಲಿ ಸಿದ್ದಪಡಿಸಿದ್ದ ಕ್ರಾಲ್ನಲ್ಲಿ ಬಂಧಿಸಲಾಯಿತು.
ಸಾಗಿಸುವ ಮಾರ್ಗ ಮಧ್ಯದಲ್ಲಿ ಲಾರಿಯ ಕಬ್ಬಿಣದ ಪಂಜರವನ್ನು ಗುದ್ದಿ ಸ್ವಲ್ಪಮಟ್ಟಿನ ಪ್ರತಿರೋಧ ತೋರಿದ ಸಲಗ ನಂತರ ತೆಪ್ಪಗಾಗಿ ಯಾವುದೇ ಅಡತಡೆ ಇಲ್ಲದೆ ಅಭಿಮನ್ಯು, ಶ್ರೀರಾಮ, ಹರ್ಷ ಆನೆಗಳ ಸಹಾಯದೊಂದಿಗೆ ಕ್ರಾಲ್ಗೆ ತಳ್ಳುವಾಗಲು ಸಹ ಕಟ್ಟಿದ ಹಗ್ಗದಿಂದ ಬಿಡಿಸಿಕೊಳ್ಳಲು ವಿಫಲ ಯತ್ನ ನಡೆಸಿದ ಆನೆಯನ್ನು ಅಭಿಮನ್ಯು ಸುಲಭವಾಗಿ ಕ್ರಾಲ್ ಒಳಗೆ ನೂಕಿತು. ಮಂಗಳವಾರ ಕಾಡಾನೆ ಹಿಡಿದು ಇಂದು ಆನೆಯನ್ನು ಸಾಗಣೆ ಮಾಡಿದ್ದರಿಂದ ಇತರೆ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆ ಬಿಡುವು ನೀಡಲಾಗಿತ್ತು.
2 ದಿನ ವಿಶ್ರಾಂತಿ ಅಗತ್ಯ: ಕಾಡಾನೆಯೊಂದಿಗೆ ದುಬಾರಿ ತೆರಳಿದ್ದ ಸಾಕಾನೆಗಳು ಗುರುವಾರ ಪುನಃ ಮಾಗಡಿಹಳ್ಳಿ ಕ್ಯಾಂಪ್ಗೆ ಬರುವ ಸಾಧ್ಯತೆ ಇದ್ದು, ಶಿವರಾತ್ರಿ ಹಬ್ಬ ಇರುವ ಪರಿಣಾಮ ಅಂದು ಸಹ ಕಾರ್ಯಾಚರಣೆ ನಡೆಯುವ ಸಾದ್ಯತೆ ಇಲ್ಲ. ಕಾರ್ಯಾಚರಣೆ ನಡೆಸಿ ಲಾರಿಗಳನ್ನು ಏರಿ ದೂರದ ದುಬಾರೆಗೆ ಪ್ರಯಾಣ ಬೆಳೆಸಿ ಪುನಃ ಸಾಕಾನೆಗಳು ದಣಿದಿದ್ದು, ಕನಿಷ್ಟ ಅವುಗಳಿಗೆ 2 ದಿನ ವಿಶ್ರಾಂತಿ ಬೇಕಾಗುತ್ತದೆ. ಸಾಕಾನೆಗಳೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೈದ್ಯರು, ಗುರಿಕಾರರು, ಕಾವಾಡಿಗಳು, ಕಾಡುಕುರುಬರು ಸೇರಿದಂತೆ ಸಿಬ್ಬಂದಿ ಸಹ ಧಣಿದಿದ್ದು, ಅವರಿಗೂ ವಿಶ್ರಾಂತಿ ಅವಶ್ಯಕತೆ ಇರುವ ಕಾರಣ ಬಿಡುವು ನೀಡುವುದು ಸೂಕ್ತವಾಗುತ್ತಿದೆ. ಅಲ್ಲದೆ ಕಾಡಾನೆ ಕಾರ್ಯಾಚರಣೆ ಪ್ರಾರಂಭವಾದ ದಿನದಿಂದಲೂ ಸಾಕಾನೆಗಳು ಮಾಗಡಿಹಳ್ಳಿ ಕ್ಯಾಂಪ್ನಲ್ಲಿ ಬೀಡುಬಿಟ್ಟು ತಾಲೂಕಿನ ಸುತ್ತಮುತ್ತಲ ಅರಣ್ಯ, ಕೊಡಗಿನ ಅರಣ್ಯ ಪ್ರದೇಶದಲ್ಲಿ ಓಡಾಡಿ 1 ವಾರದ ಅಂತರದಲ್ಲಿ ಮಕ್ನಾ, ಒಂಟಿ ಸಲಗ ಸೇರಿದಂತೆ ಮೂರು ಆನೆಗಳನ್ನು ಹಿಡಿದಿರುವುದರಿಂದ ಆತಂಕಗೊಂಡಿರುವ ಕಾಡಾನೆಗಳ ಹಿಂಡು ದಿಕ್ಕಾಪಾಲಾಗಿ ಚದುರಿ ಹೋಗಿವೆ.
