'ದುಡಿಯುವ ಮಾರ್ಗದಿಂದ ಸಾಮಾಜಿಕ ಪರಿವರ್ತನೆ'
ಬೇಲೂರು: ಸರ್ಕಾರ ಒಂದು ರುಪಾಯಿಗೆ ಅಕ್ಕಿ ನೀಡುವ ಕಾರ್ಯಕ್ರಮ ಸಾಮಾಜಿಕ ನ್ಯಾಯ, ಅದರೆ ಜನರಿಗೆ ದುಡಿಯಲು ಮಾರ್ಗ ಮಾಡಿದಾಗ ಅದು ಸಾಮಾಜಿಕ ಪರಿವರ್ತನೆಯಾಗುತ್ತದೆ ಎಂದು ಸ್ಪೂರ್ತಿ ಕಾಲೇಜು ಡಿಇಡ್ ಪ್ರಾಂಶುಪಾಲ ಎಂ.ಜೆ. ರತ್ನಾಕರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಬಹುಜನ ವಿದ್ಯಾರ್ಥಿ ಘಟಕ(ಬಿವಿಎಸ್)್ಹಮ್ಮಿಕೊಂಡಿದ್ದ ಮಹಾತ್ಮ ಜ್ಯೋತಿ ಬಾ ಫುಲೆ ಜನ್ಮದಿನದ ಉದ್ಘಾಟನೆ ನಡೆಸಿ ಮಾತನಾಡಿ, ಇಂದಿನ ರಾಜಕೀಯ ಪಕ್ಷಗಳಿಗೆ ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಪರಿವರ್ತನೆ ಅರಿವು ಇಲ್ಲದಿರುವುದು ದುರಂತ ಎಂದರು.
ಸಾಹಿತಿ ಟಿ.ಡಿ. ತಮ್ಮಣ್ಣಗೌಡ ಮಾತನಾಡಿ, ಜನರು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಓದುವ ಓದು ವೈಚಾರಿಕೆತೆಯಿಂದ ಕೂಡಿದಾಗ ಮಾತ್ರ ಓದಿಗೆ ಅರ್ಥ ಬರುತ್ತದೆ ಎಂದರು.
ಸವಿತಾ ಮಾತನಾಡಿ, ಸರ್ಕಾರಿ ಕ್ಷೇತ್ರದಲ್ಲಿನ ಉದ್ಯೋಗ ಅವಕಾಶಗಳು ಒಬಿಸಿ ಎಸ್‌ಸಿ ಎಸ್‌ಟಿ ಲಭ್ಯವಾಗಿಲ್ಲ, ಕಾರಣ ಪಟ್ಟಭದ್ರ ಹಿತಾ ಶಕ್ತಿಗಳು ಅಕ್ರಮಣ ಮಾಡಿಕೊಂಡಿವೆ. ಪ್ರಸಕ್ತ ದಿನ- ಮಾನದಲ್ಲಿ ಸರ್ಕಾರಿಗಿಂತ ಖಾಸಗಿ ಕ್ಷೇತ್ರದಲ್ಲಿ ಹೇರಳ ಉದ್ಯೋಗ ಅವಕಾಶವಿದ್ದು, ಸರ್ಕಾರ ಈ ವರ್ಗಗಳಿಗೆ ಸಮಾನ ಮೀಸಲಾತಿ ಸಿಗುವಂತೆ ಕ್ರಮ ವಹಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಪತ್ರಕರ್ತ ಹೆಬ್ಬಾಳು ಹಾಲಪ್ಪ, ಬಿವಿಎಸ್ ತಾಲೂಕು ಘಟಕದ ಅಧ್ಯಕ್ಷ ಪ್ರೇಮ್‌ಕುಮಾರ್ ಸಿದ್ದಾರ್ಥ, ಬಿವಿಎಸ್ ಜಿಲ್ಲಾಧ್ಯಕ್ಷ ಮಧು, ಸಂತೋಷ್‌ಕುಮಾರ್, ಯೋಗೀಶ್, ಶಶಿಧರ್‌ಮೌರ್ಯ, ಮಂಜು, ಹಸ್ಕೂರು ರಮೇಶ್, ವಕೀಲ ಪ್ರಕಾಶ್ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

