ಇಂಗ್ಲಿಷ್ ಮೋಹದಲ್ಲಿ ಕನ್ನಡ ಮಾಯ
ಹಾಸನ: ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕನ್ನಡ ಭಾಷೆ ಮಾಯವಾಗುತ್ತಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ನಡೆದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಶಯ ನುಡಿಗಳನ್ನಾಡಿ, ಕನ್ನಡ ಭಾಷೆಯನ್ನು ಅಭ್ಯಸಿಸದೆ ಕೇವಲ ಸಾಂಸ್ಕೃತಿಕವಾಗಿ ಕಾಣಲಾಗುತ್ತಿದೆ. ಇಂಗ್ಲಿಷ್ ಭಾಷೆಯು ಬದುಕನ್ನು ಕಟ್ಟಿಕೊಡುತ್ತದೆ ಎಂಬ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಭಾಷೆಯಲ್ಲಿ ಕಲಿಸುವ ಮೂಲಕ ಕನ್ನಡವನ್ನು ಓದದ ರೀತಿಯಲ್ಲಿ ಮಾಡಿದ್ದಾರೆಂದು ವಿಷಾದಿಸಿದರು. ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕನ್ನಡ ಭಾಷೆಯು ಮಾಯವಾಗುತ್ತಿದೆ. ಮಕ್ಕಳು ಕನ್ನಡವನ್ನ ಓದುವಂತೆ ಮಾಡಬೇಕು, ಅದರಿಂದ ಉದ್ಯೋಗ ಮತ್ತು ಬದುಕನ್ನು ಕಟ್ಟಿಕೊಳ್ಳುವಂತೆ ಅವಕಾಶಗಳನ್ನು ಸರ್ಕಾರ ಮಾಡಬೇಕು. ಆ ರೀತಿ ಮಾಡಿದಾಗ ಮಾತ್ರ ಈ ರೀತಿಯ ಕನ್ನಡ ಸಮ್ಮೇಳನಗಳು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಜಿಲ್ಲೆಯ ಜನ ಜಾತ್ಯತೀತರಾಗಿದ್ದಾರೆ: ಹೇಮಾವತಿ ನೀರನ್ನು ಕುಡಿದಂತಹ ಜಿಲ್ಲೆಯ ಜನತೆಯು ಜಾತ್ಯತೀತವಾಗಿದ್ದಾರೆ. ಆದರೆ ಕಾವೇರಿ ನೀರನ್ನು ಕುಡಿಯುವಂತಹ ಮಂಡ್ಯದಲ್ಲಿ ಜಾತ್ಯತೀತ ವ್ಯವಸ್ಥೆ ಅಷ್ಟಾಗಿ ಕಂಡು ಬಂದಿಲ್ಲ. ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಒಂದು ರೀತಿಯ ಫಲಿತಾಂಶ ಬಂದರೆ, ಹಾನಸ ಜಿಲ್ಲೆಯಲ್ಲಿ ಬೇರೆ ರೀತಿಯ ಫಲಿತಾಂಶವನ್ನು ಜನರು ನೀಡುತ್ತಾರೆ ಎಂದರು.
ಹಲ್ಮಿಡಿ ಉತ್ಸವ ನಡೆಸುವ ಭರವಸೆ: ಜಿಲ್ಲಾ ಕಸಾಪ ವತಿಯವರು ಜಿಲ್ಲೆಯಲ್ಲಿ ಹೊಯ್ಸಳ ಉತ್ಸವಕ್ಕೆ ತಾಂತ್ರಿಕ ಕಾರಣಗಳು ಇರುವುದರಿಂದ ಹಲ್ಮಿಡಿ ಉತ್ಸವ ನಡೆಸಲು ಮನವಿ ಮಾಡಿದ್ದಾರೆ. ಅದಕ್ಕೆ ನಾನು ಹಲ್ಮಿಡಿ ಉತ್ಸವ ನಡೆಸಲು ಒಪ್ಪಿದ್ದು, ಈ ವೇದಿಕೆಯಲ್ಲಿ ಭರವಸೆಯನ್ನು ನೀಡುತ್ತಿದ್ದೇನೆ ಎಂದ ಅವರು, ರಾಜ್ಯ ಸರ್ಕಾರ ಕೇಂದ್ರ ಕಸಾಪ ಶತಮಾನ ಭವನ ನಿರ್ಮಾಣಕ್ಕೆ 5 ಕೋಟಿ ಹಣವನ್ನು ಮೀಸಲಿರಿಸಿದೆ. ಈ ಪೈಕಿ 3.5 ಕೋಟಿ ಹಣವನ್ನು ಶತಮಾನೋತ್ಸವ ಭವನ ನಿರ್ಮಾಣಕ್ಕೆ ಬಳಿಸಿಕೊಂಡು ಉಳಿಕೆ ಹಣವನ್ನು ಪರಿಷತ್ ನಾನಾ ಕಾರ್ಯಕ್ರಮಗಳಿಗೆ ಬಳಸುವ ಬಗ್ಗೆ ಚಿಂತನೆಯನ್ನು ನಡೆಸಲಾಗುತ್ತಿದೆ. ಈ ಶತಮಾನೋತ್ಸವ ಸಂಭ್ರಮದಲ್ಲಿ ಹಲ್ಮಿಡಿ ಉತ್ಸವವನ್ನು ನಡೆಸೋಣ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