ಗ್ರಾಮಸ್ಥರಿಗೆ ಕಾಣದ ಕಾಡಾನೆ: ಹೇಮಾವಾತಿ ನದಿಪಾತ್ರದ ತಾಲೂಕಿನ ದೊಡ್ಡಬೆಟ್ಟ ರಂಗನಬೆಟ್ಟ, ಕರಡಿಬೆಟ್ಟ, ಚಿಕ್ಕಬೆಟ್ಟ, ಪಾರ್ವತಮ್ಮನಬೆಟ್ಟ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಬೀಡುಬಿಟ್ಟು ಎಡಬಿಡದೆ ದಾಳಿ ನಡೆಸುತ್ತಿದ್ದ ಆನೆಗಳು ಸಾಕಾನೆಗಳ ವಾಸನೆಗೆ ಹಾಗೂ ತಮ್ಮ ಗುಂಪಿನ ಮುಖ್ಯಸ್ಥರನ್ನು ಸೆರೆ ಹಿಡಿದಿರುವುದರಿಂದಾಗಿ ವಿಪರೀತವಾಗಿ ಕಾಡಾನೆಗಳು ಎದರಿದಂತೆಕಂಡು ಬಂದಿದ್ದು, ಕಾರ್ಯಾಚರಣೆ ಪ್ರಾರಂಭವಾದ ದಿನದಿಂದ ಈವರೆಗೂ ತಾಲೂಕಾದ್ಯಂತ ಗ್ರಾಮಸ್ಥರಿಗೆ ಒಂದೇ ಒಂದು ಕಾಡಾನೆಗಳು ಕಾಣಸಿಕ್ಕಲ್ಲ. ಇಲ್ಲಿಯವರೆಗೂ ಕಾಡಾನೆಗಳು ಸುದ್ದಿಗಳು ತಿಳಿದು ಬಂದಿಲ್ಲ. ಏಕೆಂದರೆ ಆನೆಗಳು ಹೇಮಾವತಿ ನದಿಯನ್ನು ದಾಟಿ ಕೊಡಗಿನ ಹಂಪಾಪುರ, ಉಂಬಳಿಬೆಟ್ಟ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಬೀಡು ಬಿಟ್ಟಿರುವಂತೆ ಕಂಡು ಬಂದಿದೆ. ಈ ಬಾರಿ ಕಾರ್ಯಾಚರಣೆ ಪ್ರಾರಂಭದಿಂದ 3 ಆನೆಗಳನ್ನು ಹಿಡಿದಿರುವುದು ಕೊಡಗಿನ ಉಂಬಳಿಬೆಟ್ಟ ಹಾಗೂ ಹಂಪಾಪುರ ಅರಣ್ಯ ಪ್ರದೇಶವಾಗಿದೆ.
