ಹಾಸನ

ವಿದ್ಯಾರ್ಥಿಗಳಿಂದ ವಾಸ್ತುಶಿಲ್ಪ ಕಲೆ ಅಧ್ಯಯನ

Published On :

ಹಾರನಹಳ್ಳಿ: ಹಾರನಹಳ್ಳಿ ಇಲ್ಲಿನ ಚನ್ನಕೇಶವ ಮತ್ತು ಸೋಮೇಶ್ವರ ದೇವಾಲಯಗಳಿಗೆ ಸಿ.ಇ. ಕಾಮತ್ ಕರಕುಶಲ ತರಬೇತಿ ಸಂಸ್ಥೆ ಮಿಯಾರ್ ಕಾರ್ಕಳ ವಿದ್ಯಾರ್ಥಿಗಳು ಭೇಟಿ ನೀಡಿ ವಾಸ್ತು ಶಿಲ್ಪಕಲಾ ಅಧ್ಯಯನಕ್ಕಾಗಿ ವೀಕ್ಷಣೆ ಮಾಡಿದರು.
  ಬೇಲೂರಿನ ಇತಿಹಾಸ ಸಂಶೋಧಕರಾದ ಶ್ರೀವತ್ಸ ವಟಿ ಉಪನ್ಯಾಸ ನೀಡಿ, ಕಲೆ, ಸಾಹಿತ್ಯ ಸಂಸ್ಕೃತಿಗೆ, ರಾಜಮಹಾರಾಜರ ಕೊಡುಗೆಗಳು ಅನನ್ಯ, ಹೊಯ್ಸಳ ಕಾಲದಲ್ಲಿ ನಿರ್ಮಿಸಿರುವ ದೇವಾಲಯಗಳು ಶಿಲ್ಪಕಲೆ, ಸಂಖ್ಯಾಶಾಸ್ತ್ರ, ಖಗೋಳಶಾಸ್ತ್ರ, ಆಗಮಶಾಸ್ತ್ರ ಹೀಗೆ ಎಲ್ಲ ಅಂಶಗಳನ್ನು ಅಳವಡಿಸಿಕೊಂಡು ದೇವಾಲಯಗಳನ್ನು ನಿರ್ಮಿಸಿದ್ದಾರೆ.
  ಶಿಲ್ಪಕಲಾ ಗುರು ಗುಣವಂತೇಶ್ವರ ಭಟ್ ಮಾತನಾಡಿ, ಸಿ.ವಿ. ಕಾಮತ್ ಕರಕುಶಲ ಸಂಸ್ಧೆ ವತಿಯಿಂದ ರಾಜ್ಯದ ನಾನ ಭಾಗಗಳಿಂದ ಅನೇಕ ಆಸಕ್ತ ವಿದ್ಯಾರ್ಥಿಗಳಿಗೆ ಶಿಲ್ಪಕೆತ್ತನೆ, ಮರಗಳ ಮೇಲೆ ಕಸೂತಿ ಕೆತ್ತನೆ, ಲೋಹಗಳ ಮೇಲೆ, ಚಿತ್ರಕಲೆ ಇವುಗಳ ವಿನ್ಯಾಸದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಕೆನರಾಬ್ಯಾಂಕ್ ಬರೀ ಹಣಕಾಸು ವಹಿವಾಟಿಗೆ ಸಿಮಿತವಾಗದೆ ನಮ್ಮ ಪ್ರಾಚೀನ ಕಲೆ ಉಳಿಯುವ ಉದ್ದೇಶದಿಂದ ಯುವಕರಿಗೆ ಈ ಸಂಸ್ಥೆ ವತಿಯಿಂದ ತರಬೇತಿ ನೀಡಲಾಗುತ್ತಿದೆ.
  75 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಇಲ್ಲಿ ತಯಾರಿಸಿದ ಕರಕುಶಲ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ. ವಿದ್ಯಾರ್ಥಿಗಳು ತಯಾರಿಸಿದ ಮಾಡೆಲ್ ಅಲಂಕಾರ ಕೆತ್ತನೆ ಮಾರಾಟವಾದ ವಸ್ತುಗಳಿಗೆ ಶೇ.25 ರಷ್ಟು ಹಣವನ್ನು ವಿದ್ಯಾರ್ಥಿಗಳಿಗೆ ಪೋತ್ಸಾಹಧನ ನೀಡಲಾಗುತ್ತದೆ ಎಂದರು.
  ಬೇಲೂರು, ಹಳೇಬೀಡು, ಜಾವಗಲ್, ಹಾರನಹಳ್ಳಿ, ಅರಸೀಕೆರೆಯಲ್ಲಿರುವ ಹೊಯ್ಸಳ ದೇವಾಲಯಗಳಲ್ಲಿ ಕೆತ್ತಿರುವ ನಯನ ಮನೋಹರವಾದ ಕಸೂತಿ ಕೆತ್ತನೆಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ನಮ್ಮ ಪಾರಂಪರಿಕ ಕಲೆಗೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.