ಹಾಸನ

ಓಂ.. ನಮಃ ಶಿವಾಯ

Published On :

ಕನ್ನಡಪ್ರಭ ವಾರ್ತೆ    ಹಾಸನ    ಫೆ.27
ಮಹಾಶಿವರಾತ್ರಿ ಹಬ್ಬವನ್ನು ನಗರ ಹಾಗೂ ಜಿಲ್ಲಾದ್ಯಂತ ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯ ನಾನಾ ಶಿವನ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷವಾಗಿ ಅಲಂಕಾರಗೊಳಿಸಿ ಪೂಜೆ- ಪುನಸ್ಕಾರ ಸಲ್ಲಿಸಲಾಯಿತು.
ಶಿವನ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೋಮ ಹವನಗಳನ್ನು ನೆರವೇರಿಸಿ ವಿಶೇಷ ಅಭಿಷೇಕಗಳನ್ನು ನೆರವೇರಿಸಲಾಯಿತು. ಭಕ್ತಿರು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಬೆಳಗ್ಗೆ ಬೇಗ ಎದ್ದು ದೇವರಿಗೆ ಮಡಿ ಮಾಡಿ, ನೈವೇದ್ಯ ಸಿದ್ದಪಡಿಸಿ ಪೂಜೆಯನ್ನು ಸಲ್ಲಿಸಿದರು. ನಂತರ ಪ್ರಸಾದವನ್ನು ನೀಡಿದರು.
ಕಾಲೇಜಿನಲ್ಲಿ: ನಗರದ ಧರ್ಮಸ್ಥಳ ಆಯುರ್ವೇದ ಕಾಲೇಜಿನಲ್ಲಿ ಮಂಜನಾಥಸ್ವಾಮಿಗೆ ವಿಶೇಷ ಹೂವಿನ ಅಲಂಕಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ವೈದ್ಯರು ಸೇರಿದಂತೆ ಇತರರು ದೇವರಿಗೆ ವಿಶೇಷ ಪೂಜೆ ನಡೆಸಿದರು. ವಿಶೇಷವೆಂದರೆ ಕೇರಳ ಮೂಲದ ವಿದ್ಯಾರ್ಥಿಗಳನ್ನು ಮಹಾಶಿವರಾತ್ರಿ  ಪ್ರಯುಕ್ತ ದೇವರಿಗೆ ವಿಶೇಷ ನಮನ ಸಲ್ಲಿಸಿ ರಂಗೋಲಿ ಸ್ಪರ್ಧೆಯನ್ನು ನಡೆಸಿದರು.
ವೀರಶೈವ ಸಂಘದಿಂದ: ನಗರದ ಅರಳೇಪೇಟೆಯಲ್ಲಿ ಇರುವ ಬಸವೇಶ್ವರ ದೇವಸ್ಧಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ದೇವತಾ ಮೂರ್ತಿಗಳಿಗೆ ರುದ್ರಾಭಿಷೇಕ ಪೂಜಾ ಕಾರ್ಯ, ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಶಿವಪಾರ್ವತಿ ಮತ್ತು ಲಕ್ಷ್ಮೀವೆಂಕಟೇಶ್ವರ ದೇವಾಲಯ: ಶಿವಪಾರ್ವತಿ ಮತ್ತು ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಸೇವಾ ಟ್ರಸ್ಟ್ ವತಿಯಿಂದ ಬೆಳಗ್ಗೆ ಸರ್ವದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿ ಮಹಾಮಂಗಳಾರತಿ ಮಾಡಿ ಪ್ರಸಾದ ವಿತರಿಸಲಾಯಿತು. ಸಂಜೆ ವಿಜಯ್ ಕುಮಾರ್ ಅವರಿಂದ ದೇವರನಾಮ, ಪ್ರೀತಿ ನಾರಾಯಣರಿಂದ ಭಕ್ತಿಗೀತೆಗಳು, ಎನ್.ವಿ. ಸೂರ್ಯನಾರಾಯಣರಿಂದ ಪೌರಾಣಿಕ ಗೀತೆಗಳು, ಭರತನಾಟ್ಯ ಹಾಗೂ ದೇವಸ್ಥಾನದ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮಗಳು ನಡೆದವು.
ಬ್ರಹ್ಮಲಿಂಗೇಶ್ವರಸ್ವಾಮಿಗೆ ವಿಶೇಷ ಪೂಜೆ: ನಗರದ ಹೊರವಲಯದ ಬೂವನಹಳ್ಳಿ ಕ್ರಾಸ್ ಬಳಿ ಇರುವ ಬ್ರಹ್ಮಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ಬೂವನಹಳ್ಳಿ, ಬುಸ್ತೇನಹಳ್ಳಿ, ಹುಲ್ಲೇನಹಳ್ಳಿ, ಬೊಮ್ಮೇನಹಳ್ಳಿ, ದೇವಿಹಳ್ಳಿ, ಹಳೇಕೊಪ್ಪಲು, ಜಿನ್ನೇನಹಳ್ಳಿ, ಅಟ್ಟವಾರಹೊಸಳ್ಳಿ, ಮುದಿಗೆರೆ, ದುದ್ದ ಹಾಗೂ ಇತರೆ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ವಿರೂಪಾಕ್ಷೇಶ್ವರ ದೇವಾಲಯ: ಪ್ರಾಚೀನ ದೇವಸ್ಥಾನವಾದ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನಡೆಸಲಾಯಿತು. ಬೆಳಗ್ಗೆಯಿಂದ ರಾತ್ರಿಯವರೆಗೆ ಲಾಡು ಪ್ರಸಾದ ವಿತರಣೆ ಮಾಡಿದರು. ಶಿವರಾತ್ರಿ ಪ್ರಸಾದ ಸೇವಾ ಸಮಿತಿಯವರು ದೇವರಿಗೆ ವಿಶೇಷವಾಗಿ ಅಲಂಕಾರಗೊಳಿಸಿ ಪೂಜೆ ಸಲ್ಲಿಸಿದರು.


ಶ್ರೀಮಲ್ಲೇಶ್ವರಸ್ವಾಮಿಗೆ ವಿಶೇಷ ಪೂಜೆ
ನಗರದ ಮಲ್ಲೇಶ್ವರಸ್ವಾಮಿಗೆ ವಿಶೇಷ ಅಲಂಕಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವರ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದರು. ಸಾಕಷ್ಟು ಭಕ್ತರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


25 ಅಡಿ ಎತ್ತರದ ಶಿವಲಿಂಗ
ಶಿವರಾತ್ರಿಯ ಅಂಗವಾಗಿ ವಿಭಿನ್ನವಾಗಿ 25 ಅಡಿ ಎತ್ತರದ ಕೃತಕ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ನಗರದ ಕಸಾಪ ಭವನದ ಆವರಣದಲ್ಲಿ 25 ಅಡಿ ಎತ್ತರದ ಕೃತಕ ಶಿವಲಿಂಗ ಮತ್ತು ಶಿವನ ದರ್ಶನದ ಭಾಗ್ಯ ಮಾ.3 ರಿಂದ 12ರ ವರೆಗೂ ಸಿಗಲಿದೆ.
   ಜಗತ್ತಿನಲ್ಲಿ ಸತ್ಕಾರದ ಅರಿವು ಅನೇಕರಿಗೆ ಇಲ್ಲ. ಮಂಟಪದ ಒಳಗೆ ಕೆಲ ಸಮಯ ಕುಳಿತು ಭಕ್ತಿಯಿಂದ ಇರಲು ಅವಕಾಶ ಕಲ್ಪಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.