ಗೋಮಾಳ ಒತ್ತುವರಿ ಮಾಡದಂತೆ ಆಗ್ರಹ
ಆಲೂರು: ತಾಲೂಕಿನ ಕಸಬಾ ಹೋಬಳಿ ಬಸವಾಪುರದಲ್ಲಿ ಗೋಮಾಳವನ್ನು ಕೆಲವು ವ್ಯಕ್ತಿಗಳು ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು ಅದಕ್ಕೆ ಅವಕಾಶ ಕೊಡಬಾರದೆಂದು ಒತ್ತಾಯಿಸಿ ಶುಕ್ರವಾರ ಬಸವಾಪುರ ಹಾಗೂ ಹೊಸಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಶಾಸಕ ಎಚ್.ಕೆ. ಕುಮಾರಸ್ವಾಮಿ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಬಸವಾಪುರಕ್ಕೆ ಸೇರಿದ ಸರ್ವೆ ನಂ.49 ರಲ್ಲಿ 7.12 ಎಕರೆ ಸರ್ಕಾರಿ ಗೋಮಾಳವಿದ್ದು, ಅದನ್ನು ಕಳೆದ 50 ವರ್ಷಗಳಿಂದ ಗ್ರಾಮಸ್ಥರು ಸಾರ್ವಜನಿಕವಾಗಿ ಬಳಸುತ್ತಿದ್ದು, ಈ ಮಧ್ಯೆ ನಮ್ಮ ಗ್ರಾಮದವರೇ ಆದ ತಿಮ್ಮರಾಯ ಗೌಡ, ನಾಗರಾಜ, ರಾಮಚಂದ್ರ, ದಾಸೇಗೌಡ, ರಂಗೇಗೌಡ ಎಂಬುವರು ಅಕ್ರಮವಾಗಿ ಸ್ವಾಧೀನ ಹೊಂದಲು ಪ್ರಯತ್ನಿಸುತ್ತಿದ್ದು, ಒಂದು ವೇಳೆ ಸದರಿಯವರು ಸ್ವಾಧೀನ ಹೊಂದಿದ್ದಲ್ಲಿ ನಮ್ಮ ರಾಸುಗಳಿಗೆ ಮೇವು ಇಲ್ಲದಂತಾಗುತ್ತದೆ. ಮಕ್ಕಳಿಗೆ ಆಟದ ಮೈದಾನ ಇಲ್ಲದಂತಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ತಾವುಗಳು ಯಾರಿಗೂ ಈ ಗೋಮಾಳವನ್ನು ಖಾತೆ ಮಾಡದಂತೆ ತಡೆದು ಸಾರ್ವಜನಿಕರಿಗೆ ಗೋಮಾಳವನ್ನು ಉಳಿಸಿಕೊಡಬೇಕೆಂದು ತಹಸೀಲ್ದಾರ್ಗೂ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್, ಶಾಸಕರು ಗೋಮಾಳ ಸಾರ್ವಜನಿಕರ ಅನುಕೂಲಕ್ಕಾಗಿ ಇದ್ದು, ಇದನ್ನು ಖಾತೆ ಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಒಂದು ವೇಳೆ ಅಕ್ರಮವಾಗಿ ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಈ ಸಂಬಂಧವಾಗಿ ಸೂಕ್ತ ಕ್ರಮಕೈಗೊಳ್ಳಲು ಉಪವಿಭಾಗಾಧಿಕಾರಿ, ತಹಸೀಲ್ದಾರ್ರವರಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.
ಮಮತ, ಯಶೋಧಮ್ಮ, ರತ್ನಮ್ಮ, ಭಾಗ್ಯ, ರೀನಾ, ಜಯಲಕ್ಷ್ಮಿ, ಹೆಚ್.ಟಿ. ಮಲ್ಲೇಶ, ಪದ್ಮ, ಮಂಜೇಗೌಡ, ಸರಸ್ವತಿ, ರೂಪ, ಶಿವಮ್ಮ, ಕವಿತ, ಜಯಮ್ಮ, ಸುಶೀಲ, ನಾಗಮಣಿ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

