ಹೊಯ್ಸಳೋತ್ಸವದ ವೈಭವ ಮರು ಕಳಿಸಲಿ
ಹಾಸನ: ನಾಡಿನಲ್ಲಿ ನಡೆಯುವ ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಕದಂಬ ಉತ್ಸವ ಮುಂತಾದವುಗಳ ಮಾದರಿಯಲ್ಲೇ ಹಾಸನದಲ್ಲಿ ಹೊಯ್ಸಳ ಉತ್ಸವವು ರೂಢಿಗೆ ಬಂತು. ಆರಂಭದ ವರ್ಷಗಳಲ್ಲಿ ಅಪರಿಮಿತ ಉತ್ಸಾಹದಿಂದ ಸಂಭ್ರಮಿಸುತ್ತಿದ್ದ ಹೊಯ್ಸಳ ಉತ್ಸವವು ಕಳೆದ ಹತ್ತಾರು ವರ್ಷಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಸಮ್ಮೇಳನಾಧ್ಯಕ್ಷ ಡಾ. ನಲ್ಲೂರು ಪ್ರಸಾದ್ ವಿಷಾದಿಸಿದರು. ಈ ಬಗ್ಗೆ ರಾಜಕಾರಣಿಗಳು ಚಕಾರ ಎತ್ತುತ್ತಿಲ್ಲ ಮತ್ತೆ ಹೊಯ್ಸಳ ಉತ್ಸವ ಹಿಂದಿನ ವೈಭವದೊಂದಿಗೆ ಮರುಕಳಿಸಬೇಕಿದೆ. ಇದಕ್ಕೆ ನಾವೆಲ್ಲಾ ಒಂದುಗೂಡಬೇಕಿದೆ ಎಂದು ಶುಕ್ರವಾರ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡಿದ ಡಾ. ನಲ್ಲೂರು ಪ್ರಸಾದ್ ಆಗ್ರಹಿಸಿದರು. ಹಾಸನ ಜಿಲ್ಲೆಯ ಕಲಾವಿದರು ಇಂದು ಅಸಹಾಯಕ ಸ್ಥಿತಿಯಲ್ಲಿ ಇದ್ದಾರೆ. ಅವರ ಕಲೆಯನ್ನು ಕೇಳುವವರಿಲ್ಲದಂತಾಗಿದೆ. ಪ್ರೋತ್ಸಾಹವಿಲ್ಲದೆ ಸೊರಗುತ್ತಿರುವ ಕಲೆಗಳನ್ನು ಮತ್ತೆ ಪುನರುತ್ಥಾನಗೊಳಿಸಬೇಕಾಗಿದೆ. ಆನೆ, ಚಿರತೆ ಮುಂತಾದ ಕಾಡು ಪ್ರಾಣಿಗಳ ಉಪಟಳ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ರೈತರ ಬೆಳೆ ನಾಶವಾಗಿ ಅವರ ಬದುಕು ಸಂಕಷ್ಟಕ್ಕೀಡಾಗಿದೆ. ಸರ್ಕಾರ ಈ ತೊಂದರೆಯನ್ನು ಹೋಗಲಾಡಿಸಿ ಗ್ರಾಮೀಣ ಜನರು ನೆಮ್ಮದಿಯಿಂದ ಬದಕಲು ಸಹಕಾರಿ ಎಂದರು. ಅಸ್ಪೃಶ್ಯತೆಯ ಮಹಾಪಿಡುಗನ್ನು ಹೋಗಲಾಡಿಸಿ ಜಾತಿ ಕಲಹವನ್ನು ಬಿಟ್ಟು ಮನುಷ್ಯ ಜಾತಿ ತಾನೊಂದೆ ವಲಂ ಎಂಬಂತೆ, ನಮ್ಮ ಜನರು ಬದುಕಿ ಬಾಳಬೇಕಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

