ಹಠ ಸಾಧನೆ ಬಿಟ್ಟರೆ ಉತ್ತಮ ಜೀವನ: ನ್ಯಾ. ದೇವರಾಜ್
ದಿಡಗ (ಚನ್ನರಾಯಪಟ್ಟಣ): ಹಠಸಾಧನೆ ಬಿಟ್ಟು ಉತ್ತಮ ಜೀವನ ನಡೆಸಿ ನೆಮ್ಮದಿ ಮನೋಭಾವನೆಯಿಂದ ಜೀವನ ನೆಡೆಸಿದರೆ ದೇಶದ ನ್ಯಾಯಾಲಯದಲ್ಲಿ ಲಕ್ಷಾಂತರ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ನ್ಯಾಯಾಧೀಶ ಎಸ್.ಟಿ. ದೇವರಾಜ್ ತಿಳಿಸಿದರು.
ಹೋಬಳಿಯ ದಿಡಗ ಗ್ರಾಮದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚನ್ನರಾಯಪಟ್ಟಣದ ಆಶ್ರಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮಹಿಳಾ ಸಂಘ ಸಂಸ್ಥೆಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನಿನ ಅರಿವು ಮನಗಣನೆ ಯಾದರೆ ಹಠಸಾಧನೆ ಮನೋಭಾವ ಕಡಿಮೆಯಾದರೆ ಪ್ರಕರಣಗಳು ಕಡಿಮೆಯಾಗುತ್ತದೆ ಎಂದರು. ವೇಶ್ಯಾವಾಟಿಕೆಗೆ ಸಂಬಂಧಿಸಿದಂತೆ ಮಾಹಿತಿ ಪ್ರಕಾರ 5 ರಿಂದ 15 ವರ್ಷದ ಮಕ್ಕಳು ಸಂದರ್ಭಕ್ಕೆ ಅಥವಾ ದೌರ್ಜನ್ಯಕ್ಕೆ ಬಲಿಯಾಗಿ 20 ಲಕ್ಷ ಜನರಿದ್ದಾರೆ. 15 ರಿಂದ 18 ವರ್ಷ ವಯೋವುತಿಯ 33 ಲಕ್ಷ ಜನರಿದ್ದಾರೆ ಎಂದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ವೈ.ಕೆ. ಪುಟ್ಟಸ್ವಾಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪುಷ್ಪ ರವಿಕುಮಾರ್, ವಕೀಲರಾದ ಎಂ.ಆರ್. ನಿಂಗರಾಜು, ಸಿ.ಚಂದನ , ಎ.ಡಿ. ಕುಮಾರ, ವೆಂಕಟರಮಣೇಗೌಡ, ಚಂದ್ರಕಲಾ, ಕಾರ್ಯಕ್ರಮ ಆಯೋಜಕ ಸಿ.ಎನ್. ಗಂಗಪ್ಪಗೌಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಭಾಗ್ಯಲಕ್ಷ್ಮಿ, ನ್ಯಾಯಾಲಯದ ಸಿಬ್ಬಂದಿ ಹಾಗೂ ಕಾರ್ಯ ಸಂಯೋಜಕ ಎನ್. ಭಗವಾನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