ಉಂಬಳಿ ಬೆಟ್ಟ ಹಾಗೂ ಹಂಪಾಪುರ ಪ್ರದೇಶದ ಇರುವುದು ಹೇಮಾವತಿ ನದಿಯ ಆಚೆ ಬದಿಯಾಗಿರದ್ದರೆ ಕ್ಯಾಂಪ್ ನಿರ್ಮಿಸಿರುವ ಮಾಗಡಿಹಳ್ಳಿ ಇರುವುದು ಈಚೆ ಬದಿಯಲ್ಲಿ ಆಗಿದ್ದು, ಹಂಪಾಪುರ ಹಾಗೂ ಉಂಬಳಿಬೆಟ್ಟದಿಂದ ಕಾಡಾನೆಗಳು ಕ್ಯಾಂಪ್ನಲ್ಲಿನ ಚಲನವಲಗಳನ್ನು ಗಮನಿಸಬಹುದಾದ ಸ್ಥಳವಾಗಿದ್ದು, ಆಗಾಗಿಯೇ ಆ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಸಾಧ್ಯತೆ ಇದೆ. ಅಲ್ಲದೆ ಬುಧವಾರ 28ಕ್ಕೂ ಹೆಚ್ಚು ಆನೆಗಳ ಗುಂಪು ತಾಲೂಕಿನ ಕಾಗನೂರು, ಕರಡಿಬೆಟ್ಟೆ ಹಾಗೂ ಸುತ್ತಮುತ್ತಲ ಅರಣ್ಯದಲ್ಲಿ ಬೀಡು ಬಿಟ್ಟಿದೆ ಎಂದು ಅರಣ್ಯ ಇಲಾಖೆ ತಿಳಿಸಿದ್ದು, ಉಳಿದ ಆನೆಗಳ ಹಂಪಾಪುರ, ಉಂಬಳಿಬೆಟ್ಟ, ಸಕಲೇಶಪುರ ತಾಲೂಕಿನ ಯಸಳೂರು, ಬೆಂಬಳೂರು, ಕೆರೋಡಿಯಲ್ಲಿ ಬೀಡು ಬಿಟ್ಟಿವೆ.
ಆರ್ಎಫ್ಒ ದೇವರಾಜ್: ಕಳೆದ ಒಂದು ವಾರದಿಂದ ಉಂಬಳಿ ಬೆಟ್ಟ, ಹಂಪಾಪುರ ಅರಣ್ಯ ಪ್ರದೇಶದಲ್ಲಿ ಈ ಬಾರಿಯ ಕಾರ್ಯಾಚರಣೆಯಲ್ಲಿ ಪ್ರಥಮವಾಗಿ ಅತೀ ಹೆಚ್ಚು ಪಂಡಾಟಿಕೆ ನಡೆಸಿ ಹಲವರನ್ನು ಬಲಿ ತೆಗೆದುಕೊಂಡು ಅಪಾರ ಪ್ರಾಮಾಣದ ಬೆಳೆ ನಾಶ ಮಾಡಿದ್ದು ಹಾಗೂ ಈ ಭಾಗದ ಜನರು ಭಯಭೀತರಾಗಲು ಕಾರಣವಾಗಿದ್ದ ಮಕ್ನಾ ಹಾಗೂ ಅಪಾಯಕಾರಿ ಒಂಟಿ ಸಲಗವನ್ನು 2 ದಿನಗಳಲ್ಲಿ ಸತತವಾಗಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿತ್ತು. ಅವರೆಡನ್ನು ಸಾಗಿಸಿ ಮತ್ತಿಗೋಡಿನ ಕ್ರಾಲ್ಗಳಿಗೆ ಹಾಕಿ ಪಳಗಿಸಿ, ಇದಾದ ನಂತರ 1 ವಾರ ಬಿಡುವು ನೀಡಿ ಮಂಗಳವಾರ ಮತ್ತೊಂದು ಆನೆಯನ್ನು ಸೆರೆ ಹಿಡಿಯಲಾಯಿತು. ಈಗ ಆನೆಗಳು ತಾಲೂಕಿನಲ್ಲಿ ಹೆಚ್ಚಾಗಿ ಕಾಣ ಸಿಗದೆ ಕೊಡಗು ಹಾಗೂ ಇತರೆ ಪ್ರದೇಶಗಳಲ್ಲಿ ಚದುರಿವೆ. ಗುರಿಕಾರರು, ವೈದ್ಯರು ಹಾಗೂ ಸಾಕಾನೆಗಳು ಗುರುವಾರ ಕ್ಯಾಂಪ್ ಬರುವ ಸಾಧ್ಯತೆ ಇದ್ದು, ಅವರು ಬಂದ ನಂತರ ಕಾರ್ಯಾಚರಣೆ ಮುಂದುವರಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

